ದಿನದ ಸುದ್ದಿ

ವಾಯುದಳದ ಏರ್‌ಮನ್ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನ

Published

on

ಸುದ್ದಿದಿನ, ದಾವಣಗೆರೆ: ಭಾರತೀಯ ವಾಯುದಳದ ಏರ್‌ಮನ್ ಗ್ರೂಪ್-ಘಿ (ಟೆಕ್ನಿಕಲ್) ಮತ್ತು ಗ್ರೂಪ್-ಙ (ನಾನ್ ಟೆಕ್ನಿಕಲ್) ಹುದ್ದೆಗಳ ಭರ್ತಿಗಾಗಿ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಗ್ರೂಪ್-ಘಿ (ಟೆಕ್ನಿಕಲ್) ಹುದ್ದೆಗೆ 10+2 ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಆಂಗ್ಲಭಾಷೆ ಇವುಗಳಲ್ಲಿ ಒಟ್ಟಾರೆ ಶೇ.50 ಅಂಕ ಪಡೆದಿರಬೇಕು. ಅಥವಾ ಸರ್ಕಾರದಿಂದ ಅಂಗೀಕೃತವಾದ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ 3 ವರ್ಷದ ಇಂಜಿನಿಯರಿಂಗ್ ಡಿಪ್ರೋಮೋದಲ್ಲಿ ಶೇ.50 ಅಂಕ ಪಡೆದು ತೇರ್ಗಡೆಯಾಗಿರಬೇಕು. ಗ್ರೂಪ್-ಙ (ನಾನ್‌ಟೆಕ್ನಿಕಲ್) ಹುದ್ದೆಗೆ ಯಾವುದೇ ಪಿಯುಸಿ ಶಿಕ್ಷಣವನ್ನು ಶೇ.50 ಅಂಕಗಳೊಂದಿಗೆ ಪಾಸಾಗಿರಬೇಕು. ಇಂಗ್ಲೀಷ್ ಭಾಷೆಯಲ್ಲಿ ಕಡ್ಡಾಯವಾಗಿ ಶೇ.50 ಅಂಕ ಪಡೆದಿರಬೇಕು.

ಅರ್ಜಿ ಸಲ್ಲಿಸಲು ಜು.24 ಕೊನೆ ದಿನವಾಗಿರುತ್ತದೆ. ಗ್ರೂಪ್-ಘಿ ಮತ್ತು ಗ್ರೂಪ್-ಙ ಹುದ್ದೆಗಳಿಗೆ ವಯೋಮಿತಿ ದಿ: 14-07-1998 ರಿಂದ26-06-2002ರೊಳಗೆ ಜನಿಸಿರಬೇಕು.

ಹೆಚ್ಚಿನ ಮಾಹಿತಿಗಾಗಿ

ದೂ.ಸಂಖ್ಯೆ : 08375-249291 ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಸಂಪರ್ಕಿಸಬೇಕೆಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version