ದಿನದ ಸುದ್ದಿ

ಪರಿಶಿಷ್ಟ ಜಾತಿಯವರಿಗೆ ಜಮೀನು ಪಡೆಯಲು ಅರ್ಜಿ ಅಹ್ವಾನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಬಳ್ಳಾರಿ : ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ ಹಾಗೂ ಭೋವಿ ಅಭಿವೃದ್ಧಿ ನಿಗಮಗಳ ವತಿಯಿಂದ ಪರಿಶಿಷ್ಟ ಜಾತಿಯ ಜನರಿಗೆ ಭೂ ಒಡೆತನ ಯೋಜನೆಯಡಿ ಬಳ್ಳಾರಿ, ಹರಪನಹಳ್ಳಿ, ಸಂಡೂರು ತಾಲ್ಲೂಕಿನ ಜಮೀನುಗಳನ್ನು ಖರೀದಿಸಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಮಾ.26 ಕೊನೆಯ ದಿನಾಂಕವಾಗಿದ್ದು, ನಂತರ ಬಂದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಬಳ್ಳಾರಿ ತಾಲೂಕಿನ ಜಾಲಿಹಾಳು ಗ್ರಾಮದ ಸರ್ವೇನಂ 6/ಎ/3, 6/ಎ/4, 5/3, 103/ಎ/1, 6/ಎ/1, 6/ಎ/2, 6/ಎ/2, ಒಟ್ಟು ವಿಸ್ತೀರ್ಣ 16.42, ಅಸುಂಡಿ ಸರ್ವೇನಂ 456. ವಿ: 6.93, ಹಾಗೂ ತಲಮಾಮಿಡಿ ಗ್ರಾಮದ ಸರ್ವೇನಂ 160, ಒಟ್ಟು ವಿಸ್ತೀರ್ಣ 16.64, ಸಂಡೂರು ತಾಲೂಕಿನ ಕುಡಿತಿನಿ ಗ್ರಾಮದ ಸರ್ವೇನಂ 161ಸಿ, 160ಎ, ಒಟ್ಟು ವಿಸ್ತೀರ್ಣ 3.89 ಎಕರೆ ಹಾಗೂ ಎಳುಬೆಂಚೆ ಗ್ರಾಮದ ಸರ್ವೇ ನಂಬರ್ 99ಎ,100/ಬಿ,ಒಟ್ಟು ವಿಸ್ತೀರ್ಣ 11.76 ಎಕರೆಗಳನ್ನು ಹರಪನಹಳ್ಳಿ ತಾಲೂಕಿನ ಶಿವಪೂರ, ಇಟ್ಟಗುಡಿ ಗ್ರಾಮದ 165/ಸಿ, 14/ಎ, ಒಟ್ಟು ವಿಸ್ತೀರ್ಣ 6.67, ಹಾಗೂ ಚಿಗಟೆರಿ ಗ್ರಾಮ ಗಜಪುರದ ಸರ್ವೇನಂ 493/1, 493/2, 493/3, ಒಟ್ಟು ವಿಸ್ತೀರ್ಣ 28.36, ಎಕರೆ ಜಮೀನುಗಳನ್ನು ಖರೀದಿಸಬೇಕಾಗಿರುತ್ತದೆ. ಆದ್ದರಿಂದ ಸದರಿ ಗ್ರಾಮಗಳಿಂದ 10 ಕಿಲೋ ಮೀಟರ್ ಸುತ್ತಳತೆಯ ಗ್ರಾಮದ ಪರಿಶಿಷ್ಟ ಜಾತಿಯ ಜನಾಂಗದವವರು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ | ಭಾರತ ಸರ್ವಾಧಿಕಾರಿ ಆಡಳಿತದತ್ತ ಜಾರಿಕೆ : ಸ್ವಿಡನ್ ಸ್ವಾಯತ ಸಂಸ್ಥೆಯೊಂದರ ಸರ್ವೇಕ್ಷಣಾ ವರದಿ

ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು ಮತ್ತು ಷರತ್ತುಗಳು: ಅರ್ಜಿದಾರರು ಪರಿಶಿಷ್ಟ ಜಾತಿಯ ಜನಾಂಗಕ್ಕೆ ಸೇರಿದ ಮಹಿಳೆಯರಾಗಿರಬೇಕು ಹಾಗೂ ಕನಿಷ್ಠ 15 ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. 18ರಿಂದ 50 ವರ್ಷದೊಳಗಿನ ವಯೋಮಾನದವರಾಗಿರಬೇಕು.

ಆಧಾರ್ ಸಂಖ್ಯೆ ಕಡ್ಡಾಯವಾಗಿ ಹೊಂದಿರಬೇಕು. ಅರ್ಜಿದಾರರು ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶವಾದಲ್ಲಿ ರೂ. 1,50,000/- ಹಾಗೂ ನಗರ ಪ್ರದೇಶದವರಿಗೆ ರೂ 2,00,000/- ಮಿತಿಯೊಳಗಿರಬೇಕು.

ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು, ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು, ವಾಸಿಸುವ ಸ್ಥಳದಿಂದ ಜಮೀನಿಗೆ 10 ಕಿ.ಮೀ ಅಂತರದೊಳಗಿರಬೇಕು, ಭೂ ರಹಿತ ಕೃಷಿ ಮಹಿಳಾ ಕಾರ್ಮಿಕರಾಗಿರ ತಕ್ಕದ್ದು ಮತ್ತು ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸೌಲಭ್ಯ ಒದಗಿಸಲಾಗಿವುದು.

ಫಲಾಪೇಕ್ಷಿಯು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು

ಪಾಸ್‍ಪೋರ್ಟ್ ಅಳತೆಯ ಭಾವಚಿತ್ರದ ಅರ್ಜಿ, ಇತ್ತಿಚಿನ ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ (ಆರ್.ಡಿ ಸಂಖ್ಯೆ ಇರುವ ತಹಸೀಲ್ದಾರರಿಂದ ಪಡೆದಿರುವ ಜಾತಿ ಪ್ರಮಾಣ ಪತ್ರವನ್ನು ಅರ್ಜಿಗೆ ದೃಡೀಕರಿಸಿ ಪ್ರತಿಯನ್ನು ಲಗತ್ತಿಸಬೇಕು), ಇತ್ತೀಚಿನ ಕುಟುಂಬದ ವಾರ್ಷಿಕ ವರಮಾನದ ಆದಾಯ ಪ್ರಮಾಣ ಪತ್ರ ಆರ್.ಡಿ ಸಂಖ್ಯೆ ಇರುವ ತಹಸೀಲ್ದಾರರಿಂದ ಪಡೆದಿರುವ ಆದಾಯ ಪ್ರಮಾಣ ಪತ್ರದ ದೃಡೀಕರಿಸಿದ ಪ್ರತಿ ಲಗತ್ತಿಸಬೇಕು), ಕುಟುಂಬದ ಪಡಿತರ ಚೀಟಿ (ರೇಷನ್ ಕಾರ್ಡ್) (ದೃಡೀಕರಿಸಿದ ಪ್ರತಿ ಲಗತ್ತಿಸಬೇಕು), ಆಧಾರ್ ಕಾರ್ಡ್ ಪ್ರತಿ / ಮತದಾರರ ಗುರುತಿನ ಚೀಟಿ (ದೃಡೀಕರಿಸಿದ ಪ್ರತಿಗಳನ್ನು ಲಗತ್ತಿಸಬೇಕು), ಕೋರಿರುವ ಸೌಲಭ್ಯದ ಬಗ್ಗೆ ಹೊಂದಿರುವ ತರಬೇತಿ ಮತ್ತು ಅನುಭವದ ಪತ್ರ.

ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿಯ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು, ಕಚೇರಿ ದೂ.ಸಂ. 08392-245377 ಗೆ ಸಂಪರ್ಕಿಸಲು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version