ದಿನದ ಸುದ್ದಿ
ವಿಡಿಯೋ | ಮಹಿಳೆಯರ ಮೇಲೆ ಎಎಸ್ಐ ಹಲ್ಲೆ ಪ್ರಕರಣ : ಎಎಸ್ಐ ಸಸ್ಪೆಡ್
ಸುದ್ದಿದಿನ,ಬೆಂಗಳೂರು : ಜನವರಿ 20 ರಂದು ಕಾಟೇರಮ್ಮ ಅನ್ನೊ ಯುವತಿ ಕಂಟ್ರೋಲ್ ರೂಂ ಗೆ ಕರೆ ಮಾಡಿ, ಕೆಎಸ್ ಲೇಔಟ್ ನ ಹೋಟೆಲ್ ಒಂದರಲ್ಲಿ ಗಲಾಟೆ ನಡೀತಿದೆ ಬನ್ನಿ ಅಂತ ಹೇಳಿದ್ದರು.
ಸ್ಥಳಕ್ಕೆ ಪೊಲೀಸ್ರು ಹೋದಾಗ ಹೋಟೆಲ್ ಬಳಿ ಯುವತಿಯ ಸಂಬಂಧಿಕರು ಗಲಾಟೆ ಮಾಡ್ತಿದ್ರು.
ಕಾಟೇರಮ್ಮನಿಗೆ 11 ವರ್ಷ ಇದ್ದಾಗಲೇ ಪೋಷಕರು ಮದುವೆ ಮಾಡಿದ್ರು.ಹೀಗಾಗಿ ಆ ಹುಡುಗಿ ಆಂದ್ರದಿಂದ ಬಂದು ಬೆಂಗಳೂರಲ್ಲಿ ವಾಸ ಮಾಡ್ತಿದ್ಲು. ಹೋಟೆಲ್ ಬಳಿ ಹೋಗಿ ಆ ಹುಡುಗಿಯನ್ನ ಬಲವಂತವಾಗಿ ಎತ್ತಿಕೊಂಡು ಹೋಗಲು ಯತ್ನ ಮಾಡಿದ್ರು.
ತಾಯಿ ಜೊತೆ ಕಳಿಸಬೇಡಿ ಅಂತಾ ಆ ಯುವತಿ ಗೋಗರೆದಿದ್ರು. ಯುವತಿಯನ್ನ ರಕ್ಷಣೆ ಮಾಡಿ ಸ್ಟೇಷನ್ ಗೆ ಕರೆತಂದು ರಕ್ಷಣೆ ಕೊಡಲಾಗಿತ್ತು.ಈ ವೇಳೆ ಯುವತಿಯ ತಾಯಿ ಮತ್ತು ಕೆಲ ಸಂಬಂಧಿಕರು ಸ್ಟೇಷನ್ ನಲ್ಲಿ ಗಲಾಟೆ ಮಾಡಲು ಯತ್ನಿಸಿದ್ರು. ಪೊಲೀಸ್ರು ಕಾಟೇರಮ್ಮನಿಗೆ ರಕ್ಷಣೆ ನೀಡುವ ಸಲುವಾಗಿ ಪೋಷಕರನ್ನ ಠಾಣೆಯಿಂದ ಹೊರಗಡೆ ಕಳುಹಿಸುವ ಸಮಯದಲ್ಲಿ ಈ ಘಟನೆ ನಡೆದಿದೆ.
ಯುವತಿಯ ತಾಯಿ ಮತ್ತು ಸಂಬಂಧಿಕರು ಬಲವಂತವಾಗಿ ಸ್ಟೇಷನ್ ನಿಂದ ಯುವತಿಯನ್ನ ಎಳೆದೊಯ್ಯಲು ಪ್ರಯತ್ನಿಸಿದ್ರು. ಕಳಿಸದಿದ್ರೆ ಇಲ್ಲೇ ಆತ್ಮಹತ್ಯೆ ಕೂಡ ಮಾಡಿಕೊಳ್ತೀವಿ ಅಂತಾ ಬೆದರಿಕೆ ಹಾಕಿದ್ರು. ಈ ವೇಳೆ ಎಎಸ್ ಐ ರೇಣುಕಯ್ಯ ಮಹಿಳೆ ಮತ್ತು ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಆ ಕಾರಣ ಈ ಕೂಡಲೇ ಎಎಸ್ ಐ ರೇಣುಕಯ್ಯರನ್ನ ಸಸ್ಪೆಂಡ್ ಮಾಡಲಾಗಿದೆ. ಪೊಲೀಸ್ರು ಈ ತರಹದ ಕೆಲಸ ಮಾಡಬಾರದಿತ್ತು. ಅಲ್ಲದೇ ಇಲಾಖಾ ತನಿಕೆಗೂ ಕೂಡ ಆದೇಶ ನೀಡಲಾಗಿದೆ. ಬಾಲ್ಯ ವಿವಾಹ ಆಗಿರೊ ಬಗ್ಗೆ ಆಂದ್ರ ಪೊಲೀಸ್ರಿಗೂ ಕೂಡ ಮಾಹಿತಿ ನೀಡಲಾಗಿದೆ ಎಂದು ಡಿಸಿಪಿ ಅಣಾಮಲೈ ಹೇಳಿದ್ದರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401