ದಿನದ ಸುದ್ದಿ

‘ಏರ್ ಸ್ಟ್ರೈಕ್‍‌’ ನಲ್ಲಿ ನಿಜಕ್ಕೂ ಉಗ್ರರು ಸತ್ತಿದ್ದಾರ? : ಸಾಕ್ಷಿ ಕೇಳಿದ ವಿಪಕ್ಷ ನಾಯಕರು

Published

on

ಸುದ್ದಿದಿನ ಡೆಸ್ಕ್ : ಭಾರತೀಯ ವಾಯುಪಡೆಯ ಏರ್ ಸ್ಟ್ರೈಕ್ ಬಗ್ಗೆ ಅನುಮಾನ ಮೂಡಿದ್ದು, 300 ಉಗ್ರರು ಸತ್ತಿದ್ದಾರೆ ಎಂದು ಹೇಳಿದವರಾರು? ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್​ ಹಿರಿಯ ನಾಯಕ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.

ಏರ್​ ಚೀಫ್ ಮಾರ್ಷಲ್​ ಸಾವಿನ ಸಂಖ್ಯೆ ಹೇಳಲು ನಿರಾಕರಿಸಿದ್ದಾರೆ. ಯಾವುದೇ ಹಾನಿ ಉಂಟಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.ಹೀಗಿರುವಾಗ 300-350 ಜನ ಸತ್ತಿದ್ದಾರೆ ಎನ್ನುವ ಲೆಕ್ಕ ಹೇಳಿದವರಾರು? ಎಂದು ಗುಡುಗಿದ್ದಾರೆ.

ದಿಗ್ವಿಜಯ್ ಸಿಂಗ್

ಏರ್ ಸ್ಟ್ರೈಕ್‍ ಪುರಾವೆ ಎಲ್ಲಿ? ಉಗ್ರರ ಮೇಲಿನ ದಾಳಿಯ ಬಗ್ಗೆ ಪ್ರತಿಪಕ್ಷಗಳು ಪುರಾವೆ ಕೇಳ್ತಿವೆ ಎಂದು ಕೇಂದ್ರ ಸರ್ಕಾರಕ್ಕೆ ‘ಏರ್ ಸ್ಟ್ರೈಕ್‍’ ಸಾಕ್ಷಿ ಕೇಳಿದ್ದಾರೆ ದಿಗ್ವಿಜಯ್‍ ಸಿಂಗ್. ಬಿನ್‍ ಲಾಡೆನ್‍ ಹತ್ಯೆಗೈದ ಅಮೆರಿಕಾ ಜಗತ್ತಿನ ಮುಂದೆ ಸಾಕ್ಷಿ ಇಟ್ಟಿತ್ತು,‌ನಾವು ಕೂಡಾ ದಾಳಿಯ ಬಗ್ಗೆ ಜಗತ್ತಿಗೆ ಸಾಕ್ಷಿ ತೋರಿಸಬೇಕು ಎಂದಿದ್ದಾರೆ.

ನವಜೋತ್ ಸಿಂಗ್ ಸಿದ್ದು

ನೆಲಸಮ ಮಾಡಿದ್ದು ಉಗ್ರರನ್ನೋ? ಮರಗಳನ್ನೋ? ನೀವು ನೆಲಸಮ ಮಾಡಿರುವುದು ಉಗ್ರರನ್ನೋ ಅಥವಾ ಮರಗಳನ್ನೋ? ದಾಳಿಯಲ್ಲಿ ಮೃತಪಟ್ಟಿರುವವರ ಸಂಖ್ಯೆ ಎಷ್ಟು? ಕೇಂದ್ರ ಸರ್ಕಾರದ ವಿರುದ್ಧ ನವಜೋತ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಇದರ ಉದ್ದೇಶವೇನು? ಇದು ಚುನಾವಣಾ ಗಿಮಿಕ್ ಅಲ್ಲವೇ? ಶತ್ರುಗಳ ವಿರುದ್ಧ ಹೋರಾಡುವಲ್ಲಿ ನಮ್ಮ ನಾಡಿಗೆ ಮೋಸವಾಗಿದೆ. ಸೈನ್ಯವನ್ನು ರಾಜಕೀಯಕ್ಕೆ ಒಳಪಡಿಸುವುದನ್ನು ನಿಲ್ಲಿಸಿ.ಸಿದ್ದು ಟ್ವೀಟ್ ನಲ್ಲಿ ಯಡಿಯೂರಪ್ಪ, ಅಹ್ಲುವಾಲಿಯಾ ಹೇಳಿಕೆ ಪ್ರಸ್ತಾಪಿಸಿದ್ದಾರೆ.

ಕಪಿಲ್ ಸಿಬಲ್

ವೆಬ್ ಸೈಟ್ ಗಳು ಸುಳ್ಳು ಹೇಳ್ತಾವಾ?
ಉಗ್ರಗಾಮಿ ಸತ್ತಿಲ್ಲ ಎಂದು ಕೆಲ ವೆಬ್ ಸೈಟ್ ಗಳು ವರದಿ ಮಾಡಿದ್ದು,ಉಗ್ರರು ಸತ್ತಿರುವ ಯಾವುದೇ ಪುರಾವೆ ಇಲ್ಲವೆಂದು ಹೇಳಿವೆ.
ಅಂತರಾಷ್ಟ್ರೀಯ ವೆಬ್ ಸೈಟ್ ಸುಳ್ಳು ಹೇಳುತ್ತವೆಯೆ?‌ ಎಂದು ಸಾಕ್ಷಿ ಕೇಳಿದ್ದಾರೆ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್.

ನೀವು ಭಯೋತ್ಪಾದನೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದೀರಿ. ಉಗ್ರರ ಸಾವಿನ ಪುರಾವೆ ನೀಡುವಂತೆ ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.

ಮನೋಜ್ ತಿವಾರಿ

ಅಮಿತ್ ಶಾಗೆ ಮಾಹಿತಿ ಎಲ್ಲಿಂದ ಸಿಕ್ತು ?
ಏರ್ ಚೀಫ್ ಮಾರ್ಷಲ್ ಸಾವಿನ ಸಂಖ್ಯೆ ಗೊತ್ತಿಲ್ಲ ಎಂದಿದ್ದಾರೆ. ಆದರೆ ಅಮಿತ್ ಶಾ ಸಾವಿನ ಸಂಖ್ಯೆ 250 ಅಂತಾ ಹೇಳಿದ್ದಾರೆ.ಅಮಿತ್ ಶಾಗೆ ಮಾಹಿತಿ ಎಲ್ಲಿಂದ ಸಿಕ್ತು ?ಕಾಂಗ್ರೆಸ್ ಮುಖಂಡ ಮನೋಜ್ ತಿವಾರಿ ಪ್ರಶ್ನೆ
ಬಿಜೆಪಿ ರಾಷ್ಟ್ರಧ್ಯಕ್ಷರು ಈ ಬಗ್ಗೆ ಉತ್ತರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ

ಎಲ್ಲಿ,ಎಷ್ಟು ಬಾಂಬ್‍ಗಳನ್ನು ಹಾಕಲಾಗಿದೆ?
ಏರ್‌ಸ್ಟ್ರೈಕ್ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಕೊಡುವಂತೆ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ಯಾವ ಪ್ರದೇಶದ ಮೇಲೆ ದಾಳಿ ನಡೆಸಲಾಗಿದೆ? ಎಷ್ಟು ಬಾಂಬ್‍ಗಳನ್ನು ಉಗ್ರರ ಮೇಲೆ ಹಾಕಲಾಗಿದೆ? ಏರ್ ಸ್ಟ್ರೈಕ್ ನಲ್ಲಿ ಎಷ್ಟು ಉಗ್ರರು ಸಾವನ್ನಪ್ಪಿದ್ದಾರೆ? ವಿದೇಶಿ ಮಾಧ್ಯಮಗಳಲ್ಲಿ ಯಾರು ಮೃತಪಟ್ಟಿಲ್ಲ ಎಂದು ವರದಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿ ಎಂದಿದ್ದಾರೆ ಮಮತಾ ಬ್ಯಾನರ್ಜಿ.

ಮೆಹಬೂಬ

ಮಾಹಿತಿ ತಿಳಿದುಕೊಳ್ಳುವುದು ನಮ್ಮ ಹಕ್ಕು
ಏರ್‌ಸ್ಟ್ರೈಕ್ ಬಗ್ಗೆ ನಮಗೆ ಸಂಪೂರ್ಣವಾದ ಮಾಹಿತಿ ಕೊಡಿ. ಮಾಹಿತಿ ತಿಳಿದುಕೊಳ್ಳುವುದು ನಮ್ಮ ಹಕ್ಕು. ಏರ್‌ಸ್ಟ್ರೈಕ್ ಮಾಹಿತಿ ನೀಡಿ ಎಂದಿದ್ದಾರೆ ಮುಫ್ತಿ ,ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ.

ಗುಂಡೂರಾವ್

ಸೂಕ್ಷ್ಮತಾ ವಿಚಾರಗಳನ್ನು ಬಿಟ್ಟು ಉಳಿದ ವಿಷಯ ಬಹಿರಂಗಪಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ನಮ್ಮ ಸೈನಿಕರ ಕಾರ್ಯ ವೈಖರಿ ಬಗ್ಗೆ ಹೆಮ್ಮೆಯಿದೆ,ಗೌರವವಿದೆ.ಏರ್ ಸ್ಟ್ರೈಕ್ ಕುರಿತು ಮಾಧ್ಯಮಗಳಲ್ಲಿ ಹಲವು ಪ್ರಶ್ನೆಗಳು ಎದ್ದಿವೆ.
ಉಗ್ರರ ಮೇಲಿನ ದಾಳಿ ಬಗ್ಗೆ ಪ್ರಶ್ನೆ ಕೇಳುವುದರಲ್ಲಿ ತಪ್ಪಿಲ್ಲ.ಕುತೂಹಲದಿಂದ ಈ ಪ್ರಶ್ನೆ ಕೇಳಲಾಗುತ್ತಿದೆ‌ ಎಂದಿದ್ದಾರೆ.

ಈ ಎಲ್ಲ ವಿದ್ಯಾಮಾನಗಳ ಹಿನ್ನೆಲೆಯಲ್ಲಿ, ನಾವು ನಮ್ಮ ಗುರಿ ತಲುಪಿದ್ದೀವಿ.ನಿಗದಿ ಪಡಿಸಿದ್ದ ಗುರಿಗಳ ಮೇಲೆ ನಾವು ನಿಖರವಾಗಿ ದಾಳಿ ಮಾಡಿದ್ದೇವೆ‌ ಎಂದು
ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಸ್ಪಷ್ಟನೆ ನೀಡಿದೆ.

ಸಾವು-ನೋವುಗಳ ಲೆಕ್ಕಾಚಾರ ನಮ್ಮ ಕೆಲಸವಲ್ಲ. ಸಾವು-ನೋವುಗಳ ಲೆಕ್ಕಾಚಾರ ಕೇಂದ್ರ ಸರ್ಕಾರ ನೀಡುತ್ತದೆ. ‌ಅರಣ್ಯದ ಖಾಲಿ ಜಾಗದಲ್ಲಿ ಬಾಂಬ್ ಹಾಕಿಲ್ಲ. ಖಾಲಿ ಜಾಗದಲ್ಲಿ ಬಾಂಬ್ ಹಾಕಿದ್ದರೆ ಅವರೇಕೆ ಇಷ್ಟು ಗಂಭೀರವಾಗುತ್ತಿದ್ರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version