ದಿನದ ಸುದ್ದಿ

ಭಾರತೀಯ ವಾಯು ಸೇನೆಗೆ 8 ಅಪಾಚಿ ಹೆಲಿಕಾಪ್ಟರ್ ಸೇರ್ಪಡೆ..!

Published

on

ಸುದ್ದಿದಿನ,ದೆಹಲಿ: ಭಾರತೀಯ ವಾಯುಸೇನೆಗೆ ಇಂದು 8 ಅಪಾಚಿ ಹೆಲಿಕಾಪ್ಟರ್ ಗಳು ಸೇರ್ಪಡೆಯಾಗಲಿವೆ. ಅಮೆರಿಕಾ ನಿರ್ಮಿತ ಎಹೆಚ್ – 64ಇ ಚಾಪರ್ ಗಳನ್ನು ಪಂಜಾಬ್ ನಲ್ಲಿರುವ ಪಠಾಣ್ ಕೋಟ್ ವಾಯುನೆಲೆಯಲ್ಲಿ ಹಸ್ತಾಂತರ ಮಾಡಲಾಗುವುದು.

ಅಮೆರಿಕದ ಪ್ರತಿಷ್ಠಿತ ವಿಮಾನ ಸಂಸ್ಥೆ ಬೋಯಿಂಗ್ ನಿರ್ಮಾಣ ಮಾಡಿರುವ ಬಹುಮುಖಿ ಯುದ್ಧ ಕೌಶಲ್ಯ ಹೊಂದಿರುವ ಅಪಾಚಿ ಹೆಲಿಕಾಪ್ಟರ್ ಗಳು ವಿಶ್ವದಲ್ಲೇ ನಂಬರ್ ಒನ್ ದಾಳಿ ಸಾಮರ್ಥ್ಯ ಹೊಂದಿವೆ. ಬೋಯಿಂಗ್ ನಿರ್ಮಾಣ ಮಾಡಿರುವ ಆಧುನಿಕ ತಂತ್ರಜ್ಞಾನದ ಬಹುಮುಖಿ ಯುದ್ಧ ಕೌಶಲ್ಯ ಹೊಂದಿರುವ ಅಪಾಚಿ ಚಾಪರ್ 30 ಎಂಎಂ ಮಷಿನ್ ಗನ್ ಏಕಕಾಲಕ್ಕೆ 1,200 ಬಾರಿ ಫೈರಿಂಗ್ ಮಾಡುವ ಸಾಮರ್ಥ್ಯ ಹೊಂದಿವೆ.

ಶತ್ರು ನೆಲೆಯನ್ನು ಗುರಿಯಿಟ್ಟು ದಾಳಿ ನಡೆಸಬಲ್ಲ ಸಾಮರ್ಥ್ಯ, ಒಂದು ಗಂಟೆಗೆ 150 ನಾಟಿಕಲ್ ಮೈಲು ಪ್ರಯಾಣಿಸುವ ಶಕ್ತಿ ಹೊಂದಿವೆ. ವಿಶ್ವದಲ್ಲೇ ನಂಬರ್ ಒನ್ ದಾಳಿ ಸಾಮರ್ಥ್ಯ ಹೊಂದಿರುವ ಅಪಾಚಿ ಪ್ರತಿಕೂಲ ವಾತಾವರಣದಲ್ಲೂ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version