ದಿನದ ಸುದ್ದಿ

ಬೀಡಾಡಿ ಪ್ರಾಣಿಗಳ ಪುನರ್ವಸತಿ ನಿರ್ವಹಣೆಗೆ ಅರ್ಜಿ ಆಹ್ವಾನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಶಿವಮೊಗ್ಗ ನಗರದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಗುಂಡಪ್ಪ ಶೆಟ್ ಬಳಿ 1 ಎಕರೆ ಜಾಗವನ್ನು ಅಪಘಾತದಲ್ಲಿ ಗಾಯಗೊಂಡ/ ಅನಾರೋಗ್ಯಕ್ಕೆ ತುತ್ತಾದ ಬೀಡಾಡಿ ಪ್ರಾಣಿಗಳ ಆರೈಕೆಗೆಂದು ಮೀಸಲಿಡಲಾಗಿದ್ದು, ಅವುಗಳ ನಿರ್ವಹಣೆ ಮಾಡಲು ಆಸಕ್ತಯುಳ್ಳ ಕುಶಲತೆ ಮತ್ತು ನೈಪುಣ್ಯತೆ ಹೊಂದಿರುವ ಮತ್ತು ವೃತ್ತಿಪರ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು ತಾವು ಪ್ರಸ್ತಾಪಿಸಲಿರುವ ಮಾದರಿ ಬಂಡವಾಳ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಸ್ತøತ ಮಾಹಿತಿಗಳನ್ನು/ವರದಿಯನ್ನು ಒಳಗೊಂಡ ಪ್ರಸ್ತಾವನೆಯನ್ನು ಜೂನ್ 30 ರೊಳಗಾಗಿ ಕಚೇರಿಗೆ ಸಲ್ಲಿಸುವಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ವೆಬ್‍ಸೈಟ್ www.shivamoggacity.mrc.gov.in ನ್ನು ಹಾಗೂ ಪಾಲಿಕೆಯ ಪಶುವೈದ್ಯಾಧಿಕಾರಿಗಳನ್ನು ಅಥವಾ ದೂ.ಸಂ.: 08182-226506 ನ್ನು ಸಂಪರ್ಕಿಸುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version