ದಿನದ ಸುದ್ದಿ
ಬಾಲ ಹಿತೈಷಿ ಯೋಜನೆಯಡಿ ಮಕ್ಕಳನ್ನು ಬೆಳೆಸಲು ಉತ್ಸುಕರಾದವರಿಂದ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ಕೋವಿಡ್-19 ನಿಂದ ಪೋಷಕರನ್ನು ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳಿಗೆ ನೈತಿಕ, ಭಾವನಾತ್ಮಕ ಹಾಗೂ ಸಾಮಾಜಿಕ ನೆರವನ್ನು ಒದಗಿಸಿ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಬೆಂಬಲ ನೀಡುವ ಸಲುವಾಗಿ ಬಾಲ ಹಿತೈಷಿ (ಮಾರ್ಗದರ್ಶಕತ್ವ / ಮೆಂಟರ್ಶಿಪ್) ಎಂಬ ಹೊಸ ಯೋಜನೆಯನ್ನು ಮಕ್ಕಳ ರಕ್ಷಣಾ ನಿರ್ದೇಶನಾಲಯ ಜಾರಿಗೊಳಿಸಿ ಮಕ್ಕಳನ್ನು ಬೆಳೆಸಲು ಉತ್ಸುಕರಾದವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಇಬ್ಬರೂ ಪೋಷಕರು ಅಥವಾ ಪೋಷಕರಲ್ಲಿ ಒಬ್ಬರನ್ನು ಕಳೆದುಕೊಂಡು ಆಘಾತಕ್ಕೆ ಒಳಾಗಾಗಿರುವ ಮತ್ತು ವಿಸೃತ ಕುಟುಂಬ/ಏಕ ಪೋಷಕರಿರುವ ಮಗುವನ್ನು ಅದರಿಂದ ಹೊರತರುವುದು ಇದರ ಉದ್ದೇಶವಾಗಿದೆ. ಅರ್ಜಿದಾರರು ಈ ಮಕ್ಕಳಿಗೆ ದೀರ್ಘಕಾಲಿಕವಾಗಿ ಶೈಕ್ಷಣಿಕ, ಸಾಮಾಜಿಕವಾಗಿ ಸಾಮಥ್ರ್ಯ ಸಾಧಿಸಲು ಸಹಾಯ ಮಾಡಲು ಮತ್ತು ಮಾರ್ಗದರ್ಶನ ನೀಡಲು ಆಸಕ್ತಿ ಹೊಂದಿರಬೇಕು.
ಮಗುವಿಗೆ ಮಾರ್ಗದರ್ಶನ ನೀಡಲು ಉತ್ಸುಕರಾಗಿರುವ ಯಾವುದೇ ವ್ಯಕ್ತಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಮಾರ್ಗದರ್ಶಕರಾಗಿ ನೋಂದಣಿಗೆ ಅರ್ಜಿ ನಮೂನೆಯು (ಅನುಬಂಧ1) ನಿರ್ದೇಶನಾಲಯದ ವೆಬ್ ಸೈಟ್ https:/icps.karnataka.gov.in ನಲ್ಲಿ ಡಿಜಿಟಲ್ ಫಾರ್ಮ್ ಲಭ್ಯವಿದ್ದು, ಈ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಜಿಲ್ಲಾ ಬಾಲಭವನವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243