ದಿನದ ಸುದ್ದಿ

ನಿಗಮ – ಮಂಡಳಿಗೆ ನೂತನ ಅಧ್ಯಕ್ಷರುಗಳ ನೇಮಕ ; ಇಲ್ಲಿದೆ ಸಂಪೂರ್ಣ ವಿವರ

Published

on

ಸುದ್ದಿದಿನ ಡೆಸ್ಕ್ : ರಾಜ್ಯ ಇಪ್ಪತ್ತೊಂದು ನಿಗಮ-ಮಂಡಳಿಗೆ ನೂತನ ಅಧ್ಯಕ್ಷರುಗಳನ್ನು ನೇಮಕಮಾಡಿ ಆದೇಶ ಹೊರಡಿಸಿದೆ‌. ಈ ಕೆಳಕಂಡಂತಿದೆ ಅಧ್ಯಕ್ಷರುಗಳ ಪಟ್ಟಿ.

1.ಅಲೆಮಾರಿ/ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಯಾದಗಿರಿ ಜಿಲ್ಲೆಯ ದೇವೇಂದ್ರ ನಾಥ್ ಕೆ. ನಾದ್

2. ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ತುಮಕೂರು ಜಿಲ್ಲೆಯ ಚಂಗಾವರ ಮಾರಣ್ಣ

3.ಮೈಸೂರು ವಸ್ತ ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾಗಿ ಮೈಸೂರು ಜಿಲ್ಲೆಯ ಎಂ.ಕೆ. ಶ್ರೀನಿವಾಸ್

4.ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷರಾಗಿ ಕೋಲಾರ ಜಿಲ್ಲೆಯ ಎಂ.ಕೆ. ವಾಸುದೇವ್

5.ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷರಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಎನ್.ಎಂ. ರವಿನಾರಾಯಣ ರೆಡ್ಡಿ

6.ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾಗಿ ಬೆಂಗಳೂರಿನ ಬಿ‌.ಸಿ. ನಾರಾಯಣಸ್ವಾಮಿ

7.ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ವಿಜಯಪುರ ಜಿಲ್ಲೆಯ ಚಂದ್ರಶೇಖರ ಕವಟಗಿ

8.ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಉಡುಪಿ ಜಿಲ್ಲೆಯ ಮಣಿರಾಜ ಶೆಟ್ಟಿ

9.ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾಗಿ ಉತ್ತರ ಕನ್ನಡ ಜಿಲ್ಲೆಯ ಗೋವಿಂದ ಜಟ್ಟಪ್ಪ ನಾಯ್ಕ

10.ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾಗಿ ಮೈಸೂರು ಜಿಲ್ಲೆಯ ಎಂ. ಶಿವಕುಮಾರ್

11.ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾಗಿ ಶಿವಮೊಗ್ಗ ಜಿಲ್ಲೆಯ ಎನ್. ರೇವಣಪ್ಪ ಕೋಳಗಿ

12.ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷರಾಗಿ ರಾಮನಗರ ಜಿಲ್ಲೆಯ ಗೌತಮ್ ಗೌಡ ಎಂ.

13.ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿ ಕೊಡಗು ಜಿಲ್ಲೆಯ ಎ‌ನ್.ಎಂ. ರವಿ ಕಾಳಪ್ಪ

14.ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ದಕ್ಷಿಣಕನ್ನಡ ಜಿಲ್ಲೆಯ ಎ.ವಿ. ತೀರ್ಥರಾಮ

15.ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆ.ವಿ. ನಾಗರಾಜ

16.ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬೆಳಗಾವಿ ಜಿಲ್ಲೆಯ ಮಾರುತಿ ಮಲ್ಲಪ್ಪ ಅಷ್ಟಗಿ

17.ಕಾಡಾ (ತುಂಗಭದ್ರಾ ಯೋಜನೆ) ಅಧ್ಯಕ್ಷರಾಗಿ ರಾಯಚೂರು ಜಿಲ್ಲೆಯ ಕೊಲ್ಲಾ ಶೇಷಗಿರಿ ರಾವ್

18.ಕಾಡಾ(ಕಾವೇರಿ ಜಲಾನಯನ ಯೋಜನೆ) ಅಧ್ಯಕ್ಷರಾಗಿ ಚಾಮರಾಜನಗರ ಜಿಲ್ಲೆಯ ಜಿ. ನಿಜಗುಣರಾಜು

19.ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾಗಿ ಬೆಳಗಾವಿ ಜಿಲ್ಲೆಯ ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿ

20.ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬೆಂಗಳೂರಿನ ಎಂ. ಸರವಣ

21.ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಚಿಕ್ಕಮಗಳೂರು ಜಿಲ್ಲೆಯ ಕೆ.ಪಿ. ವೆಂಕಟೇಶ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version