ದಿನದ ಸುದ್ದಿ
ಮಹಿಳಾ ಮಿಲಟರಿ ಪಡೆಗೆ ಅರ್ಜಿ ಆಹ್ವಾನ
ಸುದ್ದಿದಿನ,ಶಿವಮೊಗ್ಗ,: ಭಾರತೀಯ ಸೇನೆಯಲ್ಲಿ ಮಹಿಳಾ ಮಿಲಿಟರಿ ಪೊಲೀಸ್ ಹುದ್ದೆಗಳನ್ನು ಭರ್ತಿಮಾಡಲು ಬರುವ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ರಾಜ್ಯದ ಬೆಳಗಾವಿ ನಗರದಲ್ಲಿ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದ್ದು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್‍ನಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ.
ಹೆಸರು ನೊಂದಾಯಿಸಲು ಜೂನ್- 8 ಕೊನೆಯ ದಿನಾಂಕವಾಗಿದ್ದು ನೊಂದಾಣಿ ಕಾರ್ಡ್ ಹಾಗೂ ರ್ಯಾಲಿಯ ನಿಖರ ದಿನಾಂಕವನ್ನು ಅಭ್ಯರ್ಥಿಗಲ ಇ-ಮೇಲ್‍ಗೆ ಕಳುಹಿಸಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-255293, 8861890866, 9482023412 ಕ್ಕೆ ಸಂಪರ್ಕಿಸುವಂತೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243