ದಿನದ ಸುದ್ದಿ
ದಾವಣಗೆರೆ | ಅಂಜುಂ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ
ಸುದ್ದಿದಿನ, ದಾವಣಗೆರೆ: ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಹೊದಗಿಸಿಕೊಟ್ಟರೆ ಅವರಲ್ಲಿ ಅಡಕವಾಗಿರುವ ಪ್ರತಿಭೆಗಳು ಹೊರಬರುತ್ತವೆ ಎಂದು ದಾವಣಗೆರೆ ತಾ ದಕ್ಷಿಣ ವಲಯದ ಬಿ.ಇ.ಓ.ಆದ ಶ್ರೀ ನಿರಂಜನ್ ಮೂರ್ತಿ ಅವರು ಅಭಿಪ್ರಾಯಪಟ್ಟರು.
ಅವರು ಅಂಜುಂ ಪ್ರಾಥಮಿಕ ಮತ್ತು ಪ್ರೌಢ ಶಾಲೆ ( ಕನ್ನಡ ಮತ್ತು ಉರ್ದು ಮಾದ್ಯಮ) ಯವರು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅಂಜುಂ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಇಂಗ್ಲಿಷ್ ಮಾದ್ಯಮದ ವಸ್ತು ಪ್ರದರ್ಶನವನ್ನು ಅಂಜುಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಮೊಹಮ್ಮದ್ ಉಮರ್ ಹೆಚ್.ಜೆ. ಅವರು ಉದ್ಘಾಟಿಸಿ ಮಕ್ಕಳ ಸರ್ವೋತ್ತಮವಾದ ಬೆಳವಣಿಗೆಗೆ ಸಹಾಕಾರಿಯಾಗುವ ಯಾವುದೇ ಕಾರ್ಯಕ್ರಮಗಳಿಗೆ ತುಂಬು ಹೃದಯದ ಸಹಾಕಾರವನ್ನು ಸಂಸ್ಥೆಯ ಪರವಾಗಿ ನೀಡಲಾಗುವುದು ಎಂದು ಹೇಳಿದರು.
ಕನ್ನಡ ಮತ್ತು ಉರ್ದು ಮಾದ್ಯಮ ವಿದ್ಯಾರ್ಥಿಗಳಿಂದ ಒಟ್ಟು 50 ಮತ್ತು ಇಂಗ್ಲಿಷ್ ಮಾದ್ಯಮದ ವಿದ್ಯಾರ್ಥಿಗಳಿಂದ ಒಟ್ಟು 50 ವಿಜ್ಞಾನದ ಮಾದರಿಗಳನ್ನು ತಯಾರಿಸಲಾಗಿತ್ತು. ಈ ವಿಜ್ಞಾನ ಪ್ರದರ್ಶನವನ್ನು ಸಾವಿರಾರು ಪೋಷಕರು,ವಿದ್ಯಾರ್ಥಿಗಳು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಇವರಷ್ಟೇ ಅಲ್ಲದೇ ಸುತ್ತಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳೂ ಪ್ರದರ್ಶನವನ್ನು ವೀಕ್ಷಿಸಿ, ಸಂತೋಷವನ್ನು ಪಟ್ಟರು. ಕೋವಿಡ್ ಕಾರಣದಿಂದ ಹೆಚ್ಚು ಸಮಯ ಮನೆಯಲ್ಲಿಯೇ ಕಳೆದ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿತ್ತು. ಹಿಡೀ ವಸ್ತು ಪ್ರದರ್ಶನದಲ್ಲಿ ಎಳೆಯ ಮಕ್ಕಳು ಜಾತ್ರೆಯಲ್ಲಿ ಓಡಾಡುವ ರೀತಿ ಓಡಾಡಿ ಸಂಭ್ರಮ ಪಟ್ಟರು.
ಪೋಷಕರೂ ಭೇಟಿ ನೀಡಿ ತಮ್ಮ ಮಕ್ಕಳ ಮಾದರಿಗಳನ್ನು ವೀಕ್ಷಿಸಿದರು. ಅಲ್ಲದೇ ಈ ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಿ ಮಾದರಿಗಳನ್ನು ಶ್ರೀ ಲಕ್ಷ್ಮಣ್ ಸಹಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ ಹಿರೇಬಿದ್ರಿ ಮತ್ತು ಶ್ರೀಮತಿ ದಿಲ್‌ಶಾದ್ ಸಹಶಿಕ್ಷಕಿ, ಬಾಲಕರ ಸರ್ಕಾರಿ ಪ್ರೌಢ ಶಾಲೆ ಹೈಸ್ಕೂಲ್ ಮೈದಾನ ದಾವಣಗೆರೆ ಇವರುಗಳು ತೀರ್ಪುಗಾರಾಗಿ ಭಾಗವಹಿಸಿ ಉತ್ತಮವಾದ ತೀರ್ಪುನ್ನು ನೀಡಿದರು.
ಆಂಜುಂ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಶ್ರೀ ಜಾವೀದ್ ಅಹಮದ್ ಕೆ., ಅಂಜುಂ ಪ್ರಥಮ ದರ್ಜೆ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಶ್ರೀ ಲತೀಫ್ ಎನ್.ಎ. ಮತ್ತು ಅಂಜುಂ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಿಯಾಜ್ ಅಹಮದ್ ಎಸ್. ರವರು ವಸ್ತು ಪ್ರದರ್ಶನವನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಅಲ್ಲದೇ ಪ್ರೌಢಶಾಲಾ ಮುಖ್ಯೋಪಾದ್ಯಯರಾದ ಶ್ರೀ ಕರೀಂ ಉಲ್ಲಾ ಪಿ. ಹಾಗೂ ಶ್ರೀಮತಿ ಮೀರಾಂ ಬೀ ಎಸ್.. ಪ್ರಾಥಮಿಕ ಶಾಲೆಗಳ ಮುಖ್ಯೋಪಾದ್ಯಯರಾದ ಶ್ರೀ ಅಫ್ರೋಜ್ ಖಾನ್, ಶ್ರೀಮತಿ ಸಭೀಹಾ ಖಾತೂನ್ ರವರೂ ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243