ಅಸಾಮಾನ್ಯಳು

ಅರ್ಪಣ ‘ಆರಾಧನ’ಕ್ಕೆ 10ನೇ ವಾರ್ಷಿಕೋತ್ಸವದ ಸಂಭ್ರಮ.!

Published

on

  • ಇದೇ ಆಗಸ್ಟ್ 11 ಆರಾಧನ ಟ್ರಸ್ಟ್ ನ 10 ನೇ ವಾರ್ಷಿಕೋತ್ಸವದ ದಿನ ಈ ಎಲ್ಲಾ ಮಹಿಳೆಯರು ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಇನ್ನೂ ಮಹಿಳೆಯರ ಈ ಆಸಕ್ತಿಯನ್ನು ಮನಗಂಡ ಅಪರ್ಣರವರು ಸದ್ಯ ಹನುಮಂತನಗರದಲ್ಲಿ ತಮ್ಮ‌ ನೃತ್ಯ ಶಾಲೆಯ ಇನ್ನೊಂದು ಶಾಖೆಯನ್ನು ತೆರೆದಿದ್ದಾರೆ. ಆ ಮೂಲಕ ‌ಕಲೆ ಮತ್ತು ಕಲಾಸಕ್ತರನ್ನು ಒಂದು ಗೂಡಿಸುವ ಪ್ರಯತ್ನ ಮಾಡ್ತಿದ್ದಾರೆ.

ಲ್ಲರೊಳಗೊಂದು ಕಲೆ ಇರುತ್ತದೆ, ಕಾಲೇಜು ದಿನಗಳು ಮುಗಿದ ನಂತರ ಕೆಲಸ, ಆ ಒಂದು ಅನಿವಾರ್ಯತೆ ಅದನ್ನು ನನ್ನಿಂದ ದೂರ ಮಾಡಿಬಿಡುತ್ತೆ, ಕೆಲವರು ಅದೆಲ್ಲವನ್ನೂ ಮೀರಿ ತಮ್ಮ ಪ್ರತಿಭೆಯನ್ನ ಉಳಿಸಿಕೊಂಡು ಹೋಗುತ್ತಾರೆ, ಕೆಲವರು
ಅದನ್ನು ಮರೆತು ಬಿಡುತ್ತಾರೆ, ಆದ್ರೆ ನಿಜವಾಗಲೂ ಅದರ ಪ್ರೀತಿ ಇರುವವರು ಅದರಲ್ಲಿ ಬದುಕನ್ನು ಕಂಡುಕೊಳ್ಳುತ್ತಾರೆ. ಅಪರ್ಣಾ ಆನಂದ್ ಉತ್ತಮ ಉದಾಹರಣೆ.

ಹಾಡುಗಾರಿಕೆ ಅದು ಆತ್ಮ ತೃಪ್ತಿ

ನಾವು ಮಾಡೋ ಕೆಲಸ ಬಗ್ಗೆ ನಮಗೆ ಆತ್ಮ ತೃಪ್ತಿ ಇದ್ದಾಗಷ್ಟೇ ಅಲ್ಲ… ಯಶಸ್ಸು ಸಾಧಿಸೋದಕ್ಕೆ ಸಾಧ್ಯ. ಇದನ್ನು ಅರಿತುಕೊಂಡಅಪರ್ಣಾ ತಮಗೆ ಆತ್ಮ ಸೃಷ್ಟಿ ನೀಡುವ ಹಾಡುಗಾರಿಕೆ ಮತ್ತು ನೃತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ, ಇವತ್ತಿನ ಸಮುದಾಯ ಡಿಗ್ರಿ ಮುಗಿಸುತ್ತಲೇ ಸಂಬಳದ ಕಡೆಗೆ ಜಾರುತ್ತಾರೆ, ಆದಕ್ಕಾಗಿಯೇ ಸಾಕಷ್ಟು ಕೋರ್ಸ್ ಗಳನ್ನು ಮಾಡಿಕೊಂಡು ಮುಂದುವರೆಯುತ್ತಾರೆ, ಈ ಹಂತದಲ್ಲೇ ತಮ್ಮೊಳಗಿರುವ ಒಬ್ಬ ಹಾಡುಗಾರ , ನೃತ್ಯ, ಕ್ರೀಡಾ ಪಟು ವನ್ನು ಕಳೆದುಕೊಳ್ಳುತ್ತಾರೆ, ಆದ್ರೆ
ಆ ಅವರ ಹಾದಿ ಮಾತ್ರ ಭಿನ್ನ.

ಬಾಲ್ಯ ಬರೆದಿತ್ತು ಡೆಸ್ಟಿನಿ

ಹಾಡು ಮತ್ತು ನೃತ್ಯವನ್ನು ಜೀವವೆಂದುಕೊಂಡಿದ್ಮ ಹುಡುಗಿ ಅಪರ್ಣ, ಅದಕ್ಕಾಗಿ ಯನ್ನು 5ನೇ ವಯಸ್ಸಿನಲ್ಲಿಯೇ ಹಾಡುಗಾರಿಕೆ ಆರಂಭಿಸಿದರು. 7ನೇ ತರಗತಿ ಯಲ್ಲಿದ್ದಾಗ ಮೊದಲ ಬಾರಿಗೆ ವೇದಿಕೆ ಹತ್ತಿದರು. ಆ ನಂತರ ನೃತ್ಯವನ್ನು ಜೊತೆಜೊತೆಯಲೆ ಅಭ್ಯಾಸ ಮಾಡಿದರು. ಮೂಲತಃ ಮೈಸೂರಿನವರಾದ ಅಪರ್ಣಾ ಅವರ ಕಲೆಗೆ ಕಾಲೇಜಿನಲ್ಲೂ ಒಳ್ಳೆಯ ಪ್ರೋತ್ಸಾಹ ಸಿಕ್ಕಿತು. ಕಾಲೇಜು ದಿನಗಳಲ್ಲಿ, ಸಿ್ಖಕ್ಕ ಈ ಪ್ರೋತ್ಸಾಹಕ್ಕೆ, ಭರತನಾಟ್ಯದಲ್ಲೇ ಎಂ.ಎ ಮುಗಿಸಿದರು. ಈ ಹಂತದಲ್ಲಿ ಸಾಕಷ್ಟು ಸಂಗೀತ ಮತ್ತು ನೃತ್ಯ
ಕಛೇರಿಯನ್ನು ನೀಡುತ್ತಿದ್ದರು. ತಾವು ಸಿರೀಕ್ಷಿಸದಷ್ಟು ಸಂಭಾವನೆ ಸಿಗದಿದ್ದರೂ ಕೆಡಿಸಿಕೊಳ್ಳದಿದರೂ, ಆ ಹಣ ಕೀರ್ತಿ ಗೌರವ ಅವರನ್ನು ಹಿಂಬಾಲಿಸಿತು.

ಆರಾಧನ

ಆರಾಧನದ ಆರಾಧನೆ

ತಮ್ಮ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಬಂದ ಅಪರ್ಣ ಎದೆ ತುಂಬಿ ಹಾಡುವೆನು ಸ್ಪರ್ಧೆಯಲ್ಲಿ ಹೆಸರುಗಳಿಸಿದರು. ನಂತರ
ಬೆಂಗಳೂರಿನಲ್ಲಿಯೇ ತಮ್ಮ ಪತಿ ಆನಂದ್ ಜೊತೆಗೆ ನೆಲೆ ನಿಂತ ಅಪರ್ಣಾ ಗೆ ಸುಮ್ಮನೆ ಮನೆಯಲ್ಲಿ ಕೂರುವುದು ಇಷ್ಟವಿರಲಿಲ್ಲ. ಬದುಕಿನ ಎಲ್ಲ ಹಂತದಂತೆ ಮದುವೆ, ಮಗುವಿನ ಜೊತೆ ಕಲೆಯನ್ನು ಆರಾಧಿಸೋ ತವಕ ಮುಂದುವರೆದಿತ್ತು. ಇದೇ ಇಚ್ಚಾಶಕ್ತಿಯನ್ನು ಪ್ರಭಲವಾಗಿಸಿಕೊಂಡು ತಾವು ನೆಲೆಸಿದ್ದ ಮನೆಯಲ್ಲೇ ಆರಾಧನಾ ಫರ್ಫಾರ್ಮಿಂಗ್ ಸ್ಕೂಲ್ ಆರಂಭಿಸಿದರು. ಮೊದಲು ಸಣ್ಣ ಮಟ್ಟದಲ್ಲೇ ಬೆಳೆದ ಸಂಸ್ಥೆ ಇಂದು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ.

ಗುರು ಶಿಷ್ಯ ಪರಂಪರೆಯ ರಾಯಭಾರಿ

ತಾವು ಗುರು ಶಿಷ್ಯ ಪರಂಪರೆಯಲ್ಲಿ ಕಲಿತಿದ್ದ ಅಪರ್ಣಾ ಆದನ್ನೆ ತಮ್ಮ ಕಲಾಸೇವೆಗೆ ಮೀಸಲಿಟ್ಟರು. ಇಂದಿನ ಯುವ ಜನತೆಗೆ ಕಲೆಯ ಪರಿಚಯ ಸ್ಟೇಜ್, ಕೋ ಆರ್ಡಿನೇಷನ್, ಥಿಯೇಟರ್, ಪರ್ಫಾಮೆನ್ಸ್ ಬಗ್ಗೆ ಹೆಚ್ಚು ಜ್ಞಾನ ನೀಡುವುದು ಮುಖ್ಯ ಉದ್ಮಶವಾಗಿತ್ತು. ಆ
ಹಿನ್ನೆಲೆಯಲ್ಲಿ ಆರಂಭವಾದ ಅರಾಧನಾ ಇಂದು 30 ಜನ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಇಲ್ಲಿ ಬರಲು ಯಾವುದೇ ವಯಸ್ಸಿನ ಮಿತಿ ಇಲ್ಲ. ನಿಮಗೆ ಕಲಿಯೋ ಹುಮ್ಮಸಿದರೆ ಸಾಕು ಅಂತಾರೆ ಅಪರ್ಣಾ. ಇದನ್ನು ಇನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸೋ ಕನಸು
ಹೊಂದಿದ್ದಾರೆ. ಆ ಮೂಲಕ ತಮ್ಮ ಕನಸು ಮತ್ತು ಬದುಕು ಎರಡನ್ನು ನೃತ್ಯದಲ್ಲಿ ಕಟ್ಟಿಕೊಂಡಿದ್ದಾರೆ.

ಇವತ್ತು ಕಲೆ ಅನ್ನೋದು ಕೇವಲ ಮನರಂಜನೆ ಯಾಗಿ ಮಾತ್ರ ಉಳಿದಿಲ್ಲ. ದೇಶದ ಆರ್ಥಿಕ ಪ್ರಗತಿಯಲ್ಲಿ ಇದು ದೊಡ್ಡ ಸ್ಥಾನಗಳಿಸಿಕೊಂಡಿದೆ. ಇದೇ ಹಿನ್ನೆಲೆಯಲ್ಲಿ ಇವತ್ತು ಎಷ್ಟೋ ಜನರು ತಮ್ಮ ಉದ್ಯೋಗಗಳನ್ನು ತೊರೆದು ತಮ್ಮ ಆತ್ಮದ ಕರೆಗೆ ಓಗೊಟ್ಟು ತಮ್ಮ ಕೈಹಿಡಿದಿದ್ದ ಕಲಾ ಸೇವೆಗೆ ಮರಳುತ್ತಿದ್ದಾರೆ. ಇನ್ನೂ ಕೆಲವರು ಕಲೆಯನ್ನು ಉಸಿರಾಗಿಸಿಕೊಂಡ ಅಪರ್ಣಾ ರಂಥ ಯುವ ಮನಸು ಅದರಲ್ಲಿ ತೊಡಗಿಸಿಕೊಂಡು ತಮ್ಮ ಬದುಕನ್ನು ಕಟ್ಟಕೊಂಡಿದ್ದಾರೆ. ಅದಕ್ಕೆ ಹೇಳೋದು ಮನಸ್ಸಿಗೆ ಇಷ್ಟವಾದುದನ್ನು ಮಾಡುತ್ತಾ ಹೋದರೆ ಕೀರ್ತಿ ಹಣ ಮತ್ತು ಯಶಸ್ಸು ನಿಮ್ಮದಾಗುತ್ತದೆ ಅಂತ!

ಆಗಸ್ಟ್ 11ಕ್ಕೆ ‘ಆರಾಧನ’ ವಾರ್ಷಿಕೋತ್ಸವ

ಕಲಿಕೆಗೆ ಯಾವುದೇ ವಯಸ್ಸಿಲ್ಲ. ಅದಕ್ಕೆ ಪೂರಕವಾಗಿ ಉದ್ಯೋಗಸ್ಥ, ಸ್ವ ಉದ್ಯೋಗಸ್ಥ ಮಹಿಳೆಯರು. ತಮಗೆ ಸಿಗುವ ಸ್ವಲ್ಪ ಸಮಯದಲ್ಲೇ ಅಪರ್ಣ ಅವರ ಬಳಿ ನೃತ್ಯ ಕಲಿಯುತ್ತಿದ್ದಾರೆ. ಇದೇ ಆಗಸ್ಟ್ 11 ಆರಾಧನ ಟ್ರಸ್ಟ್ ನ 10 ನೇ ವಾರ್ಷಿಕೋತ್ಸವದ ದಿನ ಈ ಎಲ್ಲಾ ಮಹಿಳೆಯರು ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಇನ್ನೂ ಮಹಿಳೆಯರ ಈ ಆಸಕ್ತಿಯನ್ನು ಮನಗಂಡ ಅಪರ್ಣರವರು ಸದ್ಯ ಹನುಮಂತನಗರದಲ್ಲಿ ತಮ್ಮ‌ ನೃತ್ಯ ಶಾಲೆಯ ಇನ್ನೊಂದು ಶಾಖೆಯನ್ನು ತೆರೆದಿದ್ದಾರೆ.

ಆ ಮೂಲಕ ‌ಕಲೆ ಮತ್ತು ಕಲಾಸಕ್ತರನ್ನು ಒಂದು ಗೂಡಿಸುವ ಪ್ರಯತ್ನ ಮಾಡ್ತಿದ್ದಾರೆ. ಇನ್ನೂ ತಿರುಪತಿಯ TTD ,SVBC ಯಲ್ಲಿ ಕಾರ್ಯಕ್ರಮ ‌ನೀಡಿದ್ದಾರೆ. ತಾಂಜವೂರಿನ ಬೃಹದೀಶ್ವರ ದಲ್ಲಿ ನಾಟ್ಯಂಜಲಿ , ವೆಲ್ಲೂರ್ ಜಲಕಂಠೇಶ್ವರಲ್ಲಿ ಕಲಾ ಪ್ರದರ್ಶನ ನೀಡಿದ್ದಾರೆ. ಇನ್ನು ಸಂಸ್ಥೆಯಲ್ಲಿ‌ ಕಲಿಯುತ್ತಿರುವ ಮಕ್ಕಳೆಲ್ಲರೂ ಕರ್ನಾಟಕ ಎಜುಕೇಷನ್ ಬೋರ್ಡ್‌ನಡೆಸುವ ಸಂಗೀತ, ನೃತ್ಯ ಪರೀಕ್ಷೆಯಲ್ಲಿ 90% ಗಿಂತ ಹೆಚ್ಚಿನ ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಹೀಗೆ ಅಪರ್ಣ ಆನಂದ್‌ರವರು ನಿರಂತರ ಕಲಾ ಸೇವೆಯನ್ನೇ ಬದುಕಾಗಿಸಿಕೊಂಡಿದ್ದಾರೆ.

ಇದೇ ಆಗಸ್ಟ್ 11 ರಂದು ತಮ್ಮ ಆರಾಧನ ಇನ್ ಸ್ಟಿಟ್ಯೂಟ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಟ್ರಸ್ಟ್ ನ 10 ನೇ ವಾರ್ಷಿಕೋತ್ಸವವನ್ನು , ಕತ್ರಿಗುಪ್ಪೆ, ಬಿ ಎಸ್ ಕೆ 3rd ಸ್ಟೇಜ್ ನಲ್ಲಿರುವ ಪರಂಪರೆ ಆಡಿಟೋರಿಯಂನಲ್ಲಿ‌ ಆಯೋಜಿಸಿದ್ದಾರೆ.‌ಜೊತೆಗೆ ಸಂಸ್ಥೆಯ ‌ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನವು ಇರುತ್ತದೆ. ತಪ್ಪದೇ ಕಲಾಸಕ್ತರು ಭಾಗವಹಿಸಿ. ಆರಾಧನ ಟ್ರಸ್ಟ್ ನ ಈ ಕಾರ್ಯವನ್ನು ಪ್ರೋತ್ಸಾಹಿಸಿ.

ಚೈತ್ರ ಮೈಸೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version