ಕ್ರೀಡೆ
ಏಷ್ಯಾಡ್ ಬ್ಯಾಡ್ಮಿಂಟನ್ : ಸಿಂಧು ಫೈನಲ್ ಗೇರಿ ಇತಿಹಾಸ, ಕಂಚಿಗೆ ತೃಪ್ತಿ ಪಟ್ಟ ಸೈನಾ..!
ಸುದ್ದಿದಿನ, ಜಕಾರ್ತ : ಆಗಸ್ಟ್ 27: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯ ಮಹಿಳಾ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದಾರೆ.
ಸೋಮವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ 3ನೇ ರ್ಯಾಂಕಿಂಗ್ ಶಟ್ಲರದ ಸಿಂಧು, ವಿಶ್ವದ ನಂ.2 ಆಟಗಾರ್ತಿ ಜಪಾನ್‌ನ ಅಕಾನೆ ಯಮಗುಚಿ ಅವರನ್ನು 21-17, 15-21, 21-10 ಗೇಮ್‌ಗಳಲ್ಲಿ ಸೋಲಿಸಿದರು.
ಫೈನಲ್‌ನಲ್ಲಿ ಸಿಂಧು, ವಿಶ್ವದ ನಂ.1 ಆಟಗಾರ್ತಿ ತೈವಾನ್‌ನ ತಾಯ್ ಜು ಯಿಂಗ್ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಸೆಮಿಫೈನಲ್‌ನಲ್ಲಿ ತಾಯ್ ಜು ಯಿಂಗ್ ಭಾರತದ ಸೈನಾ ನೆಹ್ವಾಲ್ ರನ್ನು 21-17, 21-14ರ ನೇರ ಗೇಮ್‌ಗಳಲ್ಲಿ ಸೋಲಿಸಿದರು. ಉಪಾಂತ್ಯ ದಲ್ಲಿ ಸೋಲುಂಡ ಸೈನಾ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401