ಸಿನಿ ಸುದ್ದಿ
ಎಫ್ಐಆರ್ ರದ್ದು ಕೋರಿ ಸರ್ಜಾ ಅರ್ಜಿ ; ಅರ್ಜುನ್ ಸರ್ಜಾ ಸಲ್ಲಿಸಿರುವ ಅರ್ಜಿಯಲ್ಲಿ ಏನಿದೆ..?
ಸುದ್ದಿದಿನ ಡೆಸ್ಕ್ : ಎಫ್.ಐ.ಆರ್ ರದ್ದುಗೊಳಿಸುವಂತೆ ಅರ್ಜುನ್ ಸರ್ಜಾ ಅರ್ಜಿ ಸಲ್ಲಿಸಿದ್ದಾರೆ. ಯಾವ ಕಾರಣ ನೀಡಿ ಎಫ್ಐಆರ್ ರದ್ದು ಕೋರಿದ್ದಾರೆ ಅರ್ಜು ಸರ್ಜಾ..? ಎಂಬ ಪ್ರಶ್ನೆ ಉತ್ತರ ಇಲ್ಲಿದೆ ಓದಿ.
- ಅರ್ಜುನ್ ಸರ್ಜಾ 36 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದು, ಯಾವುದೇ ಕಪ್ಪು ಚುಕ್ಕೆ ಇಲ್ಲ.
- 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ನಾಲ್ಕು ಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ.
- 37ವರ್ಷಗಳ ಸಿನಿಮಾ ಇತಿಹಾಸದಲ್ಲಿ ಗಾಜಿನಷ್ಟು ಶುದ್ದವಾಗಿದ್ದಾರೆ ಸರ್ಜಾ.
- ಅರ್ಜುನ್ ಸರ್ಜಾ ಹನುಮನ್ ದೇವರ ಭಕ್ತರಾಗಿದ್ದಾರೆ.
- ಚೈನೈನಲ್ಲಿ 32ಅಡಿ ಉದ್ದ 17ಅಡಿ ಅಗಲದ ಅಜಂನೇಯ ಮೂರ್ತಿ ನಿರ್ಮಾಣ ಮಾಡ್ತಿದ್ದಾರೆ.
- ಸಿನಿಮಾ ರಂಗದ ಚಿಕ್ಕ ಕಾರ್ಮಿಕರಿಂದ ಹಿಡಿದು ದೊಡ್ಡ ಸಿನಿ ರಂಗದವರು ಗೌರವ ನೀಡುತ್ತಾರೆ.
- ಶ್ರುತಿ ಆರೋಪ ಅಷ್ಟೋಂದು ಮಹತ್ವ ಇಲ್ಲ, ಸುಳ್ಳು ಆರೋಪ ಮಾಡಿದ್ದಾರೆ.
- ಕೇವಲ ಪ್ರಚಾರಕ್ಕಾಗಿ ಅರ್ಜುನ್ ಸರ್ಜಾ ವಿರುದ್ದ ಆರೋಪ ಮಾಡುತ್ತಿದ್ದಾರೆ.
- ಅರ್ಜುನ್ ಸರ್ಜಾ ಮಾತ್ರವಲ್ಲ ಇಡೀ ಕುಟುಂಬ ಮುಜುಗರಕ್ಕೆ ಈಡಾಗಿದ್ದಾರೆ.
- ಸಮಾಜದಲ್ಲಿ ಕೆಟ್ಟಹೆಸರು ಬರುವಂತೆ ಮಾಡಿದ್ದಾರೆ ಶ್ರುತಿ ಹುನ್ನಾರ ಮಾಡಿದ್ದಾರೆ.
- ಸಿನಿಮಾದಲ್ಲಿ ಕಥೆಗೆ ತಕ್ಕಂತೆ ಗಂಡ ಹೆಂಡತಿ ರೋಮ್ಯಾಂಟಿಕ್ ಸೀನ್ ಮಾಡಲಾಗಿದೆ.
- ಆ ಸಿನಿಮಾ ರೀಲಿಜ್ ಆಗಿ ಸಕ್ಸಸ್ ಆದಾಗ ಶ್ರುತಿ ಏನ್ ಮಾತನಾಡಿಲ್ಲ.
- ಮೂರು ವರ್ಷದ ನಂತರ ಸುಖಾ ಸುಮ್ಮನೆ ಮಾನಹರಣ ಮಾಡ್ತಿದ್ದಾರೆ.
- ಸುಳ್ಳು ಆರೋಪದಿಂದ ಅರ್ಜುನ್ ಸರ್ಜಾ ಕುಟುಂಬ ಮುಜುಗರಕ್ಕೆ ಈಡಾಗಿದೆ.
- ಸಮಾಜದಲ್ಲಿ ಕೆಟ್ಟ ಹೆಸರು ಬರುವಂತೆ ಮಾಡಿದ್ದಾರೆ ಶ್ರುತಿ ಒಳಸಂಚು ಮಾಡಿದ್ದಾರೆ.
- ದುರುದ್ದೇಶಪೂರಿತವಾಗಿ ವಿದೇಶದಿಂದಲೂ ಸಮಾಜಿಕ ಜಾಲತಾಣಗಳ ಮೂಲಕ ಮಾನಹಾನಿಕರ ಪೋಸ್ಟ್ ಮಾಡಲಾಗಿದೆ.
- ಶೃತಿ ಮಾಡಿದ ಸುಳ್ಳು ಆರೋಪದಿಂದ ದೇಶ ವಿದೇಶಗಳಲ್ಲಿ ಮಾನಹಾನಿಯಾಗಿದೆ.
ಈ ಅಂಶಗಳ ಹಿನ್ನೆಲೆಯಲ್ಲಿ ಸುಳ್ಳು ದೂರಿನ ತನಿಖೆ ನಡೆಯುತ್ತಿದ್ದು ತಾತ್ಕಾಲಿಕ ತಡೆ ನೀಡುವಂತೆ ಅರ್ಜಿಯಲ್ಲಿ ಮನವಿಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401