ದಿನದ ಸುದ್ದಿ

ದಾವಣಗೆರೆ | ಅಂಗನವಾಡಿ ಶಿಕ್ಷಕಿಯರ ಹೋರಾಟ : ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ‌ ಲತಾ ಮಲ್ಲಿಕಾರ್ಜುನ್ ಬೆಂಬಲ

Published

on

ಸುದ್ದಿದಿನ,ದಾವಣಗೆರೆ : ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ,ನಿಮ್ಮ ಸಹೋದರಿಯಾಗಿ ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ,ನಿಮ್ಮ ಸಮಸ್ಯೆ ಏನಿದೆಯೋ ಅದನ್ನ ನಮ್ಮ ಪಕ್ಷದ ಅಧ್ಯಕ್ಷರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ,ಶಿಕ್ಷಣ ಮಂತ್ರಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿ ಮತ್ತು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರು,ಕಾಂಗ್ರೆಸ್ ಶಾಸಕಾಂಗದ ಪಕ್ಷದ ನಾಯಕರೂ,ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ಧರಾಮಯ್ಯನವರ ಗಮನಕ್ಕೆ ತಂದು ತಮ್ಮ ಪರವಾಗಿ ಒತ್ತಡವನ್ನ ಹಾಕುತ್ತೇನೆಂದು ಅಂಗನವಾಡಿ ಶಿಕ್ಷಕಿಯರ ಸಾಂಕೇತಿಕ ಹೋರಾಟಕ್ಕೆ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಮಾನ್ಯ ಎಂಪಿ ಲತಾ ಮಲ್ಲಿಕಾರ್ಜುನ ನೈತಿಕ ಬೆಂಬಲ ವ್ಯಕ್ತಪಡಿಸಿ ಶನಿವಾರ ಭರವಸೆ ನೀಡಿದರು.

ಸರ್ಕಾರಿ ಶಾಲೆಗಳಲ್ಲಿ ಎಲ್. ಕೆ. ಜಿ, ಯು.ಕೆ.ಜಿ ತರಗತಿಗಳನ್ನು ಪ್ರಾರಂಭ ಮಾಡುವುದರ ವಿರುದ್ಧವಾಗಿ ಅಂಗನವಾಡಿ ಶಿಕ್ಷಕರು ನಮ್ಮ ಶಾಲೆಗಳಲ್ಲೇ ಆ ತರಗತಿಗಳನ್ನು ನಡೆಸಲು ಅವಕಾಶ ಕೊಡ್ಬೇಕು ಅನ್ನುವ ಹಿನ್ನೆಲೆಯಲ್ಲಿ ಕೈಗೊಂಡಿರುವ ಈ ಹೋರಾಟಕ್ಕೆ ಅವರು ಬೆಂಬಲ ‌ಸೂಚಿಸಿದರು.

ಸಭೆಯಲ್ಲಿ ಮಾಜಿ ಪುರಸಭಾ ಅಧ್ಯಕ್ಷರು ಹಾಲಿ ಪುರಸಭಾ ಸದಸ್ಯರು,ವಕೀಲರೂ ಆದ ಅಬ್ದುಲ್ ರಹಿಮಾನ್ ಸಾಹೇಬ್ ರವರುಕಾಂಗ್ರೆಸ್ ಪಕ್ಷದ ಕಾನೂನು ವಿಭಾಗದ ಅಧ್ಯಕ್ಷರು ಹಾಲಿ ಪುರಸಭಾ ಸದಸ್ಯರೂ ಆಗಿರುವ ವೆಂಕಟೇಶ್ ವಕೀಲರು, ಪುರಸಭಾ ಸದಸ್ಯರಾದ ಚಿಕ್ಕೇರಿ ಬಸಪ್ಪ, ಮಾಜಿ ತಾಪಂ ಸದಸ್ಯರಾದ ಪಿ.ಜಯಲಕ್ಷ್ಮಿ, ಮಾಜಿ ಪುರಸಭಾ ಸದಸ್ಯರಾದ ಮಂಜುಳಾ ಗುರುಮೂರ್ತಿ, ರವಿ ಯುವಶಕ್ತಿ ಪಡೆ ಅಧ್ಯಕ್ಷ ಉದಯಶಂಕರ,ಕಾರ್ಯದರ್ಶಿ ಬಸವರಾಜ,ಜೀಷನ್,ಸಮಿವುಲ್ಲಾ ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version