ದಿನದ ಸುದ್ದಿ
ದಾವಣಗೆರೆ ವಿವಿ ಕುಲಸಚಿವೆಯಾಗಿ ಬಿ.ಬಿ.ಸರೋಜಾ ಅಧಿಕಾರ ಸ್ವೀಕಾರ
ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ನೂತನ ಕುಲಸಚಿವೆಯಾಗಿ ಬಿ.ಬಿ.ಸರೋಜಾ ಅವರು ಇಂದು ಅಧಿಕಾರ ಸ್ವೀಕರಿಸಿದರು.
ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ ಅವರು ಸರೋಜಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಸರೋಜ ಅವರು ಹಿರಿಯೂರಿನಲ್ಲಿ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಈ ಸಂದರ್ಭದಲ್ಲಿ ಹಂಗಾಮಿ ಕುಲಪತಿ ಪ್ರೊ. ಪಿ. ಲಕ್ಷಣ, ಪರೀಕ್ಷಾಂಗ ಕುಲಸಚಿವೆ ಪ್ರೊ. ಎಚ್.ಎಸ್.ಅನಿತಾ, ಹಣಕಾಸು ಅಧಿಕಾರಿ ಡಿ. ಪ್ರಿಯಾಂಕ, ದಾವಣಗೆರೆ ವಿ.ವಿ. ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ. ಎಚ್.ವಿಶ್ವನಾಥ, ಪ್ರಧಾನ ಕಾರ್ಯದರ್ಶಿ ಪ್ರೊ. ಜೆ.ಕೆ.ರಾಜು, ಉಪಾಧ್ಯಕ್ಷರಾದ ಪ್ರೊ. ಗೋಪಿನಾಥ, ಪ್ರೊ. ರವಿಕುಮಾರ ಪಾಟೀಲ, ಪ್ರೊ. ಮಹಾಬಲೇಶ್ವರ, ಡಾ. ಲೋಕೇಶ್, ಡಾ. ಸುನೀತಾ, ಡಾ. ಶಿವಲಿಂಗಪ್ಪ ಡಾ. ಮಲ್ಲಿಕಾರ್ಜುನ, ಡಾ. ಆಸೀಫ್ ಉಲ್ಲಾ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243