ಸಿನಿ ಸುದ್ದಿ

ಕಲಾವಿದೆ ಲೈಂಗಿಕ ದೌರ್ಜನ್ಯ ಪ್ರಕರಣ : ಮಲಯಾಳಂ ಸಿನಿ ಕಲಾವಿದೆಯರು ಸಂಘದಿಂದ‌ ಹೊರಗೆ

Published

on

ಸಂಘದಿಂದ ಹೊರಬಂದ ನಟಿಯರು

ಸುದ್ದಿದಿನ ಡೆಸ್ಕ್: ಲಾವಿದೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣದಲ್ಲಿ ಭಾಗಿಯಾಗಿದ್ದ ಚಿತ್ರ ನಟ ದಿಲೀಪ್ ಕುಮಾರ್ ಅವರು ಮಲಯಾಳಂ ಚಿತ್ರ ಕಲಾವಿದರ ಸಂಘಕ್ಕೆ ಮತ್ತೆ ಮರಳಿದ ಹಿನ್ನೆಲೆಯಲ್ಲಿ ಮೂರು ನಟಿಯುರು ಸಂಘವನ್ನು ತೊರೆದು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೊಳಗಾದ ಪ್ರಕರಣವನ್ನು ಪ್ರಸ್ತಾಪಿಸಿದಾಗ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ ಸಂಘವು ಪುರುಷ ಪ್ರಾಬಲ್ಯ ಹಾಗೂ ಮಹಿಳಾ ವಿರೋಧಿ ಧೋರಣೆ ಹೊಂದಿದೆ ಎಂದು ಸಂಘದಿಂದ ಹೊರಬಂದ ನಟಿಯರಾದ ರಿಮಾ ಕಾಳಿಂಗಲ್, ರೆಮ್ಯಾ ನಂಬೀಸನ್, ಗೀತು ಮೋಹನ್ ದಾಸ್ ಹಾಗೂ ಸಂತ್ರಸ್ತೆ ತಿಳಿಸಿದ್ದು, ಇದೇ ಕಾರಣಕ್ಕೆ ತಾವು ಸಂಘದಿಂದ ಹೊರಬಂದಿದ್ದಾಗಿ ತಿಳಿಸಿದ್ದಾರೆ.
ಈ ಮೂವರು ನಟಿಯರು ತಮ್ಮ ಫೇಸ್‍ಬುಕ್ ಪುಟದಲ್ಲಿ ಮಲಯಾಳಂ ಕಲಾವಿದರ ಸಂಘದಲ್ಲಿ ನಡೆದಿರುವ ಅನ್ಯಾಯದ ವಿರುದ್ಧ ಬರೆಯುತ್ತಿದ್ದು, ಈ ಪೋಸ್ಟ್‍ಗಳು ವೈರಲ್ ಆಗುತ್ತಿವೆ.

ಮಲಯಾಳಂನ ಖ್ಯಾತ ನಟ ದಿಲೀಪ್ ಹಾಗೂ ಅವರ ಒಂಬತ್ತು ಮಂದಿ ಸ್ನೇಹಿತರು ನಟಿಯನ್ನು ಅಪಹರಿಸಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ತಿಳಿದುಬಂದಿತ್ತು. ಪ್ರಕರಣ ಸಂಬಂಧ ಸುನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತ ದಿಲೀಪ್ ಅವರು ಈ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಬಾಯ್ಬಿಟ್ಟಿದ್ದ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version