ಲೈಫ್ ಸ್ಟೈಲ್

ಸೌಂದರ್ಯವತಿಯರ ಗೆಲುವಿನ ದಾರಿದೀಪ ಜ್ಯೊತ್ಸ್ನಾ ವೆಂಕಟೇಶ್ !

Published

on

ಜ್ಯೊತ್ಸ್ನಾ ವೆಂಕಟೇಶ್

ನೀವು ಬ್ಯೂಟಿ ಪೆಜೆಂಟ್ಗಳಲ್ಲಿ ಭಾಗವಿಸಬೇಕಾ? ಹಾಗಾದರೆ ಈ ಸ್ಟೋರಿ ಓದಲೇ ಬೇಕು…

ಸೌಂದರ್ಯಕ್ಕೆ ಮತ್ತೊಂದು ಹೆಸರೇ ಹೆಣ್ಣು. ಸೌಂದರ್ಯ ಲೋಕಕ್ಕೆ ಹೆಣ್ಣುಮಕ್ಕಳಿಗೂ  ಒಂದು ಅವಿನಾಭಾವ ಸಂಬಂಧ ಬೇರು ಬಿಟ್ಟಿದೆ. ಸೌಂದರ್ಯ ಪ್ರಪಂಚದ ರಣೆಯಾಗಿ ಮೆರಿಯಬೇಕು ಅನ್ನೋ ಕನಸು ಪ್ರತಿ ಮಹಿಳೆಯದು. ಈಗಂತೂ ಬ್ಯೂಟಿ, ಫಿಟ್ ನೆಸ್, ಫ್ಯಾಷನ್ ಟ್ರೆಂಡ್ ಆಗಿ ಹೋಗಿದೆ. ಪ್ರತಿ ಹೆಣ್ಣಲ್ಲೂ ತಾನು ವಿಶ್ವದ ಅತಿ ಸೌಂದರ್ಯವತಿಯಾಗಿ ಮಿಂಚುವ ಹಂಬಲ ಮನೆ ಮಡಿದೆ. ಮಹಿಳೆಯರ ಈ ಆಸೆ ಅರಿತ  ಖಾಸಗಿ ಕಂಪನಿಗಳು, ಹಲವಾರು ಸೌಂದರ್ಯ ಸ್ಪರ್ಧೆಗಳನ್ನ ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕೆ ತಕ್ಕಂತೆ ಮಹಿಳೆಯರೂ ತಮ್ಮ ಕನಸಿನ ಕುದುರೆಯ ಬೆನ್ನೇರಿ ಈ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಂತಹ ಬ್ಯೂಟಿ ಕಾಂಟೆಸ್ಟ್ಗಳು ಎಲ್ಲಾ ವಯೋಮಾನದವರಿಗೂ ಎಲ್ಲಾ ರೀತಿಯ ಮಹಿಳೆಯರನ್ನು ಕೈ ಬೀಸಿ ಕರೆಯುತ್ತಿದೆ. ಇದರ ಬೆನ್ನಲ್ಲೇ  ಫಿಟ್ ನೆಸ್ ಮತ್ತು ಗ್ರೋಮಿಂಗ್ ತರಬೇತಿ ನೀಡುವ ಸಂಸ್ಥೆ ಗಳ ಸಂಖ್ಯೆ ಯೂ ಹೆಚ್ಚಿದೆ.

ಇವತ್ತಿನ  ಯಶಸ್ವಿ ಮಹಿಳೆಯರ ಸಾಲಿಗೆ ಜ್ಯೊತ್ಸನಾ ವೆಂಕಟೇಶ್ ಕೂಡ ಸೇರ್ಪಡೆ ಆಗಿದ್ದಾರೆ.  ನಲವತ್ತರ ಹರೆಯದಲ್ಲೂ ಕಾಲೇಜು ಕನ್ಯಾಮನಿಯರ ಸಡ್ಡು ಹೊಡೆಯುವ ಸೌಂದರ್ಯ ಗಣಿ ಈಕೆ. ಕಣ್ಣಲ್ಲೇ ಕೊಲ್ಲುವ ಆಕರ್ಷಕ ಮೈಮಾಟ ಹೊಂದಿರುವ ಚೆಲುವೆ ಜ್ಯೊತ್ಸನಾ.2014 ನೇ ಸಾಲಿನ  “Mrs.ಸೌತ್ ಇಂಡಿಯಾ” ಟೈಟಲ್ ವಿಜೇತೆ ಈ ಬೆಡಗಿ.  ಅದೇ ವರ್ಷ ಪ್ರತಿಷ್ಠಿತ MIBQ ನಡೆಸಿದ ಸೌಂದರ್ಯ ಸ್ಪರ್ಧೆಯಲ್ಲಿ” Mrs. ಬೆಂಗಳೂರು ” ಆಗಿಯೂ ಮಿಂಚಿದ್ದಾರೆ. 2003 ರಲ್ಲಿ ಶುರುವಾದ ಫ್ಯಾಷನ್ ಪಯಣ ಇಂದಿಗೂ ಮುಂದುವರೆದಿದೆ.. ಅಂದಹಾಗೆ,ಸಾಂಪ್ರದಾಯಿಕ ಕುಟುಂಬ ದಲ್ಲಿ ಜನಿಸಿದ ಜ್ಯೊತ್ಸನಾ ಗೆ ಬಾಲ್ಯ ದಿಂದಲೂ ಫ್ಯಾಷನ್ ಲೋಕದಲ್ಲಿ ಮಿಂಚುವ ಮಹತ್ವಾಕಾಂಕ್ಷೆ ಇತ್ತು. NiFT ನಲ್ಲಿ ಫ್ಯಾಷನ್ ಡಿಸೈನಿಂಗ್ ತರಬೇತಿ ಮುಗಿಸಿಕೊಂಡಿದ್ದಾರೆ. ಜ್ಯೊತ್ಸನಾ 2003ರಲ್ಲಿ ಮದುವೆಯಾಗಿ  ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಅದೇ ವರ್ಷ ಪತಿಯ ಪ್ರೇರಣೆ ಯಿಂದಾಗಿ ಫ್ಯಾಷನ್ ಲೋಕಕ್ಕೆ ಪಾದಾರ್ಪಣೆ ಮಾಡಿ..” Mrs.ಚೆನ್ನೈ ” ಸ್ಪರ್ಧೆ ಯಲ್ಲಿ ಟಾಪ್ 5 ಗೆ ಆಯ್ಕೆಯಾದರು.

https://www.instagram.com/jv_naidu/

“Mrs.ಚೆನ್ನೈ ” ನ ಹಲವಾರು ಸಬ್ ಟೈಟಲ್ ಗಳನ್ನು ಗೆದ್ದರೂ.. ನಂತರ..ತಾಯಿ ಯಾದ ಜ್ಯೊತ್ಸನಾ ತಮ್ಮ ಫ್ಯಾಷನ್ ಕೂಸಿಗೆ ವಿದಾಯ ಹೇಳಿ  ಮಗಳ ಪೋಷಣೆ ಯಲ್ಲಿ  ಬುಜಿ ಆದರು. ಆ ವೇಳೆಗೆ ಆಗಲೇ 80 k.g ಅಷ್ಟು ತೂಕ ಹೆಚ್ಚಿಸಿಕೊಂಡಿದ್ದ ಜ್ಯೊತ್ಸನಾ ಸಾಮಾನ್ಯ ಗೃಹಸ್ತೆಯಂತೆ ಬದುಕುತ್ತಿದ್ದರು. 2013 ರಲ್ಲಿ ತನ್ನ ಕನಸುಗಳನ್ನು ನೆನೆದ ಜ್ಯೊತ್ಸನಾ ಮತ್ತೆ ಫ್ಯಾಷನ್ ದುನಿಯಾದಲ್ಲಿ ಮಿಂಚುವ ಹೊಸ ಹುರುಪು ಕಂಡರು.ಸುಮಾರು ಒಂದು ವರ್ಷದ ಕಠಿಣ ಶ್ರಮದಿಂದ 58 k.Gಗೆ ತೂಕ ಇಳಿಸಿಕೊಂಡು ಬ್ಯೂಟಿ ಕ್ವೀನ್ ಆಗಿ ಮೆರೆದರು. ದೆಹಲಿಯಲ್ಲಿ ನೆಡೆದ ಸ್ಪರ್ಧೆ ಯಲ್ಲಿ Mrs.ಬೆಂಗಳೂರು ಆಗಿ ಗೆದ್ದರೂ ಕೊಡ.

2013 ರಿಂದ ಇವತ್ತಿಗೂ ಈಕೆ ಹಿಂತಿರುಗಿ ನೋಡಲೇ ಇಲ್ಲ. ಫ್ಯಾಷನ್ ದುನಿಯಾದಲ್ಲಿ ತನ್ನದೇ ವಿಶಿಷ್ಟ ಚಾಪು ಮೂಡಿಸಿರುವ ಜ್ಯೊತ್ಸನಾ ಫಿಟ್ ನೆಸ್ ಮತ್ತು ಗ್ರೂಮಿಂಗ್ ಎಕ್ಸ್ಪ್ರೆಟ್ ಆಗಿ ಮಿಂಚುತ್ತಿದ್ದಾರೆ.

2014ರಲ್ಲಿ ತನ್ನಂತೆಯೇ ಬ್ಯೂಟಿ ಪೆಜೆಂಟ್ ಗಳಲ್ಲಿ ಭಾಗವಹಿಸಲು ಇಚ್ಚಿಸುವ ಮಹಿಳೆಯರಿಗಾಗಿ “ಜ್ಯೊತ್ಸನಾ ವೆಂಕಟೇಶ್ ಫಿಟ್ ನೆಸ್ ಮತ್ತು ಗ್ರೂಮಿಂಗ್  ಸಂಸ್ಥೆಯನ್ನ ಪ್ರಾರಂಭಿಸಿದರು. ಹಲವಾರ ಸಾಧಕರಿಗೆ ಗುರುವಾಗಿ..ಮಾರ್ಗದರ್ಶಕಿಯಾಗಿ ಗೆಲುವಿನ ಹಾದಿ ಹಿಡಿಯಲು ಪ್ರೇರಣೆ ಯಾದರು.

ಇವರಿಂದ ಗ್ರೂಮಿಂಗ್ ಪಡೆದು ಗೆಲುವಿನ ಶಿಖರವೇರಿದವರ ಪಟ್ಟಿ

• ಅಮೇರಿಕದ ಲಾಸ್ ವೇಗಸ್ ನಲ್ಲಿ ನಡೆದ ಬ್ಯೂಟಿ ಪೆಜೆಂಟ್ ಗೆ ಬೆಂಗಳೂರಿನ  ಗಾಯತ್ರಿ  ಸಂದೀಪ್ ರನ್ನು  ಗ್ರೂಮ್ ಮಾಡಿ.. Mrs. INDIA GLOBE  ಗೆಲ್ಲಲು ತಯಾರು ಮಾಡಿದರು.

• 2016ರಲ್ಲಿ ನಡೆದ Mrs.India Beauty Queen ಸ್ಪರ್ಧೆ ಗೆ Mrs.ಇಲೈಚಿ ಅವರನ್ನು  ಗ್ರೂಮ್ ಮಾಡಿ ಗೆಲ್ಲಿಸಿದರು.

• ದೆಹಲಿಯಲ್ಲಿ ನಡೆದ 2015ನೇ ಸಾಲಿನ Miss.Fitness ಪೆಜೆಂಟ್ ಗೆ ಗ್ರೂಮಿಂಗ್ ಎಕ್ಸ್ಪರ್ಟ ಆಗಿದ್ದರು.

• 2017ರ Mr.India Man Hunt ಸ್ಪರ್ಧೆ ಗೆ ಗ್ರೂಮಿಂಗ್ ಎಕ್ಸ್ಪರ್ಟ ಆಗಿದ್ದರು.

• 2016ನೇ ಸಾಲಿನ Mrs.INDIA GLOBE ವಿಜೇತೆ ವೀಣಾ ಜೈನ್ ಅವರನ್ನು ಗ್ರೂಮ್ ಮಾಡಿದ ಹೆಗ್ಗಳಿಕೆ ಇವರದು.

• ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನ ಸಿನಿತಾರೆ ನೇಹಾ ಸಕ್ಸೇನಾ ಅವರಿಗೂ ಸ್ಟೈಲಿಂಗ್ ಮಾಡಿದ ಕೀರ್ತಿ ಇವರದು.

• 2015ರಲ್ಲಿ ಮೊದಲ ಬಾರಿಗೆ KIDS FASHION WEEK  ಅನ್ನು ಆಯೋಜಿಸಿ ಮಕ್ಕಳ ಸ್ಟೈಲಿಂಗ್ ಮತ್ತು ಗ್ರೂಮಿಂಗ್ ನಲ್ಲೂ ಯಶಸ್ವಿಯಾದರು

• 2018ರಲ್ಲಿ ಬೆಂಗಳೂರು ಸೆಂಟ್ರಲ್ ನೊಂದಿಗೆ ಸೇರಿ  ತಮ್ಮ KIDS FASHIIN WEEK ನ ಎರಡನೇ ಅವತರಣಿಕೆ ಯಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ.

ನೀವೂ ಕೂಡಾ ಭಾಗವಹಿಸಬಹುದು

ಸದ್ಯ ತಮ್ಮ  ಮಹತ್ವಾಕಾಂಕ್ಷೆ ಯ “Mr & Mrs PROFESSIONALS” ಸ್ಪರ್ಧೆ   ಯಲ್ಲಿ ಬುಜಿ ಆಗಿದ್ದಾರೆ. ಜುಲೈ ತಿಂಗಳ ಕಡೆಯ ವಾರ ನಡೆಯುವ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಹಲವಾರು ರಂಗದ ಉದ್ಯೋಗಪತಿಗಳು ಸಾಲುಕಟ್ಟಿ ನಿಂತಿದ್ದಾರರೆ.. ನಿಮಗೂ ಬ್ಯೂಟಿ ಕ್ವೀನ್ ಆಗ ಬೇಕೆಂಬ ಕನಸು ಇದ್ದಲ್ಲಿ..ನೀವೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ವಯೋಮಾನದ ಅಥವಾ ಬಣ್ಣ-ಗಾತ್ರದ ಕಡಿವಾಣ ಇಲ್ಲ. ನೀವು ಹೇಗೇ ಇದ್ದರೂ ನಿಮ್ಮನ್ನು ಗ್ರೂಮ್ ಮಾಡಿ ರಾಂಪ್ ಮೇಲೆ ನೆಡೆಯುವ ಆತ್ಮವಿಶ್ವಾಸ ತಂದುಕೊಡುತ್ತಾರೆ ಗ್ರೂಮಿಂಗ್ ಎಕ್ಸ್ಪರ್ಟ ಜ್ಯೊತ್ಸನಾ ವೆಂಕಟೇಶ್.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version