ಲೈಫ್ ಸ್ಟೈಲ್
ನಿಲ್ಲದ ಬಾಹುಬಲಿ ಹಾವಳಿ ; ಕಿವಿ ಮೇಲೆ ಫ್ಲವರ್..!
ಮರುಕಳಿಸಿದೆ ಮಾಟಲೀ ಫ್ಯಾಷನ್!
ಹೆಣ್ಣು ಮಕ್ಕಳಿಗೂ ಆಭರಣಗಳಿಗೂ ಅವಿನಾಭಾವ ಸಂಬಂಧ ಅನ್ನಬಹುದು. ಹೆಣ್ಣಿನ ಸೌಂದರ್ಯಕ್ಕೆ ಕನ್ನಡಿ ಹಿಡಿದಂತೆ ಇರಬೇಕು ಆಕೆ ಧರಿಸುವುದರಿಂದ ಆಭರಣಗಳು. ಆಭರಣ ಚಿನ್ನದ್ದೇ ಆಗಬೇಕು ಅನ್ನುವುದು ಏನೂ ಇಲ್ಲ. ಈಗಂತೂ ಚಿನ್ನ ಅಲ್ಲದೇ ಅನ್ಯ ಲೋಹಗಳ ಆಭರಣ ಕ್ಕೆ ಭಾರೀ ಬೇಡಿಕೆ ಇದೆ.
ಆಭರಣ ಪ್ರಪಂಚದಲ್ಲಿ ಓಲೆ, ಝುಂಕಿ, ಬಲೆ, ಗೆಜ್ಜೆ ಡಾಬು, ಸರ, ಬೈತಲೆ ಬೊಟ್ಟು..ಹೀಗೆ ಹಲವಾರು ಬಗೆ ಬಗೆಯ ಆಭರಣಗಳನ್ನು ನೋಡಬಹುದು. ಕಿವಿ ಓಲೆ ಗಳಲ್ಲಿ ಹಲವಾರು ರೀತಿಯ ಫ್ಯಾಷನಬಲ್ ವಿನ್ಯಾಸಗಳು ನೋಡಬಹುದು. ಹಿಂದಿನ ಕಾಲದಿಂದಲೂ ಮಹಿಳೆ ಯರಿಗೆ ಅವರು ಧರಿಸುವು ಓಲೆ ಮೇಲೆ ಮಮಕಾರ ಜಾಸ್ತಿ. ಕಾಲ ಬದಲಾದಂತೆ ಕವಿ ಒಲೆಯ ವಿನ್ಯಾಸಗಳು ಬದಲಾದವು. ಹಿಂದೆ ಕಿವಿ ಯ ಅಲಂಕಾರಿಕ ಆಚರಣೆಗಳಲ್ಲಿ ಮಾಟಲಿಯೂ ಒಂದು.
ಕಿವಿಯಲ್ಲಿ ಒಂದಕ್ಕಿಂಥ ಹೆಚ್ಚು ರಂಧ್ರಗಳನ್ನು ಮಾಡಿಸಿಕೊಂಡು, ಕಿವಿಯ ತುಂಬಾ ಓಲೆಗಳನ್ನು ಧರಿಸಲಾಗುತ್ತಿತ್ತು. ವಿವಿಧ ರಂಧ್ರದ ಓಲೆಗಳನ್ನು ಸೇರಿಸುವ ಸರಪಳಿಯಂತೆ ” ಮಾಟಲಿ” ಯನ್ನು ಬಳಸಲಾಗುತ್ತಿತ್ತು . ಕಿವಿ ಮೇಲ್ಭಾಗದಲ್ಲೂ ರಂಧ್ರಗಳನ್ನು ಮಾಡಿ ಓಲೆಗಳನ್ನು ಹಾಕಲಾಗುತ್ತಿತ್ತು. ಕಾಲ ಬದಲಾದಂತೆ, ಫ್ಯಾಷನ್ ಬದಲಾದಂತೆ.. ಹೆಚ್ಚು ಓಲೆಗಳನ್ನು ಧರಿಸುವ ಫ್ಯಾಷನ್ ಕುಂದಿತು. ಕೇವಲ ಒಂದು ಓಲೆಯ ಸ್ಟೈಲ್ ಪ್ರತೀತಿಗೆ ಬಂತು..ನಂತರ ಮತ್ತೆ ಬದಲಾದಂತೆ ಫ್ಯಾಷನ್ ಲೋಕದಲ್ಲಿ ಓಲೆ ಹಾಕುವುದನ್ನೇ ನಿಲ್ಲಿಸಿದರು.. ಮತ್ತೆ ಫ್ಯಾಷನ್ ಮರುಕಳಿಸಿದೆ!
ಪ್ರತಿ ಎರಡು ದಶಕಗಳಿಗೊಮ್ಮೆ ಫ್ಯಾಷನ್ ಚಕ್ರ ತಿರುಗಿದಂತೆಲ್ಲಾ ಸ್ಟೈಲ್, ವಿನ್ಯಾಸಗಳು ಬದಲಾಗುತ್ತವೆ. ಹಿಂದನದ್ದು ಮತ್ತೆ ಮರುಕಳಿಸುತ್ತದೆ. ಅದಕ್ಕೆ “ಮಾಟಲಿ” ಯಾಗಿ ಮಿಂಚಿದ ಆಭರಣ ಇಂದು ” ಇಯರ್ ಖಫ್” ಆಗಿ ಮಾರ್ಪಾಟಾಗಿದೆ.
ಮಾಸದ ಮಾಟಲೀ ಫ್ಯಾಷನ್!
ಏನಿದು ಮಾಟಲಿಯೂ ಎಂದು ಸ್ಫುರಿಸುವವರೆಗೆ, ಇದು, ನಮ್ಮ ಅಜ್ಜಿ-ಮುತ್ತಜ್ಜಿಯರು ಧರಿಸುತ್ತಿದ್ದ ಕಿವಿಯ ಒಂದು ಆಭರಣ. ಕಾಲದ ಫ್ಯಾಷನ್ ಹೊಡೆತಕ್ಕೆ ಸಿಕ್ಕಿ ಮರೆಯಾಗಿ ಹೋಗಿದ್ದ ಅದೇ ಮಾಟಲಿ ಇಂದು” ಮಾರ್ಡನ್ ಸ್ಟೈಲಿಶ್ ಲುಕ್” ಎಂಬ ಬಿರುದಿನೊಂದಿಗೆ “ಇಯರ್ ಖಫ್” ಆಗಿ ಹೆಂಗಳೆಯರ ಕಿವಿ ಮೇಲೆ ಮೆರೆಯುತ್ತಿದೆ .
ಹಿಂದೆಲ್ಲಾ ಮಾಟಲಿ, ಆರರಿಂದ-ಏಳು ಇಂಚಿನ ತೆಳುವಾದ ಸರದಂತೆ ಕಂಗೊಳಿಸುತ್ತಾ.. ಕಿವಿಯ ಒಂದು ರಂಧ್ರದ ಓಲೆಯನ್ನು ತಲೆಯ ಕೂದಲಿಗೆ ಸೇರಿಸಿ ತೂಗಿಹಾಕುವ ಆಭರಣವಾಗಿದೆ. ಮದುವೆ,ನಿಶ್ಚಿತಾರ್ಥ ದಂತಹ ವಿಶೇಷ ಸಮಾರಂಭದಲ್ಲಿ ಇಂದಿಗೂ ವಿಶಿಷ್ಟ ವಿನ್ಯಾಸಗಳ ಟ್ರೆಂಡೀ ಮಾಟಲಿ ಬಳಕೆಯಲ್ಲಿದೆ. ಸ್ವಲ್ಪ ಬದಲಾದ ರೂಪದಲ್ಲಿ 2018 ರ ಫ್ಯಾಷನ್ ಫೆಸ್ಟಿವಲ್ ನಲ್ಲಿ ಮಾಟಲೀ ರಂಗಪ್ರವೇಶ ಮಾಡಿದೆ. “ಲಾಂಗ್ ಚೈನಾ ಟಾಸಲ್ ಇಯರ್ ಖಫ್” ಎಂಬ ನಾಮಕರಣ ಕೂಡಾ ಆಗಿದೆ. ಈ ರಂಗಬಿರಂಗೀ ಮಾಟಲಿಯೂ ಇಯರ್ ಖಫ್ ಗಳು ಸದ್ಯ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿವೆ.
ಇಯರ್ ಖಫ್ ಜಾದೂ!
ಈಗಂತೂ ವಿವಿಧ ವಿಶಿಷ್ಟ ವಿನ್ಯಾಸಗಳಲ್ಲಿ ಇಯರ್ ಖಫ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕಪ್ಪು ಲೋಹ, ಕಾಪರ್, ಕುಂದನ್, ..ಹೀಗೆ ಹತ್ತು ಹಲವಾರು ಬಗೆಗಳಲ್ಲಿ.. ಪ್ರಾಣಿ-ಪಕ್ಷಿ, ಹೂ-ಎಲೆ, ಟ್ರೈಬಲ್ ವಿನ್ಯಾಸಗಳಲ್ಲಿ ದೊರೆಯುತ್ತದೆ. ಕಿವಿಯನ್ನು ಅಲಂಕರಿಸುವ ಈ ಆಭರಣ..ಕಿವಿಯ ಮೇಲೆ ಹೂ ಅರಳಿದಂತೆ ಭಾಸವಾಗುತ್ತದೆ. ಹಿಂದಿನಂತೆ ಕಿವಿ ಯ ತುಂಬಾ ರಂಧ್ರಗಳನ್ನು ಮಾಡಿಸುವ ಅವಶ್ಯಕತೆ ಇಲ್ಲ. ಒಂದು ಓಲೆ ನಿಮ್ಮ ಇಡೀ ಕಿವಿಯನ್ನು ಅಲಂಕರಿಸುತ್ತದೆ. ಈ ಇಯರ್ ಖಫ್ ಜಾದೂವಿಗೆ ಮಾರಿಹೋಗಿರುವ ಹೆಂಗಳೆಯರು ಈ ರೀತಿಯ ಕಿವಿಯ ಫ್ಲವರ್ ಗಳನ್ನು ಕೊಳ್ಳುವಲ್ಲಿ ಬುಸಿಯಾಗಿದ್ದಾರೆ.
ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಯ್ತು ಫಂಕೀ ಇಯರ್ ಖಫ್ !
ಫ್ಯಾಷನ್ ಗೂ ಸೋಷಿಯಲ್ ಮೀಡಿಯಾ ಗೂ ಅದೇನೋ ಅನ್ಯೋನ್ಯ ಸಂಬಂಧ. ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆದ ಪ್ರತೀ ಫ್ಯಾಷನ್ ಕೂಡಾ ಸೂಪರ್ ಹಿಟ್!
ಇತ್ತೀಚೆಗೆ ಕೊರಿಯಾದ ಕುವರಿಯರು ಒಬ್ಬಳ ಕಿವಿಯ ಮೇಲೆ ಓಡಾಡಿದ ಸ್ಪೈಡರ್…ಎಲ್ಲರ ಗಮನ ಸೆಳೆಯುತ್ತಿದೆ. ಹೆದರಬೇಡಿ, ಈ ಸ್ಪೈಡರ್ ನಿಜವಾದದ್ದು ಅಲ್ಲ..ಸಿಲಿಕಾನ್ ಸ್ಪೈಡರ್ ಇಯರ್ ಖಫ್ ಈಗ ಸೋಷಿಯಲ್ ಮೀಡಿಯಾ ದಲ್ಲಿ ಸಕ್ಕತ್ ವೈರಲ್! ಬರೀ ಕೇಳು ಮಾತ್ರವಲ್ಲದೇ.. ಹಲ್ಲಿ! ಮೊಸಳೆ! ಊಸರವಳ್ಳಿ! ಹೀಗೇ ವಿಚಿತ್ರ ಎನಿಸುವ ವಿನ್ಯಾಸಗಳು ಇಯರ್ ಖಫ್ ರೂಪ ತಾಳಿವೆ.
ಸೆಲಿಬ್ರಿಟಿ ಖಫ್!
2016ರ ಬಾಹುಬಲಿ ಚಿತ್ರ ದ ದೇವಸೇನಾ ಪಾತ್ರದಲ್ಲಿ ಆಕರ್ಷಕ ಆಭರಣಗಳೊಡನೆ ಮಿಂಚಿದ ಅನುಷ್ಕಾ ಶೆಟ್ಟೆಯ ಆ ಲುಕ್.. ಕಣ್ಣು ಕೋರೈಸುವಂತಿತ್ತು. ಈ ಲುಕ್ ಗೆ ಫಿದಾ ಆದ ಯುವತಿಯರು ಇಂದು ಈ ಮಾಟಲಿ ಫ್ಯಾಷನ್ ಗೆ ಫುಲ್ ಖುಷ್!
ಇತ್ತೀಚೆಗೆ ಬಾಲಿವುಡ್ ನಟಿಯರಾದ ದೀಪಕಾ, ಪ್ರಿಯಾಂಕ, ಶ್ರದ್ಧ ಕಪೂರ್, ಆಲಿಯಾ ಭಟ್ ಕೂಡಾ ಇಯರ್ ಖಫ್ ಗೆ ಫುಲ್ ಫಿಟ್! ಸ್ಟೈಲಿಶ್ ಹಾಗೂ ಟ್ರೆಂಡ್ ಆಗಿರುವ ಈ ಆಭರಣವನ್ನು ನೀವು ಯಾವುದೇ ಉಡುಪಿನೊಂದಿಗೆ ಧರಿಸಬಹುದು.
ಹಾಗಾದರೆ ತಡ ಯಾಕೆ! ಕಿವಿಯ ಮೇಲೆ ಫ್ಲವರ್ ನೀವೂ ಇಟ್ಟು ನೋಡಿ.