ದಿನದ ಸುದ್ದಿ

ಪರಿಶಿಷ್ಟ ಜಾತಿಯ ಕಲಾವಿದರಿಂದ ಅರ್ಜಿ ಆಹ್ವಾನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಕಲಬುರಗಿ : ‘ಸರ್ವರಿಗೂ ಸಂವಿಧಾನ’ ಯೋಜನೆಯಡಿ ಕಲಬುರಗಿ ರಂಗಾಯಣದಿಂದ ನಾಟಕ ಸಿದ್ಧಪಡಿಸಲು ಪರಿಶಿಷ್ಟ ಜಾತಿಯ ಕಲಾವಿದರನ್ನು ಆಯ್ಕೆ ಮಾಡಬೇಕಾಗಿದೆ. ಇದಕ್ಕಾಗಿ ಪರಿಶಿಷ್ಟ ಜಾತಿಯ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ರಂಗಾಯಣದ (ಪ್ರಭಾರ) ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವ ಕಲಾವಿದರ ವಯೋಮಿತಿ 18 ರಿಂದ 40 ವರ್ಷದೊಳಗಿರಬೇಕು. ಈ ಕಲಾವಿದರನ್ನು ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ 3 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ರಂಗಾಯಣದ ಚಟುವಟಿಕೆಗಳ ಅಗತ್ಯದ ಹಿನ್ನೆಲೆಯಲ್ಲಿ ಗೌರವ ಸಂಭಾವನೆ ಆಧಾರದಲ್ಲಿ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇದು ಸರ್ಕಾರದ ಖಾಯಂ ಹುದ್ದೆಗಳಾಗಿರುವುದಿಲ್ಲ. ಆಯ್ಕೆಯಾದ ಕಲಾವಿದರು ರಂಗಾಯಣವು ವಿಧಿಸುವ ಷರತ್ತುಗಳಿಗೆ ಬದ್ಧರಾಗಿರಬೇಕು. ಈ ನೇಮಕಗಳಲ್ಲಿ ಕನಿಷ್ಠ ಶೇ. 50 ರಷ್ಟು ಹುದ್ದೆಗಳನ್ನು ಪ್ರಾದೇಶಿಕ ವಲಯದ ಕಲಾವಿದರಿಗೆ ಮೀಸಲಿಡಲಾಗಿದೆ.

ನಿಗದಿತ ನಮೂನೆಯ ಅರ್ಜಿಯನ್ನು ಕಲಬುರಗಿ ರಂಗಾಯಣ ಕಚೇರಿಯಿಂದ ಅಥವಾ ರಂಗಾಯಣದ www.rangayanakalaburagi.com ವೆಬ್‍ಸೈಟ್‍ದಿಂದ ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ 2021ರ ಫೆಬ್ರವರಿ 6 ರ ಸಂಜೆ 5 ಗಂಟೆಯೊಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ, ಸುವರ್ಣ ಸಾಂಸ್ಕøತಿಕ ಸಮುಚ್ಚಯ, ಸೇಡಂ ಶಹಾಬಾದ ವರ್ತುಲ ರಸ್ತೆ, ಕಲಬುರಗಿ-585105 ಈ ವಿಳಾಸಕ್ಕೆ ಖುದ್ದಾಗಿ, ಅಂಚೆ ಮೂಲಕ ಅಥವಾ ಇ-ಮೇಲ್ rangayanakalaburgi@gmail.com, rangayanakalaburagi@gmail.com ವಿಳಾಸಕ್ಕೆ ಕಳುಹಿಸಬಹುದಾಗಿದೆ.

ನಿಯಮ, ಷರತ್ತು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ರಂಗಾಯಣ ಕಚೇರಿಯನ್ನು ಹಾಗೂ ರಂಗಾಯಣ ವೈಬ್‍ಸೈಟ್‍ನ್ನು ಅಥವಾ ರಂಗಾಯಣ ಕಚೇರಿ ದೂರವಾಣಿ ಸಂಖ್ಯೆ 08472-227735ಗೆ ಸಂಪರ್ಕಿಸಲು ಕೋರಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version