ದಿನದ ಸುದ್ದಿ
ನಿರೂಪಕ ಚಂದನ್ ಪತ್ನಿ ಮಗುಕೊಂದು, ಆತ್ಮಹತ್ಯೆಗೆ ಯತ್ನ
ಸುದ್ದಿದಿನ, ಬೆಂಗಳೂರು : ನಿರೂಪಕ ಚಂದನ್ ಅಫಘಾತದಲ್ಲಿ ದುರ್ಮರಣ ಹಿನ್ನೆಲೆ, ಚಂದನ್ ಪತ್ನಿ ವೀಣಾ (38) ಗಂಡನ ಸಾವಿನಿಂದ ಮನನೊಂದು, ತನ್ನ ಮಗುವಿನ ಕತ್ತುಕೊಯ್ದು ಕೊಲೆಮಾಡಿ, ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಸೊಮೇಶ್ವರ ಬಡಾವಣೆಯಲ್ಲಿ ಮನೆಯಲ್ಲಿ ಆಸಿಡ್ ಕುಡಿದ
ವೀಣಾ ಸ್ಥೀತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ವತ್ರೆಗೆ ರವಾನೆಮಾಡಲಾಗಿದೆ.
ಕಳೆದ 24 ನೇ ತಾರಿಕು ದಾವಣಗೆರೆ ಬಳಿ ಕಾರು ಅಪಘಾತದಲ್ಲಿ ಸಾವನ್ನಪಿದ್ದ ನಿರೂಪಕ ಚಂದನ್ ಸಾವನ್ನಪ್ಪಿದ್ದರು.
ಸ್ಥಳಕ್ಕೆ ದೊಡ್ಡಬಳ್ಖಾಪುರ ಪೊಲೀಸರ ಬೇಟಿ ಪರಿಶೀಲನೆ ನಡೆಸಿದ್ದು,ಪ್ರಕರಣ ದಾಖಲಿಸಿದ್ದಾರೆ.