/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ದಾಂಪತ್ಯ ಜೀವನಕ್ಕೆ ಅಶ್ವಿನಿ ಅಂಗಡಿ

Published

on

ಸುದ್ದಿದಿನ ಡೆಸ್ಕ್: ವಿಶ್ವಸಂಸ್ಥೆಯ ಗ್ರಾಂಡ್ ಬ್ರೌನ್ ಪ್ರಶಸ್ತಿ, ಲಂಡನ್ ಮಹಾ ರಾಣಿಯುಂದ ಗೌರವ, ಮಲಾಲಾ ಜತೆ ವಿಶ್ವಸಂಸ್ಥೆ ಅಧಿವೇಶನದಲ್ಲಿ ಪಾಲ್ಗೊಂಡು ರಾಜ್ಯದ ಕೀರ್ತಿಯನ್ನು ಉತ್ತುಂಗಕ್ಕೆ ತಲುಪಿಸಿದ ಬೆಂಗಳೂರಿನ ದೃಷ್ಟಿ ವಿಳಚೇತನೆ ಅಶ್ವಿನಿ ಅಂಗಡಿ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಜುಲೈ 6ರಂದು ವೀರೇಶ್ ಎಂಬುವರನ್ನು ಅಶ್ವಿನಿ ಅವರು ಕೈ ಹಿಡಿಯುತ್ತಿದ್ದಾರೆ. ಅಂಧ ಮಕ್ಕಳ ಕಲ್ಯಾಣಕ್ಕಾಗಿ ಅಶ್ವಿನಿ ಅವರು ಸ್ಥಾಪಿಸಿರುವ ಬೆಳಕು ಫೌಂಡೇಷನ್ ವಿಶ್ವಾದ್ಯಂತ ಹೆಸರು ಮಾಡಿದೆ.

ಅಶ್ವಿನಿ ಅಂಗಡಿ ಮೂಲತಃ ಬಳ್ಳಾರಿ ಜಿಲ್ಲೆ, ಚೆಲಗುರ್ಕಿಯವರು. ಸದ್ಯ ಅವರು ಶೇಷಾದ್ರಿಪುರಂದಲ್ಲಿ ನೆಲೆಸಿದ್ದಾರೆ. ಆದ್ದರಿಂದ ಬೆಂಗಳೂರು ಹುಡುಗಿಯಾಗಿದ್ದಾರೆ.

ಹುಟ್ಟಿನಿಂದಲೇ ದೃಷ್ಟಿ ವಿಕಲಚೇತನರಾಗಿದ್ದ ಅಶ್ವಿನಿ ಜೆಪಿ ನಗರದಲ್ಲಿರುವ ರಮಣಶ್ರೀ ಅಂಧರ ಕೇಂದ್ರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಬಳಿಕ ಜಯನಗರದ ಎನ್‌ಎಂಕೆಆರ್ ವಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಮಹಾರಾಣಿ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version