ದಿನದ ಸುದ್ದಿ
ಅಪರ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ಧಾರವಾಡ : ಕಾನೂನು ಇಲಾಖೆ ನಿರ್ದೇಶನದ ಮೇರೆಗೆ ಧಾರವಾಡ ಜಿಲ್ಲೆಯ 1ನೇ ಅಪರ ಜಿಲ್ಲಾ ಸರಕಾರಿ ವಕೀಲರ ಹುದ್ದೆಗೆ ಹಾಗೂ ಹುಬ್ಬಳ್ಳಿ ತಾಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರಕಾರಿ ವಕೀಲರ ಹುದ್ದೆಗೆ ಹೊಸದಾಗಿ ನೇಮಕ ಮಾಡಿಕೊಳ್ಳಲು ಬಾರ್ ಅಸೊಸಿಯೇಷನ್‍ದ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು ಸ್ಥಳೀಯ ಬಾರ್ ಅಸೋಸಿಯೇಷನ್ ಸದಸ್ಯರಾಗಿರಬೇಕು ಹಾಗೂ ಧಾರವಾಡ ಜಿಲ್ಲೆಯ 1ನೇ ಅಪರ ಜಿಲ್ಲಾ ಸರಕಾರಿ ವಕೀಲ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ 10 ವರ್ಷ ಮತ್ತು ಹುಬ್ಬಳ್ಳಿ ತಾಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರಕಾರಿ ವಕೀಲರ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ 7 ವರ್ಷ ವಕೀಲ ವೃತ್ತಿಯ ಅನುಭವ ಹೊಂದಿರಬೇಕು. ಮತ್ತು ಇವರ ನೇಮಕಾತಿಯು ಕರ್ನಾಟಕ ಕಾನೂನು ಅಧಿಕಾರಿಗಳ ನೇಮಕಾತಿ ಸೇವಾ ಷರತ್ತುಗಳ ನಿಯಮಗಳು, 1977 ರಲ್ಲಿ ಹೇಳಲಾದ ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಇದನ್ನೂ ಓದಿ | ಹಲವು ನಾಯಕರ ದಾಖಲೆ ಮುರಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ..!
ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ದಾಖಲಾತಿಗಳೊಂದಿಗೆ ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಮಾರ್ಚ್ 15, 2021 ರೊಳಗಾಗಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243