ಕ್ರೀಡೆ

ಏಷ್ಯಾ ಕಪ್: ಫೈನಲ್ ಗೆ ಎಂಟ್ರಿ ಕೊಟ್ಟ‌ ಬಾಂಗ್ಲಾ ಹುಲಿ ಗಳು

Published

on

ಸುದ್ದಿದಿನ ಡೆಸ್ಕ್ : ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ಫೈನಲ್ ಪ್ರವೇಶ ಮಾಡಿದೆ.

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಕೊನೆಯ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾದೇಶ ಪಾಕಿಸ್ತಾನವನ್ನು 37 ರನ್ ಅಂತರದಿಂದ ಸೋಲಿಸಿ ಫೈನಲ್ ಗೆ ಎಂಟ್ರಿ ಕೊಟ್ಟಿದೆ.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮುಷ್ಫಿಕುರ್ ರಹೀಮ್ ಮತ್ತು ಮುಹಮ್ಮದ್ ಮಿಥುನ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 48.5 ಓವರ್ ಗಳಲ್ಲಿ 239 ರನ್ ಗಳಿಸಿತು. ಪಾಕ್ ಗೆ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿ ಸೋಲು ಅನುಭವಿಸಿತು

ಭಾರತ ಹಾಗೂ ಬಾಂಗ್ಲಾದೇಶ ಮುಖಾಮುಖಿ

ಮುಂದಿನ ಶುಕ್ರವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ತಂಡವು ಭಾರತವನ್ನು ಎದುರಿಸಲಿದೆ.

Trending

Exit mobile version