ದಿನದ ಸುದ್ದಿ
ನೈರುತ್ಯ ರೈಲ್ವೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ ಡೆಸ್ಕ್| ನೈರುತ್ಯ ರೈಲ್ವೆ ಇಲಾಖೆಯು 257 ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆನ್ ಲೈನ್ ಮೂಲಕ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆಗಸ್ಟ್ 27, 2018 ಕಡೆಯ ದಿನವಾಗಿದೆ.
ನೈರುತ್ಯ ರೈಲ್ವೆಯ safaiwala ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದಂತಹ ಅಭ್ಯರ್ಥಿಗಳು ಕೇರಳ,ತಮಿಳುನಾಡು, ಕರ್ನಾಟಕ, ಆಂದ್ರಪ್ರದೇಶ ಮತ್ತು ಪುದುಚೇರಿಯಲ್ಲಿ ಕೆಲಸ ಮಾಡಬೇಕಿದೆ. ವೇತನ ಶ್ರೇಣಿ ಪ್ರತಿ ತಿಂಗಳು 18000 ರೂ ಆಗಿದೆ.
ಅರ್ಜಿಸಲ್ಲಿಸುವಂತಹ ಅಭ್ಯರ್ಥಿಗಳು 10ನೇ ತರಗತಿಯನ್ನು (sslc) ರಾಜ್ಯ ಅಥವಾ ಕೇಂದ್ರದ ಬೋರ್ಡ್‌ನಿಂದ ಮಾನ್ಯತೆಯನ್ನು ಪಡೆದಂಥಹ ಸಂಸ್ಥೆಗಳಿಂದ ಪೂರ್ಣಗೊಳಿಸಿರಬೇಕು.
ಅಭ್ಯರ್ಥಿಗಳಿಗೆ18ರಿಂದ33 ವರ್ಷದ ವಯೋಮಿತಿಯನ್ನು ನಿಗಧಿ ಪಡಿಸಲಾದಿಗೆ. (1ಜನವರಿ 2019) ಕ್ಕೆ ಅನ್ವಯಾವಗುವಂತೆ.
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ನಿಗದಿ ಮಾಡಲಾಗಿದ್ದು, ಎಸ್ಸಿ-ಎಸ್ಟಿ-ಅಂಗವಿಕಲ-ಮಹಿಳೆ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 250 ರೂ. ನಿಗದಿ ಮಾಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401