ದಿನದ ಸುದ್ದಿ

ಮೀನುಗಾರಿಕೆ ಇಲಾಖೆಯಲ್ಲಿನ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಮೀನುಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ವಲಯ, ರಾಜ್ಯ ವಲಯ ಮತ್ತು ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಫಲಾನುಭವಿ ಆಧಾರಿತ ಯೋಜನೆಗಳಾದ ಭಾವಿ ಹೊಂಡಗಳಿಗೆ ಮೀನುಮರಿ ಸರಬರಾಜು, ಮೀನುಮರಿ ಬಿತ್ತನೆಗೆ ಸಹಾಯ, ಮೀನುಗಾರಿಕೆ ಸಲಕರಣೆ ಕಿಟ್ ಯೋಜನೆ, ಮೀನು ಮಾರಾಟ, ದ್ವಿಚಕ್ರ ವಾಹನ ಮತ್ತು ಶಾಖ ನಿರೋಧಕ ಪೆಟ್ಟಿಗೆ ಖರೀದಿಸಲು ಸಹಾಯಧನ, ಮೀನುಕೃಷಿ ಕೊಳ ನಿರ್ಮಾಣಕ್ಕೆ ಮತ್ತು ಹೂಡಿಕೆ ವೆಚ್ಚಗಳಿಗೆ ಸಹಾಯಧನ ಮೀನುಮರಿ ಖರೀದಿಸಲು ಸಹಾಯಧನ ಇತ್ಯಾದಿ ಯೋಜನೆಗಳ ಪ್ರಯೋಜನೆ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ಹಾಗೂ ಮೀನುಗಾರರ ಸಹಕಾರಿ ಸಂಘದ ಸದಸ್ಯರು ನಿಗದಿತ ನಮೂನೆಯಲ್ಲಿ ಸೂಕ್ತ ದಾಖಲೆಗಳೊಂದಿಗೆ ತಾಲ್ಲೂಕು ಮಟ್ಟದ ಕಚೇರಿಗಳಿಗೆ ಹಾಗೂ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ದಾವಣಗೆರೆ, ಹರಿಹರ, ಜಗಳೂರು, ಚನ್ನಗಿರಿ ಮತ್ತು ಹೊನ್ನಾಳಿ, ನ್ಯಾಮತಿ ಇವರಿಗೆ ಸಂಪರ್ಕಿಸಬಹುದೆಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version