ದಿನದ ಸುದ್ದಿ
ಮಕ್ಕಳ ಕಲ್ಯಾಣ ಸಮಿತಿ ಸದಸ್ಯತ್ವಕ್ಕಾಗಿ ಅರ್ಜಿಆಹ್ವಾನ
ಸುದ್ದಿದಿನ,ಹಾಸನ : ಬಾಲನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಕಾಯ್ದೆ-2015 ಹಾಗೂ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಾದರಿ ನಿಯಮ-2016ರನ್ವಯ ಎಲ್ಲಾ ಜಿಲ್ಲೆಗಳಿಂದ ಮಕ್ಕಳ ಕಲ್ಯಾಣ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಬಾಲನ್ಯಾಯ ಮಂಡಳಿಗಳಿಗೆ ಸದಸ್ಯರನ್ನು 2020 ರಿಂದ 2023ರ ವರೆಗೆ 3 ವರ್ಷಗಳ ಕಾಲಾವಧಿಯ ಸದಸ್ಯತ್ವಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮಕ್ಕಳ ಕಲ್ಯಾಣ ಸಮಿತಿಗೆ 1 ಅಧ್ಯಕ್ಷರ ಹುದ್ದೆ ಹಾಗೂ 4 ಸದಸ್ಯರ ಹುದ್ದೆಗೆ ಮತ್ತು ಬಾಲನ್ಯಾಯ ಮಂಡಳಿಗಳಿಗೆ 2 ಸದಸ್ಯರ ಹುದ್ದೆಯನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಮಕ್ಕಳ ಕಲ್ಯಾಣ ಸಮಿತಿಗೆ ಹಾಗೂ ಬಾಲನ್ಯಾಯ ಮಂಡಳಿಗಳಿಗೆ ಪ್ರತ್ಯೇಕ ಅರ್ಜಿ ನಮೂನೆಗಳು, ಸೂಚನೆಗಳು, ಅಫೀಡವಿಟ್‍ಗಳು ನಿರ್ದೇಶನಾಲಯದ ವೆಬ್‍ಸೈಟ್ www.icps.karnataka.gov.in ರಲ್ಲಿ ಲಭ್ಯವಿರುತ್ತದೆ.
ಅರ್ಜಿದಾರರು ಸಿ.ಡಬ್ಲ್ಯೂಸಿ ಅಥವಾ ಜೆ.ಜೆ.ಬಿ ಎರಡರಲ್ಲಿ ಯಾವುದಾದರೂ ಒಂದಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಬಯಸಿದಲ್ಲಿ ಸದರಿ ಅರ್ಜಿಯನ್ನು ಮಾತ್ರ ದ್ವಿಪ್ರತಿಯಲ್ಲಿ ಸಲ್ಲಿಸಬಹುದಾಗಿದ್ದು, ಒಂದು ವೇಳೆ ಅರ್ಜಿದಾರರು ಸಿ.ಡಬ್ಲ್ಯೂಸಿ ಹಾಗೂ ಜಿ.ಜಿ.ಬಿ ಎರಡಕ್ಕೂ ಅರ್ಜಿ ಸಲ್ಲಿಸಲು ಬಯಸಿದಲ್ಲಿ ಭರ್ತಿಮಾಡಿದ ಪ್ರತ್ಯೇಕ ಅರ್ಜಿಗಳನ್ನು ದ್ವಿಪ್ರತಿಯಲ್ಲಿ ರಿಜಿಸ್ಟರ್ ಅಂಚೆ ಮೂಲಕ (ಆರ್.ಪಿ.ಎ.ಡಿ) ಅಥವಾ ಮುದ್ದಾಂ ನ.15 ರ ಸಂಜೆ 5.30 ರೊಳಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶನಾಲಯದ ದೂರವಾಣಿ ಸಂಖ್ಯೆ 080-2279382/83 ಹಾಗೂ ಆಯಾ ಜಿಲ್ಲೆಗಳ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ (ಡಿಸಿಪಿಯು) ದ ಕಚೇರಿಯನ್ನು ಸಂಪರ್ಕಿಸುವುದು. ಡಿಸಿಪಿಯು ಕಚೇರಿ/ಸಿಡಬ್ಯೂಸಿ/ಜೆಜೆಬಿ ವಿಳಾಸ, ದೂರವಾಣಿ ಸಂಖ್ಯೆಯನ್ನು ಮೇಲಿನ ವೆಬ್ ಸೈಟ್‍ನಲ್ಲಿ ಪಡೆಯಬಹುದು ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರು ಹಾಗೂ ರಾಜ್ಯ ಮಟ್ಟದ ಆಯ್ಕೆ ಸಮಿತಿ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243