ದಿನದ ಸುದ್ದಿ
ಮಕ್ಕಳ ದತ್ತು ಪ್ರಕ್ರಿಯೆಗಾಗಿ ಸರ್ಕಾರೇತರ ಸಂಸ್ಥೆಗಳಿಂದ ಅರ್ಜಿ ಆಹ್ವಾನ
ಸುದ್ದಿದಿನ,ಶಿವಮೊಗ್ಗ : ದತ್ತು ಮಾರ್ಗಸೂಚಿ-2017ರ ಪ್ರಕಾರ ಪ್ರತಿಯೊಂದು ಜಿಲ್ಲೆಗೂ ವಿಶೇಷ ದತ್ತು ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕಾಗಿದ್ದು, ಶಿವಮೊಗ್ಗ ಜಿಲ್ಲೆಗೆ ದತ್ತು ಪ್ರಕ್ರಿಯೆಯ ಅನುಷ್ಟಾನಗೊಳಿಸಲು ಅರ್ಹ ಸರ್ಕಾರೇತರ ಸಂಸ್ಥೆಯಿಂದ ಪ್ರಸ್ತಾವಣೆಯನ್ನು ಆಹ್ವಾನಿಸಲಾಗಿದೆ.
ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ರಾಜ್ಯ ದತ್ತು ಸಂಪನ್ಮೂಲ ಸಂಸ್ಥೆ (ಸಾರ), ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಮತ್ತು ಸಂಪನ್ಮೂಲ ಪ್ರಾಧಿಕಾರ (ಕಾರಾ) ನವದೆಹಲಿ ಇವರ ಮಾರ್ಗಸೂಚಿಯಂತೆ ಬಾಲನ್ಯಾಯ ಕಾಯ್ದೆ ಹಾಗೂ ದತ್ತು ಮಾರ್ಗಸೂಚಿ 2017ರ ಪ್ರಕಾರ ಅನಾಥ, ಪರಿತ್ಯಕ್ತ, ಒಪ್ಪಿಸಲ್ಪಟ್ಟ ಮತ್ತು ಮಕ್ಕಳ ಸಾಗಾಣಿಕೆಯಿಂದ ತಡೆಗಟ್ಟಿದ ಮಕ್ಕಳ ಕಾನೂನು ಬಾಹಿತ ದತ್ತು ಕ್ರಮವನ್ನು ನಿಯಂತ್ರಿಸಿ/ತಡೆಗಟ್ಟಿ ನ್ಯಾಯಯುತವಾದ ದತ್ತು ಪಕ್ರಿಯೆಯ ಮೂಲಕ ಇಂತಹ ಮಕ್ಕಳಿಗೆ ಉತ್ತಮ ಕುಟುಂಬದ ವಾತಾವರಣವನ್ನು ಕಲ್ಪಿಸಿ ಅವರಿಗೆ ಪ್ರೀತಿ, ವಾತ್ಸಲ್ಯ ರಕ್ಷಣೆ ಮತ್ತು ಪೋಷಣೆ ಒದಗಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಅವಕಾಶ ಕಲ್ಪಿಸಬೇಕಾಗಿದೆ.
ಸರ್ಕಾರೇತರ ಸಂಸ್ಥೆಗಳು ಬಾಲನ್ಯಾಯ ಕಾಯ್ದೆಯಡಿ ನೋಂದಾವಣೆಯಾಗಿರಬೇಕು. ಸೊಸೈಟಿ ರಿಜಿಸ್ಟ್ರೇಷನ್ ಆಕ್ಟ್ 1860 (21 ಆಫ್ 1860), ಅಂಡ್ ದ ಇಂಡಿಯನ್ ಟ್ರಸ್ಟ್ ಆಕ್ಟ್, 1882 ಅಡಿಯಲ್ಲಿ ನೋಂದಾವಣೆಯಾಗಿರುವ ಮಕ್ಕಳ ಪಾಲನೆ ಮತ್ತು ಪೋಷಣೆಯಲ್ಲಿ 3 ವರ್ಷಗಳಿಗಿಂತ ಹೆಚ್ಚಿನ ಸೇವೆಯಲ್ಲಿ ತೊಡಗಿರಬೇಕು ಮತ್ತು ಕಪ್ಪು ಪಟ್ಟಿಗೆ ಸೇರಿರದ ಹಾಗೂ ಇತರ ಮಕ್ಕಳ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿದಂತಹ ಆಸಕ್ತ ಸರ್ಕಾರೇತರ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು ನಿಗಧಿತ ನಮೂನೆ ಅರ್ಜಿಗಳನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 100 ಅಡಿರಸ್ತೆ, ಬಾಲಕರ ಬಾಲಮಂದಿರ ಆವರಣ, ಆಲ್ಕೋಳ, ಶಿವಮೊಗ್ಗ, ಇಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಆಗಸ್ಟ್ 13 ರೊಳಗಾಗಿ ಸಲ್ಲಿಸುವುದು.
ಮಾಹಿತಿಗಾಗಿ ಕಚೇರಿ ದೂ.ಸಂ.: 08182-251114 ನ್ನು ಸಂಪರ್ಕಿಸುವುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243