ದಿನದ ಸುದ್ದಿ

ಪ್ರಗತಿಪರ ರೇಷ್ಮೆ ಬೆಳೆಗಾರರಿಗೆ ಪ್ರಶಸ್ತಿ/ಬಹುಮಾನಕ್ಕೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ಹಾಸನ : ರೇಷ್ಮೆ ಇಲಾಖೆ ವತಿಯಿಂದ ಪ್ರಗತಿಪರ ಪುರುಷ ಮಹಿಳಾ ರೇಷ್ಮೆ ಬೆಳೆಗಾರರು ಹಾಗೂ ರೇಷ್ಮೆ ನೂಲು ಬಿಚ್ಚಾಣಿಕೆದಾರರು 2020 – 21 ನೇ ಸಾಲಿನ ಅತ್ಯುತ್ತಮ ಸಾಧನೆಗೈದ ಒಬ್ಬರಿಗೆ ವಿವಿಧ ವಿಭಾಗಗಳಲ್ಲಿ ಬಹುಮಾನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ರೇಷ್ಮೆ ಕೃಷಿ ಉಪ ನಿರ್ದೇಶಕರು ತಿಳಿಸಿದ್ದಾರೆ.

ಪುರುಷ ರೇಷ್ಮೆ ಬೆಳೆಗಾರರು (ರಾಜ್ಯ ಮಟ್ಟದಲ್ಲಿ) ಪ್ರಥಮ ಬಹುಮಾನ 25 ಸಾವಿರ, ದ್ವಿತೀಯ ಬಹುಮಾನ 15 ಸಾವಿರ, ತೃತೀಯ ಬಹುಮಾನ 10 ಸಾವಿರ ಹಾಗೂ ಮಹಿಳಾ ರೇಷ್ಮೆ ಬೆಳೆಗಾರರು (ರಾಜ್ಯ ಮಟ್ಟದಲ್ಲಿ) ಪ್ರಥಮ ಬಹುಮಾನ 25 ಸಾವಿರ, ದ್ವಿತೀಯಬಹುಮಾನ 15 ಸಾವಿರ, ತೃತೀಯ ಬಹುಮಾನ 10 ಸಾವಿರ. ದ್ವಿ ತಳಿ ಬಿತ್ತನೆ ವಲಯದಲ್ಲಿ ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ ಬಹುಮಾನ 10 ಸಾವಿರ, ಪವಮಾನ 5 ಸಾವಿರ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರಥಮ ಬಹುಮಾನ 15 ಸಾವಿರ, ದ್ವಿತೀಯ ಬಹುಮಾನ 10 ಸಾವಿರ, ತೃತೀಯ ಬಹುಮಾನ 5 ಸಾವಿರ ನೀಡಲಾಗುವುದು.

ಮಾರ್ಗಸೂಚಿಗಳು: ರೇಷ್ಮೆ ಬೆಳೆಗಾರರು ಕನಿಷ್ಠ ಒಂದು ಎಕರೆ ಹಿಪ್ಪುನೇರಳೆ ವಿಸ್ತೀರ್ಣ ಹೊಂದಿರಬೇಕು. ಪ್ರತ್ಯೇಕ ಹುಳು ಸಾಕಾಣಿಕೆ ಮನೆ ಹೊಂದಿರಬೇಕು, ಒಬ್ಬರು ಒಂದಕ್ಕಿಂತ ಹೆಚ್ಚು ಸ್ಪರ್ಧೆಯಲ್ಲಿ ಬಹುಮಾನ ಪಡೆದ ಲ್ಲಿ ಅವರಿಗೆ ಗರಿಷ್ಠಮಟ್ಟದ ಬಹುಮಾನ ನೀಡಲಾಗುವುದು.

ರಾಜ್ಯ ಅಥವಾ ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹರಾಗಲು ನೂರು ಮೊಟ್ಟೆಗೆ ಸರಾಸರಿ ಇಳುವರಿ 65 ಕೆಜಿ ಗಿಂತ ಕಡಿಮೆ ಇರಬಾರದು ಹಾಗೂ ಒಂದು ಎಕರೆಗೆ ಗೂಡಿನ ಸರಸರಿ ಉತ್ಪಾದಕತೆ 500 ಕೆಜಿ ಗಳಿಗಿಂತ ಕಡಿಮೆ ಇರಬಾರದು.

ಪ್ರತಿ ಎಕರೆಗೆ ಅತಿ ಹೆಚ್ಚು ಗೂಡು ಉತ್ಪಾದನೆ ಆಧರಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ದ್ವಿತಳಿ ಬಿತ್ತನೆ ಪ್ರದೇಶದ ಪ್ರಶಸ್ತಿಗೆ ಅರ್ಹರಾಗಲು 100 ಮೊಟ್ಟೆಗೆ ಸರಾಸರಿ ಇಳುವರಿ ಸಂಖ್ಯೆಯಲ್ಲಿ 30,000ಕ್ಕಿಂತ ಮತ್ತು ತೂಕದಲ್ಲಿ 50 ಕೆ.ಜಿ.ಗಿಂತ ಕಡಿಮೆ ಇರಬಾರದು ಹಾಗೂ ಒಂದು ಎಕರೆಗೆ ವಾರ್ಷಿಕ ಕನಿಷ್ಠ 400 ಕೆ.ಜಿ ಬಿತ್ತನೆ ಗೂಡು ಉತ್ಪಾದಿಸಿರಬೇಕು. ನೀಡಿರುವ ಮಾಹಿತಿಯಲ್ಲಿ ಯಾವುದೇ ಲೋಪದೋಷಗಳಿಗೆ ರೇಷ್ಮೆ ಬೆಳೆಗಾರರೇ ಜವಾಬ್ದಾರರಾಗಿರುತ್ತಾರೆ.

ಬಹುಮಾನ ಪಡೆಯಲು ರೇಷ್ಮೆ ಬೆಳೆಗಾರರು ನಿಗದಿತ ನಮೂನೆಯಲ್ಲಿ ದಾಖಲಾತಿಗಳೊಡನೆ ಸಂಬಂಧಪಟ್ಟ ತಾಂತ್ರಿಕ ಸೇವಾ ಕೇಂದ್ರದ ಕಚೇರಿಗೆ ಸಲ್ಲಿಸಲು ಕಡೆಯ ಸೆ. 30 ಸಲ್ಲಿಸ ಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version