ದಿನದ ಸುದ್ದಿ
‘ಆಶಾ ನಿರೋಧ್’ ಹೆಸರು ಬದಲಿಸಿ ಸೂಚನೆ ನೀಡಿದ ಕೇಂದ್ರ
ಸುದ್ದಿದಿನ, ನವದೆಹಲಿ | ಕೊನೆಗೂ ಕೇಂದ್ರ ಸರ್ಕಾರ ‘ಆಶಾ ನಿರೋಧ್’ ಹೆಸರನ್ನು ಬದಲಿಸಿ, ಕೇವಲ ನಿರೋಧ್ ಎಂದು ಕರೆಯಲಾಗಿತ್ತದೆ ಎಂದು ಹೇಳಿದೆ.
ಈ ಸಂಗತಿಯ ಬಗೆಗೆ ಸ್ಪಷ್ಟನೆ ಕೊಟ್ಟಿರುವ ರಾಷ್ಟ್ರೀಯ ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕಿ ವಂದನಾ ಖಾರೆ ಅವರು, ” ಜುಲೈನಿಂದ ತಯಾರಾಗುವ ಹೊಸ ನಿರೋಧ್ ಗಳಿಗೆ, ನಿರೋಧ್ ಎಂಬ ಹೆಸರು ಮಾತ್ರ ಉಳಿಕೊಳ್ಳಲಿದೆ” ಎಂದು ತಿಳಿಸಿದ್ದಾರೆ.
ಜನರ ಆರೋಗ್ಯ ಕಾಪಾಡಲು ಗ್ರಾಮೀಣ ಪ್ರದೇಶದಲ್ಲಿ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತಿರುವ ಆಶಾಕಾರ್ಯಕರ್ತೆಯರು ಯಾರಿಗೆ ನಿರೋಧ್ ನ ಅವಶ್ಯಕತೆಯಿದೆಯೋ ಅವರಿಗೆ ನಿರೋಧ್ ಕೊಡಬೇಕು. ಹಾಗೇ ಅವರು ನಿರೋಧ್ ಹಂಚುವ ಕೆಲಸವನ್ನೂ ಮಾಡಬೇಕು. ಆದರೆ ಈ ನಿರೋಧ್ ಗೆ ‘ಆಶಾ ಕಾಂಡೋಮ್’ ಎಂದು ಹೆಸರಿಟ್ಟಿರುವುದು ಮುಜುಗರಕ್ಕೀಡು ಮಾಡಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9986715401