ದಿನದ ಸುದ್ದಿ

ಗೋಧ್ರಾ ಮಸಿ ಮತ್ತಿಕೊಂಡಾಗಲೂ ಮೋದಿಯನ್ನು ಕ್ಷಮಿಸಿದ್ದ ಅಟಲ್

Published

on

ಸುದ್ದಿದಿನ ಡೆಸ್ಕ್: ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಈಗಲೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಗುಜರಾತ್‍ನ ಗೋದ್ರಾ ಹ್ಯಾಕಾಂಡ ನಡೆದ ನಂತರ ಮೋದಿ ಅವರು ಗುಜರಾತ್‍ನ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವುದರಲ್ಲಿದ್ದರು. ಆ ಕ್ಷಣದಲ್ಲಿ ಮೋದಿ ಅವರಿಗೆ ಕ್ಷಮಾಧಾನ ನೀಡಿ ದೊಡ್ಡ ಮನಸ್ಸಿ ಮಾಡಿದ್ದು ಅಟಲ್ ಬಿಹಾರಿ ವಾಜಪೇಯಿ.

ಗೋಧ್ರಾ ಹತ್ಯಾಕಾಂಡದಿಂದ ಬಿಜೆಪಿ ಕೈಗೆ ಮೆತ್ತಿಕೊಂಡ ರಕ್ತದ ಕಲೆ ಅಳಿಸುವುದು ಹೇಗೆಂದು ಪಕ್ಷದ ದಿಗ್ಗಜರಿಗೆ ದೊಡ್ಡ ತಲೆನೋವಾಗಿತ್ತು. ಕಮಲ ಪಾಳಯಕ್ಕೆ ಒಂದು ದೊಡ್ಡ ಮಟ್ಟದ ಆಘಾತ ತಂದೊಡ್ಡಿದ್ದ ಈ ಪ್ರಕರಣವು ಮೋದಿ ಹಾಗೂ ಅಮಿತ್ ಶಾ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿತ್ತು.
ಗುಜರಾತ್ ಸರಕಾರವೇ ಹಿಂದೂ ಕಾರ್ಯಕರ್ತರ ಮೇಲೆ ಕೈ ಮಾಡಕೂಡದು ಎಂದು ಪೊಲೀಸರಿಗೆ ಸೂಚನೆ ನೀಡಿತ್ತು ಹಾಗೂ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆಸುವ ದಾಳಿಗಳಿಗೆ ಪ್ರಚೋದನೆ ನೀಡಬೇಕೆಂದು ಹೇಳಿತ್ತು ಎಂಬ ದೊಡ್ಡ ಅಪವಾದವು ಮೋದಿ ಸರಕಾರಕ್ಕೆ ಅಂಟಿಕೊಂಡಿತ್ತು.
ಮೋದಿ ಅವರೇ ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದರಿಂದ ಪ್ರಕರಣದ ಹೊಣೆ ಹೊತ್ತು ಅವರು ರಾಜೀನಾಮೆ ಕೊಟ್ಟೇಬಿಡುತ್ತಾರೇನೋ ಎಂಬ ಆತಂಕವೂ ಆವರಿಸಿತ್ತು. ಗೋಧ್ರಾ ಹತ್ಯಾಕಾಂಡದ ಬಿಸಿ ಮುಟ್ಟುತ್ತಲೇ ಆಗ ಪ್ರಧಾನಿಯಾಗಿದ್ದ ವಾಜಪೇಯಿ ಅವರಿಂದ ಮೋದಿಗೆ ಒಂದು ಬುಲಾವ್ ಬಂತು.
ಎಲ್ ಕೆ ಆಡ್ವಾಣಿ ಅವರು ಮೋದಿ ಅವರನ್ನು ವಾಜಪೇಯಿ ಅವರ ಬಳಿ ಕರೆದುಕೊಂಡು ಹೋದರು. ಆ ದಿನ ಅಟಲ್ ಅವರು ಮೋದಿಯಿಂದ ರಾಜೀನಾಮೆ ಪಡೆಯಬೇಕೆಂದು ನಿಶ್ಚಯಿಸಿದ್ದರು. ಆಡ್ವಾಣಿ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಒಂದು ಸಭೆಯು ಫಲಪ್ರದವಾಗಿ ಮೋದಿ ಅವರನ್ನು ಅಟಲ್ ಕ್ಷಮಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version