ದಿನದ ಸುದ್ದಿ
ತ್ರಿಪುರದ ನೂತನ ಮುಖ್ಯಮಂತ್ರಿಯಾಗಿ ಡಾ. ಮಾಣಿಕ್ ಸಹ ಇಂದು ಪ್ರಮಾಣ ವಚನ ಸ್ವೀಕಾರ
ಸುದ್ದಿದಿನ ಡೆಸ್ಕ್ : ತ್ರಿಪುರದ ನೂತನ ಮುಖ್ಯಮಂತ್ರಿಯಾಗಿ ಡಾ. ಮಾಣಿಕ್ ಸಹ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರು ನಿನ್ನೆ ಆಡಳಿತಾರೂಢ ಬಿಜೆಪಿ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಾ. ಮಾಣಿಕ್ ಸಹ ಆಯ್ಕೆಯಾಗಿ, ನೂತನ ಸರ್ಕಾರ ರಚನೆಗಾಗಿ ರಾಜ್ಯಪಾಲ ನರೇನ್ ಆರ್ಯ ಅವರನ್ನು ಭೇಟಿ ಮಾಡಿ, ಹಕ್ಕು ಮಂಡಿಸಿದರು.
69ವರ್ಷದ ದಂತವೈದ್ಯ ಮತ್ತು ರಾಜಕಾರಣಿಯಾಗಿರುವ ಸಹ ಅವರು, ಮುಂದಿನ 6 ತಿಂಗಳಲ್ಲಿ ವಿಧಾನಸಭೆಯಿಂದ ಆಯ್ಕೆಯಾಗಬೇಕಿದೆ. ಸಹ ಅವರು2021 ರಲ್ಲಿ ತ್ರಿಪುರ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮುನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಬಿಪ್ಲವ್ ಕುಮಾರ್ ದೇವ್ ಅವರು ನಿನ್ನೆ ರಾಜೀನಾಮೆ ಸಲ್ಲಿಸಿದರು.
ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರಿಗೆ ರಾಜೀನಾಮೆ ಪತ್ರ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಪ್ಲವ್ ಕುಮಾರ್ ದೇವ್, ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನಾ ಕಾರ್ಯದಲ್ಲಿ ತೊಡಗುವುದಾಗಿ ತಿಳಿಸಿದರು. 2023ರ ಫೆಬ್ರವರಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243