ದಿನದ ಸುದ್ದಿ
ಅಸ್ಸಾಂ ಪ್ರವಾಹ : ಸುಮಾರು 57 ಸಾವಿರ ಜನರು ಬೀದಿ ಪಾಲು
ಸುದ್ದಿದಿನ ಡೆಸ್ಕ್ : ಅಸ್ಸಾಂನ ಏಳು ಜಿಲ್ಲೆಗಳಲ್ಲಿ ಪ್ರವಾಹದ ಮೊದಲ ಅಲೆಯಿಂದಾಗಿ ಸುಮಾರು 57 ಸಾವಿರ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಕಚರ್, ದೀಮಾಜಿ, ಪಶ್ಛಿಮ ಕಾರಿ ಅಂಗ್ಲಾಂಗ್, ಡಿಮಾ ಹಸಾವ್ ಜಿಲ್ಲೆಗಳಲ್ಲಿ ಪ್ರವಾಹದ ನೀರಿನಿಂದಾಗಿ ರಸ್ತೆ ಸಂಪರ್ಕಕ್ಕೆ ಅಡಚಣೆ ಉಂಟಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಸರ್ಕಾರದ ಆಶ್ರಯ ಶಿಬಿರಗಳಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ಆಶ್ರಯ ಪಡೆದಿದ್ದಾರೆ. ಜಿಲ್ಲಾಡಳಿತ ಅಗತ್ಯ ಆಹಾರ ಪದಾರ್ಥಗಳನ್ನು ವಿತರಿಸಿದೆ. ಈ ಮಧ್ಯೆ, ಈಶಾನ್ಯ ಫ್ರಾಂಟಿಯರ್ ರೈಲ್ವೇ ಲಂಬ್ಡಿಂಗ್ – ಬದರ್ ಪುರ್ ಹಿಲ್ ಸ್ಟೇಷನ್ ಗಳಲ್ಲಿ ಭಾರೀ ಮಳೆ ಹಾಗೂ ಭೂಕುಸಿತದಿಂದಾಗಿ ಹಲವಾರು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಭೂಕುಸಿತದಿಂದಾಗಿ ಮೂವರು ಮೃತಪಟ್ಟಿರುವ ಶಂಕೆಯಿದೆ.
ಸುದ್ದಿದಿನ.ಕಾಂ | ವಾಟ್ಸಾಪ್ | 9980346243