ದಿನದ ಸುದ್ದಿ

ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಷೇಧ ಮಸೂದೆಗೆ ಅನುಮೋದನೆ

Published

on

ಸುದ್ದಿದಿನ ಡೆಸ್ಕ್ : ಲೋಕಸಭೆಯು ನಿನ್ನೆ ಧ್ವನಿಮತದ ಮೂಲಕ ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಷೇಧ ಮಸೂದೆ-2021ಗೆ ಅನುಮೋದನೆ ನೀಡಿದೆ.

ಸಾಕಷ್ಟು ಚರ್ಚೆಯ ನಂತರ ಸದನ ಮಸೂದೆಗೆ ಅಂಗೀಕಾರ ನೀಡಿತು. ಕ್ರೀಡೆಗಳಲ್ಲಿ ಡೋಪಿಂಗ್ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸಲು, ರಾಷ್ಟ್ರೀಯ ಡೋಪಿಂಗ್ ವಿರೋಧಿ ಏಜೆನ್ಸಿ-ನಾಡಾದ ಸಂವಿಧಾನವನ್ನು ಈ ಮಸೂದೆ ಒದಗಿಸುತ್ತದೆ. ಇದರ ಕಾರ್ಯಗಳು ಡೋಪಿಂಗ್ ವಿರೋಧಿ ಚಟುವಟಿಕೆಗಳನ್ನು ಯೋಜಿಸುವುದು, ಅನುಷ್ಠಾನಗೊಳಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದರ ಜೊತೆಗೆ, ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆಗಳನ್ನು ತನಿಖೆ ಮಾಡಲು ಅವಕಾಶ ನೀಡಲಿದೆ.

ಇದು ಕ್ರೀಡೆಗಳಲ್ಲಿ ಡೋಪಿಂಗ್ ವಿರುದ್ಧ, ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆಯ ಅಂತಾರಾಷ್ಟ್ರೀಯ ಸಮಾವೇಶದ ಕಟ್ಟುಪಾಡುಗಳು ಮತ್ತು ಬದ್ಧತೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತದೆ. ಈ ಶಾಸನ ಕ್ರೀಡಾಪಟುಗಳು, ಕ್ರೀಡಾಪಟುಗಳ ಬೆಂಬಲ ಸಿಬ್ಬಂದಿ ಮತ್ತು ಇತರ ವ್ಯಕ್ತಿಗಳು ಕ್ರೀಡೆಗಳಲ್ಲಿ ಡೋಪಿಂಗ್‌ನಲ್ಲಿ ತೊಡಗುವುದನ್ನು ನಿಷೇಧಿಸುತ್ತದೆ.

ಮಸೂದೆ ಕುರಿತು ಮಾತನಾಡಿದ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ಈ ಮಸೂದೆ, ಕ್ರೀಡಾ ವ್ಯಕ್ತಿಗಳ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಮತ್ತು ಅವರು ಡೋಪಿಂಗ್ ವಿರೋಧಿ ಆರೋಪಗಳನ್ನು ಎದುರಿಸುವಾಗ, ವಿಶೇಷವಾಗಿ ತಮ್ಮ ಅಭಿಪ್ರಾಯ ಮಂಡಿಸಲು ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version