ದಿನದ ಸುದ್ದಿ

ಅರೆ ವೈದ್ಯಕೀಯ ಕಾರ್ಯಕರ್ತ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ನಗರದಲ್ಲಿ ಎನ್.ಹೆಚ್.ಎಂ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರೆ ವೈದ್ಯಕೀಯ ಕಾರ್ಯಕರ್ತ 01 ಹುದ್ದೆಗೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿ ಕುಷ್ಠರೋಗಿಗಳ ಪಾಲನೆ, ಪೋಷಣೆ ಮಾಡಿರುವ ದೃಡೀಕರಣ ಅಥವಾ ಎನ್.ಎಲ್.ಇ.ಪಿ/ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿಬ್ಬಂದಿ(ವಯಸ್ಸು 65 ರೊಳಗಿರಬೇಕು.) ಎಂ.ಎಸ್.ಡಬ್ಯೂ/ ಬಿ.ಎಸ್ಸಿ ನರ್ಸಿಂಗ್ ನೊಂದಿಗೆ 3 ವರ್ಷಗಳ ಕುಷ್ಠರೋಗಿಗಳ ಪಾಲನೆ ಪೋಷಣೆ ಹಾಗೂ ಸಾರ್ವಜನಿಕವಾಗಿ ಕುಷ್ಠರೋಗದ ಸರ್ವೆಕಾರ್ಯವನ್ನು ಮಾಡಿರುವ ಅನುಭವ ಹೊಂದಿರಬೇಕು. ಗಣಕಯಂತ್ರದ ಜ್ಞಾನ ಹೊಂದಿರಬೇಕು.

ಅರ್ಜಿದಾರರಿಗೆ ನೇರ ಸಂದರ್ಶನವನ್ನು ಆ.19 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿಗಳ ಕಚೇರಿ ದಾವಣಗೆರೆ ಇಲ್ಲಿಗೆ ಮೂಲ ಮತ್ತು ನಕಲು ದಾಖಲಾತಿಗಳೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 9900920572 ಗೆ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version