/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಐಐಎಸ್ಸಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆಗೆ 31 ಕೊನೆ ದಿನ

Recruitment for various posts in IISC. Last date for apply is Jul 31. See the details here

Published

on

ಸುದ್ದಿದಿನ ಡೆಸ್ಕ್ |  ಕೇಂದ್ರ ಸರ್ಕಾರದ ಸ್ವಾಯತ್ತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾದ ಭಾರತೀಯ ವಿಜ್ಞಾನ ಸಂಸ್ಥೆಂಯಲ್ಲಿ ನೇರ ಹಾಗೂ ನಿಯೋಜನೆ ಆಧಾರದ ಮೇಲೆ 16 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ.

ಎರಡು ಡಿಪ್ಯುಟಿ ರಿಜಿಸ್ಟ್ರಾರ್, 10 ಅಸಿಸ್ಟೆಂಟ್ ರಿಜಿಸ್ಟ್ರಾರ್, ಒಂದು ಡಿವೈ ಪ್ರಾಜೆಕ್ಟ್ ಇಂಜಿನಿಯರ್ (ಎಲೆಕ್ಟ್ರಿಕಲ್), ಎರಡು ಅಸಿಸ್ಟೆಂಟ್ ಪ್ರಾಜೆಕ್ಟ್ ಇಂಜಿನಿಯರ್ (ಸಿವಿಲ್), ಒಂದು ಸೈಟ್ ಇಂಜಿನಿಯರ್ (ಸಿವಿಲ್, ಚಳ್ಳಕೆರೆ ಕ್ಯಾಂಪಸ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಎಲ್ಲ ಹುದ್ದೆಗಳಿಗೆ ಕೇಂದ್ರ 7ನೇ ಸಿಪಿಸಿಯಂತೆ ವೇತನ ಸಿಗಲಿದೆ. ಡಿಪ್ಯುಟಿ ರಿಜಿಸ್ಟ್ರಾರ್ ಮತ್ತು ಡಿವೈ ಪ್ರಾಜೆಕ್ಟ್ ಇಂಜಿನಿಯರ್ (ಎಲೆಕ್ಟ್ರಿಕಲ್) ಹುದ್ದೆಗಳಿಗೆ 55 ವರ್ಷ ಮತ್ತು ಉಳಿದ ಎಲ್ಲ ಹುದ್ದೆಗಳಿಗೆ 50 ವರ್ಷ ವಯೋಮಿತಿ ನಿಗದಿ ಮಾಡಿದೆ.

ವಿದ್ಯಾರ್ಹತೆ:
ಎಲ್ಲ ರಿಜಿಸ್ಟ್ರಾರ್ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 5 ರಿಂದ 8 ವರ್ಷಗಳ ಅನುಭವ ಹೊಂದರಿಬೇಕು. ಆಡಳಿತ, ಕ್ರೀಡೆ, ಸೆಕ್ಯುರಿಟಿ ಹುದ್ದೆಗಳಿವೆ.
ಡಿವೈ ಪ್ರಾಜೆಕ್ಟ್ ಇಂಜಿನಿಯರ್ (ಎಲೆಕ್ಟ್ರಿಕಲ್) ಹುದ್ದೆಗೆ ಅರ್ಜಿ ಸಲ್ಲಿಸುವರು ಎಂಎ/ ಎಂಟೆಕ್ ಸ್ನಾತಕೋತ್ತರ ಮತ್ತು ಸಿಸ್ಟೆಂಟ್ ಪ್ರಾಜೆಕ್ಟ್ ಇಂಜಿನಿಯರ್, ಸೈಟ್ ಇಂಜಿನಿಯರ್ ಹುದ್ದೆಗಳಿಗೆ ಬಿಇ/ ಬಿಟೆಕ್ ಪದವಿ ಪಡೆದಿರಬೇಕು.

ಅರ್ಜಿ ಸಲ್ಲಿಕೆ:
ಎಲ್ಲ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಜುಲೈ 31ರೊಳಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಸರ್ಕಾರಿ ನೌಕರರಕಿೆ ಪತ್ರ ಸಲ್ಲಿಸವುದು ಕಡ್ಡಾಯ.
ಹೆಚ್ೞಿನ ಮಾಹಿತಿಗೆ ಜಾಲತಾಣ: http://recruitment.iisc.ac.in/NonTeaching/ ಇಲ್ಲಿಗೆ ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version