ದಿನದ ಸುದ್ದಿ
ಹೊಲದ ಬದುವಿನಲ್ಲಿ ಅನಾಥ ಮಗು ಪತ್ತೆ
ಸುದ್ದಿದಿನ,ಧಾರವಾಡ : ಕೋಳಿವಾಡ ಗ್ರಾಮದ ರೊಟ್ಟಿಗವಾಡ ಕಡೆಗೆ ಹೋಗುವ ಹೊಲದ ಬದುವಿನಲ್ಲಿ ಯಲ್ಲಪ್ಪ ಮತ್ತು ರೇಣುಕಾ ಕಾಳಿ ದಂಪತಿಗೆ ಆಗ ತಾನೇ ಜನಿಸಿದ ಗಂಡು ಮಗು ದೊರೆತಿದ್ದು, ಮಗುವಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಿರುತ್ತಾರೆ. ಎಪ್ರೀಲ್ 28 ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರ ಮೌಖಿಕ ಆದೇಶದನ್ವಯ ಮಗುವನ್ನು ಅಮೂಲ್ಯ (ಜಿ) ಶಿಶುಗೃಹ ಸಂಸ್ಥೆಗೆ ತಾತ್ಕಾಲಿಕ ಪಾಲನೆ-ಪೋಷಣೆಗಾಗಿ ದಾಖಲಿಸಿ, ಮಗುವಿಗೆ ಸುರಾಗ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರು ನಾಮಕರಣ ಮಾಡಿರುತ್ತಾರೆ.
ಮಗುವಿನ ಪಾಲಕರು, ಪೋಷಕರ ಕುರಿತು ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಆದ್ದರಿಂದ ಮಗುವಿನ ಪಾಲಕರು, ಪೋಷಕರ ಕಾನೂನು ರೀತಿ ಹಕ್ಕುಳ್ಳವರು ಎಲ್ಲಿದ್ದರೂ 2 ತಿಂಗಳ ಅವಧಿ ಮುಗಿಯುವುದರ ಒಳಗಾಗಿ ಹುಬ್ಬಳ್ಳಿಯ ಅಮೂಲ್ಯ(ಜಿ) ಶಿಶುಗೃಹದ ಅಧೀಕ್ಷಕರನ್ನು ಅಥವಾ ಹುಬ್ಬಳ್ಳಿ ಗ್ರಾಮೀಣ ಪೊಲೀಸ ಠಾಣೆಯನ್ನು ಸಂಪರ್ಕಿಸಬಹುದು. ಒಂದು ವೇಳೆ ಯಾರೂ ವಾರಸುದಾರರು ಬರದಿದ್ದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243