ದಿನದ ಸುದ್ದಿ
ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆಯಡಿ ಅರ್ಜಿ ಆಹ್ವಾನ
ಸುದ್ದಿದಿನ,ಕಲಬುರಗಿ : ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಂತ್ರಾಲಯ (ಎಂಒಎಫ್‍ಪಿಐ) ವು ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳ ಪಾಲುದಾರಿಕೆಯೊಂದಿಗೆ ಕಿರು ಸಂಸ್ಕರಣಾ ಉದ್ದಿಮೆಗಳ ಉನ್ನತೀಕರಣಕ್ಕಾಗಿ ಹಣಕಾಸು, ತಾಂತ್ರಿಕ ಹಾಗೂ ವ್ಯಾಪಾರ ಬೆಂಬಲ ಒದಗಿಸಲು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ದಗೊಳಿಸುವಿಕೆ ಯೋಜನೆ ಪ್ರಾರಂಭಿಸಿದೆ ಎಂದು ಕಲಬುರಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಅವರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಒಂದು ಉತ್ಪನ್ನದಡಿ ತೊಗರಿ ಬೆಳೆ ಆಯ್ಕೆಯಾಗಿರುತ್ತದೆ. ವೈಯಕ್ತಿಕ ಕಿರು ಆಹಾರ ಸಂಸ್ಕರಣಾ ಘಟಕಗಳ ಉನ್ನತೀಕರಣಕ್ಕಾಗಿ ಸಹಾಯಧನ ಬೆಂಬಲ ಶೇ. 35 ರಷ್ಟು ಸಾಲ ಸಂಪರ್ಕಿತ ಅನುದಾನ ನೀಡಲಾಗುತ್ತಿದೆ. ಆಸಕ್ತಿವುಳ್ಳ ಉದ್ದಿಮೆದಾರರು ಪಿಎಂಎಫ್‍ಎಮ್‍ಇ ವೆಬ್‍ಸೈಟ್‍ದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ | ರಾತ್ರೋ ರಾತ್ರಿ ಕೊಚ್ಚಿ ಕೊಂದರು ; ಡಬಲ್ ಮರ್ಡರ್ ಗೆ ಹಾವೇರಿ ಜನ ಬೆಚ್ಚಿಬಿದ್ದರು..!
ಸ್ವಸಹಾಯ ಗುಂಪುಗಳು, ಸಹಕಾರ ಸಂಘಗಳು ಹಾಗೂ ರೈತ ಉತ್ಪಾದಕ ಸಂಘಗಳು ಆಫ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಮತ್ತಿತರ ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು http://pmfme.mofpi.gov.in ವೆಬ್‍ಸೈಟ್‍ನ್ನು ಅಥವಾ ಕಲಬುರಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243