ದಿನದ ಸುದ್ದಿ
ಆರು ವರ್ಷ ಪೂರೈಸಿದ ಆನ್ಲೈನ್ ಮೂಲಕ ಕೃಷಿ ಉತ್ಪನ್ನ ಮಾರಾಟ ಮಾಡುವ ಇ-ನ್ಯಾಮ್ ಪೋರ್ಟಲ್
ಸುದ್ದಿದಿನ ಡೆಸ್ಕ್ : ಅಖಿಲ ಭಾರತ ವಿದ್ಯುನ್ಮಾನ ವ್ಯಾಪಾರ ಪೋರ್ಟಲ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ- ಇ-ನ್ಯಾಮ್ ಇಂದು ಆರು ವರ್ಷ ಪೂರ್ಣಗೊಳಿಸುತ್ತಿದೆ.
ಮಹತ್ವಾಕಾಂಕ್ಷೆಯ ಕಾರ್ಯಕ್ರಮದಡಿ ನಾನಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಭೌತಿಕ ಸಗಟು ಮಂಡಿಗಳು ಮತ್ತು ಮಾರುಕಟ್ಟೆಗಳನ್ನು ಒಗ್ಗೂಡಿಸುವುದಲ್ಲದೆ, ಅಲ್ಲಿ ಕೃಷಿ ಉತ್ಪನ್ನಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡಲು ಅನುವು ಮಾಡಿಕೊಡಲಾಗುತ್ತಿದೆ.
2016ರ ಇದೇ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇ-ನ್ಯಾಮ್ ಗೆ ಚಾಲನೆ ನೀಡಿದ್ದರು. ಕೇಂದ್ರ ಸರ್ಕಾರದ ಸಂಪೂರ್ಣ ನೆರವಿನ ಈ ಯೋಜನೆಯನ್ನು ಸಣ್ಣ ರೈತರ ಕೃಷಿ ವ್ಯಾಪಾರ ಒಕ್ಕೂಟ ನಿರ್ವಹಿಸುತ್ತಿದೆ.
ಇಲ್ಲಿ ರೈತರಿಗೆ ಆನ್ ಲೈನ್ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ತಮ ಅವಕಾಶವಿದೆ ಮತ್ತು ಆ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ದರ ಸಿಗಲಿದೆ. ರೈತರು ಉಚಿತವಾಗಿ ಇ-ನ್ಯಾಮ್ ನಡಿ ನೋಂದಣಿ ಮಾಡಿಕೊಳ್ಳಬಹುದು ಮತ್ತು ಮಾರಾಟ ಮಾಡಬಹುದು.
18ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ1000 ಮಂಡಿಗಳು ಇದರಡಿ ಸಂಯೋಜನೆಗೊಂಡಿದ್ದು, 1ಕೋಟಿ 72ಲಕ್ಷಕ್ಕೂ ಅಧಿಕ ರೈತರು ಈವರೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈವೆರೆಗೆ 1ಲಕ್ಷದ 82ಸಾವಿರ ಕೋಟಿ ಮೌಲ್ಯದ ಉತ್ಪನ್ನಗಳು ಇ-ನ್ಯಾಮ್ ವೇದಿಕೆಯಲ್ಲಿ ಮಾರಾಟವಾಗಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243