ದಿನದ ಸುದ್ದಿ
ಕಾವೇರಿ ನದಿಗೆ ಅಟಲ್ ಚಿತಾಭಸ್ಮ
ಸುದ್ದಿದಿನ ಡೆಸ್ಕ್ | ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾ ಭಸ್ಮವನ್ನುದಕ್ಷಿಣದ ಗಂಗೆ ಕಾವೇರಿಯಲ್ಲಿ ಬಿಡಲು ತೀರ್ಮಾನ ಮಾಡಲಾಗಿದೆ.
ಆಗಸ್ಟ್ 23ರಂದು ಚಿತಾ ಭಸ್ಮ ವಿಸರ್ಜನೆ.
ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಡಿಸಿಎಂ ಆರ್. ಅಶೋಕ್ ಸೇರಿದಂತೆ ರಾಜ್ಯ ನಾಯಕರ ನೇತೃತ್ವದಲ್ಲಿ ನಡೆಯಲಿರೋ ಚಿತಾಭಸ್ಮ ವಿಸರ್ಜನೆ ಕಾರ್ಯಕ್ರಮ.
ಈಗಾಗಲೇ ಗಂಗಾನದಿಯಲ್ಲಿ ಚಿತಾಭಸ್ಮ ವಿಸರ್ಜನೆ ಮಾಡಿದ್ದು,ಇದೀಗ ದಕ್ಷಿಣ ಗಂಗೆ ಕಾವೇರಿ ಸೇರಲಿರೋ ವಾಜಪೇಯಿ ಚಿತಾಭಸ್ಮ. ಆಗಸ್ಟ್ 23 ರಂದು ವಾಜಪೇಯಿ ಅವ್ರ ಕನಸು ಗಂಗಾ ಕಾವೇರಿ ಜೋಡಣೆ ಆಗಿತ್ತು. ಹಾಗಾಗಿ ಕಾವೇರಿ ಚಿತಾ ಭಸ್ಮ ಕಾವೇರಿಯಲ್ಲಿ ಬಿಡಲು ನಿರ್ಧರಿಸಿರೋ ಬಿಜೆಪಿ ನಾಯಕರು.
ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಲೀನವಾಗಲಿರುವ ಅಜಾತ ಶತ್ರುವಿನ ಚಿತಾಭಸ್ಮ.
ಸುದ್ದಿದಿನ.ಕಾಂ|ವಾಟ್ಸಾಪ್|9986716401