ದಿನದ ಸುದ್ದಿ

ಇ-ಕಾಮರ್ಸ್ ಡ್ರೋಣ್ ಬಳಕೆಗೆ ಅನುಮತಿ; ಇಂಗ್ಲಿಷ್ ಗೊತ್ತಿದ್ರೆ ಮಾತ್ರ ಪರ್ಮಿಷನ್

Published

on

ಸುದ್ದಿದಿನ ಡೆಸ್ಕ್: ಆನ್‌ಲೈನ್‌ನಲ್ಲಿ ಏನಾದ್ರು ಆರ್ಡರ್ ಮಾಡಿದರೆ ಇದನ್ನು ನಿಮಗೆ ತಲುಪಿಸಲು ಇನ್ಮುಂದೆ ನೀವು ಮನೆ ಬಾಗಿಲಿನಲ್ಲಿ ಡೆಲಿವರಿ ಬಾಯ್ ಬದಲು

ಡ್ರೋಣ್.ಗಾಗಿ ಕಾಯಬೇಕಾಗುತ್ತದೆ. ನಾಗರಿಕ ವಿಮಾನಯಾನ ಇಲಾಖೆಯು ಡ್ರೋಣ್ ನೀತಿ ಜಾರಿಗೆ ತಂದಿದ್ದು, ಕಮರ್ಷಿಯಲ್ ಬಳಕೆಗಾಗಿ ಅವಕಾಶ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳುವ ಇ- ಕಾಮರ್ಸ್ ಕಂಪನಿಗಳು ಡ್ರೋಣ್ ಬಳಸಿಕೊಂಡು ತಮ್ಮ ಉತ್ಪನ್ನ ಮಾರಾಟ ಮಾಡುವ ಸಾಧಗಯತೆ ಹೆಚ್ಚಾಗಿದೆ. ಇದರೊಂದಿಗೆ ಶೀಘ್ರ ಗ್ರಾಹಕರ ತಲುಪಿ ತಮ್ಮ ವಹಿವಾಟು ಹೆಚ್ಚಿಸಿಕೊಳ್ಳಲಿವೆ.

ಕೇಂದ್ರ ಸರ್ಕಾರ ವಿಮಾನಯಾನ ಇಲಾಖೆ ಇ- ಕಾಮರ್ಸ್ ಕಂಪನಿಗಳು ಡ್ರೋಣ್ ಬಳಕೆಯ ಯೋಜನೆಗೆ ಸಹಿ ಹಾಕಿದ್ದು, ಡಿಸೆಂಬರ್ ನಂತರ ಕಂಪನಿಗಳು ಇದರ ಪಡರದುಕೊಳ್ಳಲಿವೆ.

ಇಂಗ್ಲಿಷ್ ಗೊತ್ತಿದ್ರೆ ಮಾತ್ರ ಪರ್ಮಿಷನ್

ಸರ್ಕಾರ ರಚಿಸಿರುವ ಡ್ರೋಣ್ ನೀತಿಯಲ್ಲಿ ಡ್ರೋಣ್ ಗಳನ್ನು ಐದು ಕ್ಯಾಟಗರಿಗಳಾಗಿ ವಿಂಗಡಿಸಿವೆ. ನ್ಯಾನೋ ಕ್ಯಾಟಗರಿಯಲ್ಲಿ 250ಗ್ರಾಂರಿಂದ 150 ಕೆಜಿ ತೂಕದವರೆಗಿನ ಡ್ರೋಣ್, ಮಕ್ಕಳು ಆಟಿಕೆಯಾಗಿ ಬಳಸುತ್ತಿರುವ 250ರಿಂದ 2 ಕೆಜಿ ತೂಕದ ಮೈಕ್ರೋ ಡ್ರೋಣ್ ಗಳನ್ನು ಬಳಸಿಕೊಳ್ಳಲು ಅವಕಾಶ ನೀಡಿದೆ. ಎಲ್ಲ ಡ್ರೋಣ್ ಬಳಕೆದಾರರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಯುನಿಕ್ ಐಡೆಂಟಿಫಿಕೇಷನ್ ನಂಬರ್ (UIN) ನೀಡಲಿದೆ. ಡ್ರೋಣ್ ಬಳಕೆದಾರರಿಗೆ 18 ವರ್ಷ ವಯಸ್ಸಾಗಿರಬೇಕು. ಎಸ್ಸೆಸ್ಸೆಲ್ಸಿ ಪಾಸ್ ಆಗಿದ್ದು, ಇಂಗ್ಲಿಷ್ ಜ್ಞಾನ ಹೊಂದಿರಬೇಕು.

ನ್ಯಾನೋ, ಮೈಕ್ರೋ ವಿಧದಲ್ಲಿ ಐದು ಕ್ಯಾಟಗರಿ

ರಿಮೋಟ್ ಪೈಲೆಟೆಡ್ ಏರ್‌ಕ್ರಾಫ್ಟ್ ಸಿಸ್ಟಮ್ (RPAS) ಚಾಲಿತ ನ್ಯಾನೋ ಡ್ರೋಣ್.ಗಳಿಗೆ ಅನ್ ಮ್ಯಾನ್ಡ್ ಏರ್‌ಕ್ರಾಫ್ಟ್ ಆಪರೇಟರ್ ಪರ್ಮಿಟ್ (UAOP) ಪರವಾನಿಗೆ ಅಗತ್ಯವಿಲ್ಲ. 50 ಅಡಿ ಎತ್ತರದಲ್ಲಿ ಹಾರಾಟ ಮಾಡುವಂಥವು. 200 ಅಡಿ ಎತ್ತರದಲ್ಲಿ ಕಣ್ಣಿಗೆ ಕಾಣುವ ಅಂತರದಲ್ಲಿ ಹಗಲು ವೇಳೆ ಹಾರಾಟ ಮಾಡುವ ಡ್ರೋಣ್ ಗಳಿಗೆ ಸೆಕ್ಯುರಿಟಿ ಮತ್ತು ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯ ಪರವಾನಗಿ ಅಗತ್ಯವಿದೆ. 400ಅಡಿ ಎತ್ತರದವರೆಗೆ ಮಾತ್ರ ಹಾರಾಟ ಮಾಡಬಹುದಾಗಿದೆ.

ನೋ ಫ್ಲೈಯಿಂಗ್ ಜೋನ್ ಹಾರಾಡುವಂತಿಲ್ಲ

ದೇಶದಲ್ಲಿ ಕೆಲವೊಂದು ಪ್ರದೇಶಗಳನ್ನು ‘ನೋ ಫ್ಲೈಯಿಂಗ್ ಜೋನ್’ ಎಂದು ಗುರುತಿಸಿರುವ ಕಡೆ ಹಾರಾಟ ಮಾಡುವಂತಿಲ್ಲ. ಅವುಗಳೆಂದರೆ, ಏರ್ಪೋರ್ಟ್, ಅಂತಾರಾಷ್ಟ್ರೀಯ ಗಡಿಭಾಗ, ದೆಹಲಿಯ ವಿಜಯ್ ಚೌಕ್, ಎಲ್ಲಾ ರಾಜ್ಯಗಳ ರಾಜ್ಯ ಕಾರ್ಯದರ್ಶಿಗಳ ಕಚೇರಿ, ಸ್ಟ್ರಟೆಜಿಕ್ ಲೋಕೇಷನ್, ಮಿಲಿಟರಿ ಸ್ಥಳಗಳಲ್ಲಿ ಹಾರಾಟ ಮಾಡುವಂತಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version