ದಿನದ ಸುದ್ದಿ
ವಿಧಾನಸಭಾ ಚುನಾವಣೆ : ಅಂತಿಮ ಕಣದಲ್ಲಿರೋ ಅಭ್ಯರ್ಥಿಗಳೆಷ್ಟು ಗೊತ್ತಾ..?
ಸುದ್ದಿದಿನ ಡೆಸ್ಕ್ : ಮುಂದಿನ ತಿಂಗಳ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಅಂತಿಮ ಕಣದಲ್ಲಿ 2 ಸಾವಿರದ 613 ಅಭ್ಯರ್ಥಿಗಳಿದ್ದಾರೆ.
ಬಿಜೆಪಿ-224, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 223 , ಜೆಡಿಎಸ್-207, ಎಎಪಿ-209, ಬಿಎಸ್‌ಪಿ-133, ಸಿಪಿಐಎಂ-4, ಜೆಡಿಯು-8, ಎನ್‌ಪಿಪಿ-2, ನೋಂದಾಯಿತ ರಾಜಕೀಯ ಪಕ್ಷ-685 ಹಾಗೂ ಪಕ್ಷೇತರಾಗಿ-918 ಅಭ್ಯರ್ಥಿಗಳು ಸೇರಿದಂತೆ ಅಂತಿಮ ಕಣದಲ್ಲಿ 2 ಸಾವಿರದ 613 ಅಭ್ಯರ್ಥಿಗಳಿದ್ದಾರೆ.
ಇವರ ಪೈಕಿ 2 ಸಾವಿರದ 427ಪುರುಷ, 184 ಮಹಿಳೆಯರು ಇತರೆ ಇಬ್ಬರು ಅಭ್ಯರ್ಥಿಗಳಿದ್ದಾರೆ ಎಂದು ಆಯೋಗದ ಮೂಲಗಳು ತಿಳಿಸಿವೆ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 24 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.
ಯಮಕನಮರಡಿ, ದೇವದುರ್ಗ, ತೀರ್ಥಹಳ್ಳಿ, ಕುಂದಾಪುರ, ಕಾಪು, ಮಂಗಳೂರು, ಭಂಟ್ವಾಳ ಮತಕ್ಷೇತ್ರಗಳಲ್ಲಿ ಅತಿ ಕಡಿಮೆ ಐವರು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಿಂದ ಬಿಜೆಪಿ ಹಿರಿಯ ಮುಖಂಡ ಬಸವರಾಜ ಬೊಮ್ಮಾಯಿ, ಮೈಸೂರು ಜಿಲ್ಲೆಯ ವರುಣ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕನಕಪುರ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚನ್ನಪಟ್ಟಣದಿಂದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಸ್ಪರ್ಧೆಗಿಳಿದಿದ್ದಾರೆ.
ಉಮೇದುವಾರಿಕೆ ಹಿಂಪಡೆಯುವ ಪ್ರಕ್ರಿಯೆ ಮುಗಿದಿದ್ದು, ಕೊನೆಯ ದಿನ- 517ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 60 ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 56, ಹಾವೇರಿ-60, ರಾಮನಗರ ಜಿಲ್ಲೆಯ-4 ವಿಧಾನಸಭಾ ಕ್ಷೇತ್ರಗಳಿಂದ-59, ದಾವಣಗೆರೆ-61, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 70 ಅಭ್ಯರ್ಥಿಗಳು ಕಣದಲ್ಲಿದಾರೆ.
ಸುದ್ದಿದಿನ. ಕಾಂ | ವಾಟ್ಸಾಪ್ | 9980346243