ದಿನದ ಸುದ್ದಿ

ಮಹಿಳೆ ಜತೆ ಅನುಚಿತ ವರ್ತನೆ: ತಹಸೀಲ್ದಾರ್ ಗೆ ಗೂಸಾ

Published

on

ಸುದ್ದಿದಿನ ಡೆಸ್ಕ್: ಕುಶಾಲನಗರದ ವಾಲ್ಮೀಕಿ ಭವನದ ಸಂತ್ರಸ್ತ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ಥರ ಗುಂಪೊಂದು ಸೋಮವಾರಪೇಟೆ ತಾ ತಹಸೀಲ್ದಾರ್ ಮಹೇಶ್ ರವರ ಮೇಲೆ ಹಲ್ಲೆ‌ ನಡೆಸಿದೆ.

ಕೇಂದ್ರದಲ್ಕಿ ಅವ್ಯವಸ್ಥೆಗಳ ಬಗ್ಗೆ ಸಂಜೆಯಿಂದ ಆಕ್ರೋಷ ವ್ಯಕ್ತಪಡಿಸುತ್ತಿದ್ದ ಸಂತ್ರಸ್ಥರನ್ನು ಪೊಲೀಸ್ ಅಧಿಕಾರಿಗಳು ಸಮಾಧಾನಪಡಿಸಿದ್ದರು. ರಾತ್ರಿ ೧೦ ಗಂಟೆ ವೇಳೆಗೆ ಸಂತ್ರಸ್ಥರ ಹಾಜರಾತಿ‌ ಪಡೆದುಕೊಳ್ಳಲು ತೆರಳಿದ ತಹಶೀಲ್ದಾರ್ ಮಹೇಶ್‌ ಮಲಗಿದ್ದ ಮಹಿಳೆಯರ ಮೈಮುಟ್ಟಿ ಎಬ್ಬಿಸಲು ಪ್ರಯತ್ನಿಸಿದರು ಎಂದು ಆರೋಪಿಸಿ ಸಂತ್ರಸ್ಥರ ಗುಂಪು ತಹಸೀಲ್ದಾರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಓಡಿ ತಪ್ಪಿಸಿಕೊಳ್ಳಲು ಮುಂದಾದ ಸಂದರ್ಭ ಗುಂಪಿನ ನಡುವಿನಿಂದ ತೂರಿ ಬಂದ ಕಲ್ಲು ತಹಸೀಲ್ದಾರ್ ಅವರ ಹಣೆಗೆ ಬಡಿದು ಗಾಯ ಉಂಟಾಗಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ‌ ನೀಡಿದ್ದರು. ತಹಸೀಲ್ದಾರ್ ನೀಡಿದ ದೂರಿನ‌ ಮೇರೆಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಸುರೇಶ್, ಸಂಜೀವ ಸೇರಿದಂತೆ ಇತರರ ವಿರುದ್ದ ಕರ್ತವ್ಯಕ್ಕೆ ಅಡ್ಡಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

Trending

Exit mobile version