ದಿನದ ಸುದ್ದಿ
ದಾವಣಗೆರೆ | ಅಗಸ, ಕ್ಷೌರಿಕ ವೃತ್ತಿ ಕಾರ್ಮಿಕರಿಗೆ ಧನ ಸಹಾಯಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ : ಕರ್ನಾಟಕ ರಾಜ್ಯ ಸರ್ಕಾರ ಅಗಸ/ಕ್ಷೌರಿಕ ವೃತ್ತಿಯ ಅಸಂಘಟಿತ ಕಾರ್ಮಿಕರಿಗೆ ಕೋವೀಡ್ ಲಾಕ್‍ಡೌನ್ ಹಿನ್ನೆಲೆ ರೂ. 5000 ಪರಿಹಾರ ಘೋಷಣೆ ಮಾಡಿದ್ದು, ಈ ಪರಿಹಾರವನ್ನು ಪಡೆಯಲು ಸೇವಾ ಸಿಂಧು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಜೂನ್ 30 ರಂದು ಕಡೆಯ ದಿನವೆಂದು ನಿಗದಿಪಡಿಸಲಾಗಿತ್ತು.
ಇದೀಗ ಈ ಅವಧಿಯನ್ನು ಜುಲೈ 10 ರವರೆಗೆ ವಿಸ್ತರಿಸಲಾಗಿದ್ದು, ಫಲಾನುಭವಿಗಳು ಇದರ ಸದುಪಯೋಗ ಪಡೆಯಬೇಕೆಂದು ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿ ಸಾಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243