ಕ್ರೀಡೆ

ಏಷ್ಯನ್ ಗೇಮ್ಸ್ : ಬೋಪಣ್ಣ ಜೋಡಿ ಫೈನಲ್ ಗೆ

Published

on

ಸುದ್ದಿದಿನ, ಜಕಾರ್ತ: ಭಾರತದ ತಾರಾ ಟೆನಿಸ್ ಆಟಗಾರರಾದ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿ, ಏಷ್ಯನ್ ಗೇಮ್ಸ್ ಪುರುಷರ ಡಬಲ್ಸ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದೆ.

ಗುರುವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ಬೋಪಣ್ಣ ಮತ್ತು ದಿವಿಜ್ ಜೋಡಿ 4-6, 6-3, 10-8 ಸೆಟ್‌ಗಳಲ್ಲಿ ಜಪಾನ್‌ನ ಕೈಟೋ ಉಸುಗೀ ಮತ್ತು ಶೊ ಶಿಮಬುಕುರೊ ಜೋಡಿ ವಿರುದ್ಧ ಗೆಲುವು ಸಾಧಿಸಿತು.

ಪಂದ್ಯದ ಆರಂಭದಲ್ಲಿ ಉತ್ತಮ ಆಟವಾಡಿದ ಬೋಪಣ್ಣ ಜೋಡಿಗೆ, ಜಪಾನ್ ಆಟಗಾರರು ಮೊದಲ ಸೆಟ್ ನಲ್ಲಿ ಶಾಕ್ ನೀಡಿದರು. ಆದರೆ 2 ನೇ ಸೆಟ್ ನಲ್ಲಿ ಜಪಾನ್ ಆಟಗಾರರ ತಂತ್ರಕ್ಕೆ ತಿರುಗೇಟು ನೀಡುವಲ್ಲಿ ಭಾರತದ ಆಟಗಾರರು ಯಶ ಕಂಡರು.

ನಿರ್ಣಾಯಕ ಎನಿಸಿದ್ದ 3 ನೇ ಸೆಟ್ ನಲ್ಲಿ ಉಭಯ ತಂಡಗಳ ಆಟಗಾರರು ಜಿದ್ದಾ ಜಿದ್ದಿನ ಪೈಪೋಟಿ ನಡೆಸಿದರು. ಆದರೆ ಅಂತಿಮ ವಾಗಿ ಬೋಪಣ್ಣ ಜೋಡಿ 2 ಪಾಯಿಂಟ್ ಮುನ್ನಡೆ ಸಾಧಿಸಿ ಪಂದ್ಯ ಜಯಿಸಿತು.

ಸುದ್ದಿದಿನ.ಕಾಂ|ವಾಟ್ಸಾಪ್ |9986715401

Leave a Reply

Your email address will not be published. Required fields are marked *

Trending

Exit mobile version