ದಿನದ ಸುದ್ದಿ
ಕಾರ್ಮಿಕರ ವಿಮಾ : ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆ ಜಾರಿ
ಸುದ್ದಿದಿನ,ಶಿವಮೊಗ್ಗ : ಕೇಂದ್ರ ಸರ್ಕಾರವು ಕಾರ್ಮಿಕರ ವಿಮಾ ನಿಗಮದ ಮೂಲಕ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲ ಉದ್ದೇಶವು ನೊಂದಾಯಿತ ವಿಮಾ ಕಾರ್ಮಿಕರ ಹಲವಾರು ಕಾರಣಗಳಿಂದ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿರುವುದರಿಂದ ಅವರ ನಿರುದ್ಯೋಗ ಅವಧಿಗೆ ನಗದು ಪರಿಹಾರ ಒದಗಿಸುವ ಉದ್ದೇಶವಾಗಿರುತ್ತದೆ.
ಈ ಯೋಜನೆಯು ಜೂನ್ -2021ರ ಅಂತ್ಯದವರೆಗೆ ಜಾರಿಯಲ್ಲಿರುತ್ತದೆ. ನಿಗಮದಲ್ಲಿ ನೋಂಣಿಯಾದ ಕನಿಷ್ಠ 2 ವರ್ಷಗಳ ಅವಧಿಯಲ್ಲಿ ವಂತಿಗೆಯನ್ನು ಪಾವತಿಸಿ ನಿರುದ್ಯೋಗಿಯಾದ ದಿನಾಂಕದ ಪೂರ್ವ 2 ವರ್ಷಗಳಲ್ಲಿ ಕನಿಷ್ಠ 78 ದಿನಗಳ ವಂತಿಗೆ ಪಾವತಿಸಿರಬೇಕು.
ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಗಳ ಕಚೇರಿ, ಸೂಡಾ ಕಾಂಪ್ಲೇಕ್ಸ್, 2ನೇ ಮಹಡಿ, ವಿನೋಬನಗರ, ಶಿವಮೊಗ್ಗ, ದೂ.ಸಂ.: 08182-248940 ಹಾಗೂ ವೆಬ್‍ಸೈಟ್ www.esic.nic.in ನ್ನು ಸಂಪರ್ಕಿಸುವಂತೆ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243