ದಿನದ ಸುದ್ದಿ
ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ಹಲ್ಲೆ | ‘ಗೊಲ್ಲಾಳಪ್ಪ’ ಎಂಬ ‘ಗೂಂಡಾ ವಾರ್ಡನ್’
ಸುದ್ದಿದಿನ, ರಾಯಚೂರು : ಬಡ ವಿದ್ಯಾರ್ಥಿಗಳ ಭವಿಷ್ಯ ಹಸನಾಗಲ್ಲಿ ಅಂತ ಹೆತ್ತವರು ಮಕ್ಕಳನ್ನು ಹಾಸ್ಟಲ್ ಗಳಲ್ಲಿ ಬಿಡುತ್ತಾರೆ .ಬಡ ಕುಟುಂಬದ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಕ್ಕೆ ಮೂರೆ ಹೊಗ್ತಾರೆ ಆದ್ರೆ, ವಿದ್ಯಾರ್ಥಿಗಳಿಗೆ ಮುಟ್ಟುವ ಸೌಲಭ್ಯದ ಹಣವನ್ನು ಇಲ್ಲಿರುವ ಅಧಿಕಾರಿಗಳು ವಿದ್ಯಾರ್ಥಿಗಳ ಹೆಸರಿನಲ್ಲಿ ತಮ್ಮ ಖಾತೆ ಜಮ ಮಾಡಿಕೊಳ್ಳುತ್ತಿದ್ದಾರೆ.
ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಪಾಲಕರಾದ ಗೊಲ್ಲಾಳಪ್ಪ ಪೂಜಾರಿ ವಿದ್ಯಾರ್ಥಿಗಳ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ. ಹಾಸ್ಟೆಲ್ ಗಳ ವಿದ್ಯಾರ್ಥಿಗಳ ಮೇಲೆ
ಬೇಜವಾಬ್ದಾರಿ ವರ್ತನೆ ತೊರಿದ್ದಾನೆ .ಹಾಸ್ಟಲ್ ಗಳಲ್ಲಿ ಅವ್ಯವಸ್ಥೆ ಇದ್ದರು ಸಾಕಷ್ಟು ತೊಂದರೆಗಳಿದ್ದು ಸಹ ವಾರದಲ್ಲಿ ಒಂದು ಅಥವಾ ಎರಡು ಬಾರಿ ಹಾಸ್ಟೆಲ್ ಗೆ ಬಂದು ವಿದ್ಯಾರ್ಥಿಗಳಿಗೆ ಅವಾಚ್ಛ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡುತ್ತಾರೆ ಎಂಬುದು ವಿದ್ಯಾರ್ಥಿಗಳ ಅಳಲಾಗಿದೆ.
ವಿದ್ಯಾರ್ಥಿಗಳ ಪಾಲಕರಿಂದ ಮಕ್ಕಳನ್ನು ಹಾಸ್ಟೆಲ್ ಸೇರಿಸಲು ಮನಬಂದಂತೆ ಹಣ ವಸೂಲಿ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸಂಪೂರ್ಣವಾಗಿ ಹಾಸ್ಟೆಲ್ ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಹಾಸ್ಟೆಲ್ ಗೆ ಇಲ್ಲಿಯವರೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ತಾಲೂಕ ಮತ್ತು ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ.
ಭ್ರಷ್ಟಾಚಾರ ಮತ್ತು ಹಲ್ಲೆ ,ದೌರ್ಜನ್ಯ ಮಾಡಿರುವುದರ ಬಗ್ಗೆ ಸಾಕಷ್ಟು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದೆ ಕೇವಲ ವರ್ಗಾವಣೆ ಮಾಡಿ ಕೈ ತೊಳೆದುಕೊಳ್ಳುವುದರಿಂದ ಇಲಾಖೆಯು ಮೃದುಧೋರಣೆಯೇ ಮತ್ತಷ್ಟು ಭ್ರಷ್ಟಾಚಾರ, ಹಲ್ಲೆ ಮಾಡಲು ಸಹಕರಿಸಿದಂತಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಾರ್ಡ್‌ನ ಮೇಲೆ ಪ್ರಕರಣ ದಾಖಲಿಸುವಂತೆ ಪೋಲಿಸ್ ಠಾಣೆ ಮುಂದೆ ಪಟ್ಟು ಬಿಡದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು,ಆದರೂ ಕೂಡಾ ಯಾವುದೇ ಕ್ರಮ ಕೈಗೊಂಡಿಲ್ಲ .ತಾಲೂಕು ಹಿಂದುಳಿದ ವರ್ಗಗಳು ಕಲ್ಯಾಣಾಧಿಕಾರಿಗಳು ಬಂದು ಹಣ ಹಿಂತಿರುಗಿ ಸಿ ಕೊಡುತ್ತೇನೆ, ವರ್ಗಾವಣೆ ಮಾಡುತ್ತೆನೆ ಅಂತ ಸುಳ್ಳು ಹೇಳಿ ವಿಧ್ಯಾರ್ಥಿಗಳಿಗಳ ಬಾಳಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಇನ್ನದಾರೂ ಅಧಿಕಾರಿಗಳು ವಿಧ್ಯಾರ್ಥಿಗಳ ಸಮಸ್ಯೆ ಬಗೆಹರಿಸಿ ಅವರ ಓದಿಗೆ ಅನುಕೂಲ ಮಾಡಿಕೊಡಲಿ.