ರಾಜಕೀಯ

ಇಂದಿರಾರನ್ನು ಹಿಟ್ಲರ್ ಗೆ ಹೋಲಿಸಿದ ಜೇಟ್ಲಿ

ಇಂದಿರಾ ಅವರು ಹಿಟ್ಲರ್ ಗೆ ಹೋಲುತ್ತಾರೆ. ಪ್ರಜಾಪ್ರಭುತ್ವ ಮಟ್ಟ ಹಾಕಲು ಇಬ್ಬರೂ ಕೈಗೊಂಡ ನಿರ್ಣಯಗಳು ಒಂದೇ ರೀತಿ ಇವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಬ್ಲಾಗ್ ವೊಂದರಲ್ಲಿ ಬರೆದಿದ್ದಾರೆ.

Published

on

ಸುದ್ದಿದಿನ ಡೆಸ್ಕ್: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರನ್ನು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಗೆ ಹೋಲಿಸಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬರೆದಿರುವ ಲೇಖನವೊಂದು ವಿವಾದ ಹುಟ್ಟುಹಾಕಿದೆ.
ತುರ್ತು ಪರಿಸ್ಥಿತಿಯ 43ನೇ ವಾರ್ಷಿಕೋತ್ಸವದ ಅಂಗವಾಗಿ ಜೆಟ್ಲಿ ಅವರು ಈ ಬ್ಲಾಗ್ ಪ್ರಕಟಿಸಿದ್ದು, ಇದರಲ್ಲಿ ಇಂದಿರಾ ಅವರ ಬಗ್ಗೆ ಅವಹೆಳನಕಾರಿಯಾಗಿ ಟೀಕಿಸಿದ್ದಾರೆ.

ಹಿಟ್ಲರ್ ತಾನು ಸರ್ವಾಧಿಕಾರಿಯಾಗುವ ಸಲುವಾಗಿ ಜರ್ಮನಿಯ ಸಂಸತ್ ಭವನಕ್ಕೆ ಬಾಂಬ್ ಇಟ್ಟು ಉಡಾಯಿಸಿದ. ಅದೇ ರೀತಿ ಇಂದಿರಾ ಅವರು ತಾವು ಸರ್ವಾಧಿಕಾರಿ ಆಗುವ ಸಲುವಾಗಿ ಸಂವಿಧಾನವನ್ನು ತಮ್ಮ ಮುಷ್ಟಿಯಲ್ಲಿ ಹಿಡಿದುಕೊಂಡರು.

ದೇಶದ ಪ್ರತಿ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದು ಅನ್ಯಾಯ ಎಸಗಿದರು ಅವರಲ್ಲಿದ್ದ ಅಧಿಕಾರ ದಾಹವೇ ಇದಕ್ಕೆ ಕಾರಣ ಎಂದು ಟೀಕಿಸಿದ್ದಾರೆ.
ಹಿಟ್ಲರ್ ಹಾಗೂ ಇಂದಿರಾ ಇಬ್ಬರೂ ಸಂವಿಧಾನಕ್ಕೆ ಬೆಲೆ ಕೊಡಲಿಲ್ಲ. ಬದಲಾಗಿ ಪ್ರಜಾಪ್ರಭುತ್ವವನ್ನು ಸರ್ವಾಧಿಕಾರವಾಗಿ ಬದಲಿಸುವ ಸಲುವಾಗಿ ಗಣತಂತ್ರ ಸಂವಿಧಾನವನ್ನು ಅನುಸರಿಸಿದರು ಎಂದು ಬರೆದಿದ್ದಾರೆ.

ಮೋದಿ ಬೆಂಬಲ

ಜೆಟ್ಲಿ ಅವರ ಬ್ಲಾಗ್ ವೈರಲ್ ಆದ ಬೆನ್ನಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ತುರ್ತು ಪರಿಸ್ಥಿತಿಯ ಅನುಭವಗಳನ್ನು ಅವರು ದಾಖಲಿಸಿದ್ದಾರೆ ದಯವಿಟ್ಟು ಒಮ್ಮೆ ಓದಿ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version