ದಿನದ ಸುದ್ದಿ
ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ಬಳ್ಳಾರಿ : ಹರಪನಹಳ್ಳಿ ತಾಲೂಕಿನಲ್ಲಿ ಖಾಲಿ ಇರುವ ವಿವಿಧ ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಪನಹಳ್ಳಿ ತಾಲೂಕಿನ ಆಯ್ದ 5 ಗ್ರಾಮ ಪಂಚಾಯತಿಗಳ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅರಸಿಕೇರೆ 3ಎ-ಗ್ರಾಮೀಣ ಅಭ್ಯರ್ಥಿ, ಹಲವಾಗಲು ಸಾಮಾನ್ಯ ಅಭ್ಯರ್ಥಿ, ಹಿರೇಮೆಗಳಗೆರೆ ಪರಿಶಿಷ್ಠ ಜಾತಿ(ಮಹಿಳಾ ಅಭ್ಯರ್ಥಿ), ಮಾದಿಹಳ್ಳಿ ಸಾಮಾನ್ಯ(ಮಹಿಳಾ ಅಭ್ಯರ್ಥಿ), ರಾಗಿಮಸಲವಾಡ 2ಎ(ಮಹಿಳಾ ಅಭ್ಯರ್ಥಿ) ವರ್ಗಕ್ಕೆ ಮೀಸಲಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತೀರ್ಣರಾಗಿರಬೇಕು. ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿರಬೇಕು. ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಹೊಂದಿರಬೇಕು. ಅಭ್ಯರ್ಥಿಗಳು ಮೀಸಲುವಾರು ಗರಿಷ್ಠ ವಯೋಮಿತಿಯನ್ನು (ಸಾಮಾನ್ಯ ಅಭ್ಯರ್ಥಿ-33ವರ್ಷ, 2ಎ ,2ಬಿ, 3ಎ, 3ಬಿ-36ವರ್ಷ ಹಾಗೂ ಪ.ಜಾತಿ/ಪ.ಪಂಗಡ/ಪ್ರ.ವರ್ಗ1-38ವರ್ಷ) ಹೊಂದಿರಬೇಕು.
ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಪಡೆದ ಆಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲಾತಿಗಳಾದ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಟಿಸಿ, ಜಾತಿ ಪ್ರಮಾಣ ಪತ್ರ, ಸ್ಥಳೀಯ ವಾಸಿ ದೃಡೀಕರಣ ಪತ್ರ, ಅಂಗವಿಕಲತೆ ಇದ್ದಲ್ಲಿ ದೃಡೀಕರಣ ಪತ್ರ) ಇತ್ಯಾದಿಗಳೊಂದಿಗೆ ಸಂಬಂಧಿಸಿದ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಿಗೆ ಮಾ.02ರೊಳಗಾಗಿ ಅರ್ಜಿಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೇಂದ್ರ ಗ್ರಂಥಾಲಯ, ಬಳ್ಳಾರಿ ದೂರವಾಣಿ ಸಂಖ್ಯೆ 08392-276887ಗೆ ಸಂಪರ್ಕಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.