ಕ್ರೀಡೆ
ಏಷ್ಯ ಕಪ್ ಟೂರ್ನಿ: ಇಂದು ಭಾರತ ಹಾಗೂ ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ
ಸುದ್ದಿದಿನ ಡೆಸ್ಕ್: ಏಷ್ಯ ಕಪ್ ಟೂರ್ನಿಯ 5ನೇ ಪಂದ್ಯದಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನಗಳ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈಗಾಗಲೇ ಹಾಂಗ್ ಕಾಂಗ್ ವಿರುದ್ಧ ಜಯಗಳಿಸಿ ಏಷ್ಯ ಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಭಾರತ ತಂಡ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.
ಏಷ್ಯ ಕಪ್ ಟೂರ್ನಿಯ 5ನೇ ಪಂದ್ಯ ದುಬೈ ಕ್ರಿಕೆಟ್ ಗ್ರೌಂಡ್ ನಲ್ಲಿ ಸಂಜೆ 5ಕ್ಕೆ ಆರಂಭವಾಗಲಿದೆ. ಏಷ್ಯ ಕಪ್ ಟೂರ್ನಿಯಲ್ಲಿ ಈವರೆಗೆ 11 ಬಾರಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದು, ಎರಡು ತಂಡಗಳು 5 ಬಾರಿ ಜಯ ಗಳಿಸಿವೆ. ಈ ಬಾರಿ ಉತ್ತಮ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಪಡೆ ಜಯಯದ ಕೇಕೆ ಹಾಕುವ ವಿಶ್ವಾಸದಲ್ಲಿದ್ದು, ಭಾರತ ಕ್ರಿಕೆಟ್ ಅಭಿಮಾನಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.