ಲೈಫ್ ಸ್ಟೈಲ್

ಸೇಬುಹಣ್ಣುತಿನ್ನಿ ಡಾಕ್ಟರ್ ರಿಂದ ದೂರವಿರಿ..!

Published

on

An apple a day keeps you away from doctor‘ ಎಂಬ ಇಂಗ್ಲೀಷ್ ವಾಕ್ಯ ನಮಗೆ ಗೊತ್ತಿದೆ. ಏಕೆ ಹಾಗೆ ಹೇಳುತ್ತಾರೆ? ಅದರಿಂದ ಎನ್ನು ಉಪಯೋಗಗಳು ಇವೇ ಎಂಬ ಪುಟ್ಟ ಮಾಹಿತಿ ಇಲ್ಲಿದೆ.

  1. ಸೇಬು ಹಣ್ಣನ್ನು ಹಲ್ಲಿನಿಂದಲೇ ಕಚ್ಚಿ ಸಿಪ್ಪೆ ಸಹಿತ ಊಟವಾದ ನಂತರವೇ ತಿನ್ನಬೇಕು. ಅದರಿಂದ ದೈಹಿಕ ಬೆಳವಣಿಗೆ ಚನ್ನಗಿ ಆಗುತ್ತದೆ, ಜ್ಞಾಪಕಶಕ್ತಿ ಹೆಚ್ಚುತ್ತದೆ.
  2. ಹಲ್ಲುಗಳಿಂದ ಸೇಬನ್ನು ಕಚ್ಚಿ ತಿನ್ನುವುದರಿಂದ ಹಲ್ಲುಗಳ ಹೊಳಪು ಹೆಚ್ಚಿ ವಸಡುಗಳು ಸಹ ಗಟ್ಟಿಯಾಗುತ್ತವೆ.
  3. ಎ.ಬಿ.ಸಿ. ಮೂರು ಜೀವಸತ್ವಗಳು ತುಂಬಿರುವ ಸೇಬಿನಹಣ್ಣನ್ನು ಸೇವಿಸುವುದರಿಂದ ದೇಹಬಲ ಹೆಚ್ಚಿ ದಣಿದ ನರಗಳಲ್ಲಿ ಶಕ್ತಿ ಸಂಚಾರವಾಗುವುದು.
  4. ಊಟವಾದ ನಂತರ ನಿರಂತರವಾಗಿ 44 ದಿನಗಳವರಿಗೆ ಸೇಬಿನಹಣ್ಣನ್ನು ಭಕ್ಷಿಸಿದರೆ ಕಫ ಕಟ್ಣವ ಸಾಧ್ಯತೆ ಇರುವುದಿಲ್ಲ.
  5. ಸೇಬಿನ ಹೋಳುಗಳನ್ನು ಉಪ್ಪು ಸಹಿತ ನಿರಂತರ ಇಪ್ಪತ್ತು ದಿನಗಳ ಕಾಲ ತಿಂದರೆ ಅರ್ಧ ತಲೆನೋವು ಹೋಗುವುದು.
  6. ಸೇಬಿನ ಹಣ್ಣನ್ನು ಹಾಗೂ ನಿಂಬೆಹಣ್ಣಿನ ಸಿಪ್ಪೆಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದ ನಂತರ ನುಣ್ಣಗೆ ಅರೆದು ಚೂರ್ಣವನ್ನು ತಯಾರಿಸಿ ಕೊಂಡು ಅದನ್ನು ಹಾಲಿನಲ್ಲಿ ಕಲಸಿ ಮೊಡವೆಗಳಿಗೆ ಹಚ್ಚಿದರೆ ಮೊಡವೆಗಳೂ ಮಾಯವಾಗಿ ಹೋಗುವವು.
  7. ಮೊಲೆಹಾಲನ್ನು ಸೇವಿಸುತ್ತಿರುವ ಮಗುವಿಗೆ ಭೇದಿಯಾದರೆ ಮೊಲೆ ಹಾಲು ಕೊಡುವುದನ್ನು ನಿಲ್ಲಿಸಿ ಸಿಪ್ಪೆ ತೆಗೆದ ಹೋಳು ಮಾಡಿದ ಸೇಬಿನ ಹಣ್ಣುಗಳನ್ನು ಚೆನ್ನಾಗಿ ಬೇಯಿಸಿ ನಂತರ ಅದನ್ನು ಚೆನ್ನಾಗಿ ಕಿವುಚಿ ಸೋಸಿದ ನಂತರ ಹಾಲಿನ ಬದಲಿಗೆ ಅದನ್ನು ಕುಡಿಸಿದರೆ ಆಗ ತಕ್ಷಣ ಭೇದಿ ನಿಂತು ಹೋಗಿ ಆರೋಗ್ಯ ಸುಧಾರಿಸುವುದು.
  8. ಅಲ್ಸರ್ ನಿಂದ ನರಳುತ್ತಿರುವ ರೋಗಿಗಳು ಸೇಬಿನ ಹಣ್ಣಿನ ರಸವನ್ನು ದೀರ್ಘಕಾಲ ಸೇವಿಸುತ್ತಾ ಬಂದರೆ ಖಾಯಿಲೆ ಮಾಯವಾಗುವುದು.
  9. ಮೊಡವೆ ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚಿಸಲು ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಳ್ಳಬೇಕು.
  10. ಸೇಬಿನ ಹಣ್ಣಿನ ಹೋಳುಗಳನ್ನು ಹೆಚ್ಚಿ ಶುದ್ಧವಾದ ಜೇನುತುಪ್ಪದಲ್ಲಿ 24 ಗಂಟೆಗಳ ಕಾಲ ನೆನೆ ಹಾಕಬೇಕು. ನಂತರ ಅದಕ್ಕೆ ಗುಲಾಬಿಯ ದಳಗಳನ್ನು ಸೇರಿಸಿ ಬಿಸಿಲಿನಲ್ಲಿ ಒಣಗಿಸಬೇಕು. ಒಂದು ವಾರದ ನಂತರ ಈ ರಸಾಯನವನ್ನು ಹಾಲಿನ ಜೊತೆಗೆ ಕುಡಿಯಬೇಕು. ಮೂರು ವೇಳೆ ಒಂದು ಚಮಚದಷ್ಟು ಪ್ರತಿನಿತ್ಯ ಸೇವಿಸುವುದರಿಂದ ನರಗಳಲ್ಲಿ ನವಚೈತನ್ಯ ತುಂಬಿಕೊಂಡು ನರಗಳ ದೌರ್ಬಲ್ಯದ ಖಾಯಿಲೆ ಇಲದಲವಾಗುವುವು.
  11. ಯಕೃತ್ತಿನ ತೊಂದರೆ, ಸಂಧಿವಾತ ಮತ್ತು ಮಲಕಟ್ಟು ರೋಗಗಳ ಸುಧಾರಿಸಲು ಸೇಬನ್ನು ಸಿಪ್ಪೆಯ ಸಹಿತ ಪ್ರತಿನಿತ್ಯ ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
  12. ಸೇಬನ್ನು ದಿನನಿತ್ಯ ಸೇವಿಸಿದರೆ ದಾಹ ನಾಶವಾಗುತ್ತದೆ. ಜೀರ್ಣಶಕ್ತಿ ಹೆಚ್ಚುತ್ತದೆ. ಸ್ಮರಣಶಕ್ತಿಯು ಕುಂದಿದ್ದರೆ ಇದನ್ನು ಸೇವಿಸಿದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version